
ಗಂಜಿಹಾಳ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಮ್,ಸಿ ಕಮಿಟಿಯ ಅಧ್ಯಕ್ಷರಾದ ಶ್ರೀ ಸಂಗಪ್ಪ ಬಸಪ್ಪ ಕನಕಣ್ಣನವರ ಒಬ್ಬ ಮಾಜಿ ಸೈನಿಕರು ೧೯೮೫ ರಿಂದ ಸೈನಿಕ ವೃತ್ತಿಯಲ್ಲಿ ದೇಶ ಸೇವೆ ಮಾಡಿ ಇಂದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೋಡಿಗಿಸಿಕೊಂಡು ಇಂದು ತಮ್ಮ ಸ್ವಂತ ವೆಚ್ಚದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಶಾಲೆಯನ್ನು ಕಂಗೊಳಿಸುವಂತೆ ಮಾಡಿದವರು, ಶಾಲೆಯ ಚಿತ್ರಣವನ್ನೆ ಬದಲಿಸಿದ ಕಿರ್ತಿ ಇವರಿಗೆ ಸಲ್ಲುತ್ತದೆ,

ಸ್ವಂತ ಗ್ರಾಮದವರಾದ ಸಂಗಪ್ಪನವರು ೨೦೧೮ ರಲ್ಲಿ ಶಾಲಾ ಸಮಿತಿ ಅಧ್ಯಕ್ಷರಾದ ನಂತರ ನಿರಂತರ ಕನ್ನಡ ಶಾಲೆಯ ಉಳಿವಿಗಾಗಿ ಅದರ ಅಳಿವಿಗಾಗಿ ಹೋರಾಟ ಮಾಡುತ್ತಾ ಕನ್ನಡ ಶಾಲೆಗೆ ಮಕ್ಕಳನ್ನು ಕಳಿಸಲು ಪಾಲಕರಲ್ಲಿ ಜಾಗೃತಿ ಮೂಡಿಸಿ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿದವರು, ಮಕ್ಕಳು ಆಸಕ್ತಿಯಿಂದ ಇಂದು ಶಾಲೆಗೆ ಬರುತ್ತಿದ್ದಾರೆ, ಪ್ರತಿ ವರ್ಷಕ್ಕಿಂತ ಈ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕಾರಣ ಶಾಲೆಯಲ್ಲಿ ಉತ್ತಮ ಗುರು ವೃಂದ ಹಾಗೂ ಕಲಿಕಾ ವ್ಯವಸ್ಥೆ ಉತ್ತಮವಾಗಿದೆ ,ಹೀಗಾಗಿ ನಿರಂತರ ಶಾಲೆಯ ಕಡೆ ಗಮನ ಹರಿಸಿ ಮಕ್ಕಳಿಗೆ ಉತ್ತಮ ಸುಸಜ್ಜಿತ ಊಟದ ವ್ಯವಸ್ಥೆ ಮಾಡಲಾಗಿದೆ,


೦೬ ಮತ್ತು ೦೭ ನೇ ತರಗತಿಯ ಮಕ್ಕಳು ಶಾಲೆಯಲ್ಲಿ ಬಿಸಿ ಊಟ ಮಾಡುತ್ತಿರುವುದು,
ಈ ಸರಕಾರಿ ಶಾಲೆಯಲ್ಲಿ ಶಾಲಾ ಮಕ್ಕಳ ಸಂಖ್ಯೆ ೧೬೭ ಇದ್ದು ಶಾಲಾ ಕೊಠಡಿಗಳ ಕೊರತೆ ಇದ್ದು ಸದ್ದೆಕ್ಕೆ ೦೬ ಕೊಟಡಿಗಳು ಇದ್ದು ಇದರಲ್ಲಿ ೨ ಮಾತ್ರ ಉತ್ತಮವಾಗಿವೆ ಉಳಿದ ಕೊಠಡಿಗಳು ಇಲ್ಲ ಒಟ್ಟು ೦೮ ಕೊಠಡಿಗಳ ಅವಶ್ಯಕತೆ ಇದ್ದು ಈ ಬಗ್ಗೆ ಶಾಲಾ ಸಮಿತಿ ಅಧ್ಯಕ್ಷರು ಸಂಗಪ್ಪನವರು ಶಾಸಕರಿಗೆ ಮನವಿ ನೀಡಿದ್ದು ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

ಒಟ್ಟು ೧೬೭ ಶಾಲಾ ಮಕ್ಕಳು ಇಲ್ಲಿ ಇದ್ದು ಶಿಕ್ಷರು ಕೇವಲ ೦೫ ಜನ ಶಿಕ್ಷಕರು ಇದ್ದಾರೆ ಇನ್ನೂ ೦೩ ಶಿಕ್ಷಕರ ಕೊರತೆಯನ್ನು ಶಾಸಕರು ನೀಗಿಸಬೇಕು ಎಂದು ಸಂಗಪ್ಪ ನವರು BB News ಮೂಲಕ ಶಾಸಕರಿಗೆ ಮನವಿ ಮಾಡಿದರು.

ಶಾಲೆಯಲ್ಲಿ ಸಮಿತಿ ಅಧ್ಯಕ್ಷ ಸಂಗಪ್ಪ ಕನಕಣ್ಣನವರ ಉತ್ತಮ ಪರಿಸಕ್ಕೆ ಒತ್ತು ನೀಡಿದ್ದಾರೆ. ಶಾಲೆಯಲ್ಲಿ ೦೧ ತೆಂಗಿನ ಮರ ನೆಟ್ಟು ಉತ್ತಮ ಪರಿಸರಕ್ಕೆ ಒತ್ತು ನೀಡಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ರಾಷ್ಟ್ರ ನಾಯಕರ ಪರಿಚಯ ಪುಟ ಚಿತ್ರಗಳು ಶಾಲೆ ಒಳಾಂಗಣದಲ್ಲಿ ಉತ್ತಮ ಚಿತ್ತಗಳು ಹೊರಾಂಗಣದಲ್ಲಿ ಚಿತ್ರಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಿವೆ , ಇವರ ಈ ಸಾಮಾಜಿಕ ಹಾಗೂ ಶಾಲೆ ಅಭಿವೃದ್ಧಿ ನೋಡಿ ಗ್ರಾಮದ ರೈತರಾದ ಶ್ರೀ ನೇಹರು ಹುಚ್ಚಪ್ಪ ಹೂನೂರು,ಹಾಗೂ ಶ್ರೀ ಸಂಗನಬಸಪ್ಪ ಹ ಬೇವೂರು, ಶ್ರೀ ನೀಲಪ್ಪ ಗದಿಗೇಪ್ಪ ಡೋಣಿ,ಶ್ರೀ ನಾಗಪ್ಪ ಅ ಒಗ್ಗದ ಶ್ರೀ ಧರಿಯಪ್ಪ ಜುಮ್ಮಣ್ಣ ಮೇಟಿ, ಶ್ರೀ ಸಂಗಪ್ಪ ರಾಮಪ್ಪ ಕಟಿಗಿ,ಶ್ರೀ ಪಾಪಣ್ಣ ಎ ಹೊಸಮನಿ ಇವರ ಕಾರ್ಯವನ್ನು ಪ್ರಶೌಂಸಿಸಿ ಅಭಿನಂದಿಸಿದರು,

ನಾಡಿನ ಸಮಸ್ತ ಜನತೆಗೆ ಹೀರೆಮಳಗಾವಿ ಸರಕಾರಿ ಶಾಲೆಯ SDMC ಶಾಲಾ ಸಮಿತಿ ಅಧ್ಯಕ್ಷನಾದ ನಾನು ಶ್ರೀ ಸಂಗಪ್ಪ ಬಸಪ್ಪ ಕನಕಣ್ಣನವರ ,ಹಾಗೂ ಶಾಲಾ ಸರ್ವ ಸದಸ್ಯರಿಂದ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀ ಕೆ,ವ್ಹಿ, ಮಡಿವಾಳರ ಇವರಿಂದ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಶ್ರೀ ಕೆ,ವ್ಹಿ,ಮಡಿವಾಳರ ಮುಖ್ಯ ಗುರುಗಳು ಸರಕಾರಿ ಪ್ರಾಥಮಿಕ ಶಾಲೆ ಹಿರೇಮಳಗಾವಿ, ಪೊನ್ ನಂಬರ ೮೬೧೮೩೯೮೦೮೫