
ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ
ಬಾಗಲಕೇಟೆ : ಇಂದು ಜಿಲ್ಲೆಯಲ್ಲಿ ವಾಹನ ಸವಾರರಿಗೆ ಪೋಲಿಸ್ ಇಲಾಖೆಯಿಂದ ತುಂಬಾ ತೊಂದರೆಯಾಗುತ್ತಿದೆ ಪ್ರತಿ ಒಂದು ಸಿಗ್ನಲ್ ಗೂ ಗಾಡಿಯನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ಗ್ರಾಹಕರನ್ನು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ ಆದ್ದರಿಂದ ಮೇನ್ ರೋಡ್ ಸರ್ಕಲ್ ಬಳಿ ಮಾತ್ರ ತಪಾಸಣೆ ಮಾಡಬೇಕು, ಎಂದು ಜಿಲ್ಲಾ ಅಧ್ಯಕ್ಷ ಬಂದಗಿಸಾಬ ಕೋಳ್ಳಿ ಜಿಲ್ಲಾ ಪೊಲೀಸ್ ವರಿಷಗಠಾಧಿಕಾರಿ ಜಗಲಸಾರ ಅವರಿಗೆ ಮನವಿ ಕೊಟ್ಟು ವಿನಂತಿಸಿದರು.
ಅಲ್ಲದೆ ಚಾಲಕರಿಗೆ ಹಲವು ಬಗೆಯ ಗೊಂದಲಗಳಿವೆ, ಚಾಲಕರು ಪಾಲಿಸಬೇಕಾದ ನಿಯಮಗಳನ್ನು ಪ್ರತಿಯೊಬ್ಬ ಚಾಲಕರಿಗೆ ವಿಷಯ ತಿಳಿಸಬೇಕು, ಯಾಕೆಂದರೆ ಗೂಡ್ಸ್ ಗಾಡಿ ಚಾಲಕರು ಪಾಲಿಸಬೇಕಾದ ನಿಯಮಗಳು ಏನು? ಹಾಗೂ ಪ್ಯಾಸೆಂಜರ್ ಗಾಡಿ ಚಾಲಕರು ಪಾಲಿಸಬೇಕಾದ ನಿಯಮಗಳೆನು? ಎಂಬುದನ್ನು ಅವರಿಗೆ ತಿಳಿಸಬೇಕು. ಅವರು ಅದನ್ನು ಪಾಲನೆ ಮಾಡುತ್ತಾರೆ ಯಾಕೆಂದರೆ ಖಾಕಿ ಬಟ್ಟೆ ಯಾರು ಹಾಕಿಕೊಳ್ಳಬೇಕು ವೈಟ್ ಬಟ್ಟೆಯನ್ನು ಯಾರು ಹಾಕಿಕೊಳ್ಳಬೇಕು ಯಾವರೀತಿ ಸಮವಸ್ತ್ರ ಧರಿಸಬೇಕು ಎಂಬುದರ ಬಗ್ಗೆ ಮಾಹಿತಿ ನಿಡಬೇಕು, ಯಾಕೆಂದರೆ ಲೋಕಲ್ ಚಾಲಕರಿಗೆ ಒಂದು ನ್ಯಾಯ, ತಾಲೂಕವಾರು ಹಳ್ಳಿಯಿಂದ ಬಂದ ಚಾಲಕರಿಗೆ ಒಂದು ನ್ಯಾಯ ಮಾಡುತ್ತಿದ್ದಾರೆ ಇದರಿಂದ ಬೆಸತ್ತ ಚಾಲಕರು ಈ ಒಂದು ವಿಷಯವನ್ನು ತಮ್ಮ ಹತ್ತಿರ ಪ್ರಸ್ತಾಪ ಮಾಡುತ್ತಿದ್ದೇವೆ, ಈ ಗೊಂದಲದಿಂದ ನಿಮ್ಮ ಇಲಾಖೆಗೆ ದಂಡ ಕಟ್ಟಿ ಕಟ್ಟಿ ಸಾಕಾಗಿದೆ ಸರಕಾರದಿಂದ ಈ ಬಗ್ಗೆ ಕಾನೂನು ತಿಳುವಳಿಗೆ ಹಾಗೂ ಚಾಲಕರ ರಸ್ತೆ ನಿಯಮಗಳ ಬಗ್ಗೆ ತರಬೇತಿಯನ್ನು ನೀಡಬೇಕು. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ,

ಗ್ರಾಹಕರು ಇಂದಿನ ಒತ್ತಡದ ಜೀವನದಲ್ಲಿ ತಮ್ಮ ತಮ್ಮ ಕರ್ತವ್ಯಕ್ಕೆ ಹೋಗಲು ಆಟೊಗಳನ್ನೆ ನಂಬಿದ್ದಾರೆ ಸಮಯದ ಅಭಾವದಿಂದ ನಮ್ಮ ಆಟೋ ರಿಕ್ಷಾ ಹಿಡಿದು ಹೋಗುವಾಗ ಆಗುವ ಈ ತೊಂದರೆಯಿಂದ ಶಾಶ್ವತ ಪರಿಹಾರ ನೀಡಲು ಮಾನ್ಯರು ಆಧ್ಯ ಗಮನ ಹರಿಸಬೇಕು ಎಂದು ಜಿಲ್ಲಾ ಕರ್ನಾಟಕ ಚಾಲಕರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು ಈ ಸಂಧರ್ಭದಲ್ಲಿ ಕರ್ಣಾಟಕ ಚಾಲಕರ ಒಕ್ಕೂಟ ರೀ ಸಂಸ್ಥಾಪಕ ರಾಜ್ಯಾಧ್ಯಕ್ಷರು ಜಿ ನಾರಾಯಣಸ್ವಾಮಿ ಅಣ್ಣಾವ್ರು ನೇತೃತ್ವದಲ್ಲಿ ಬಾಗಲಕೋಟ ಜಿಲ್ಲಾ ಅಧ್ಯಕ್ಷರು ಬಂದಗೀಸಾಬ ಕೊಳ್ಳಿ ಜಿಲ್ಲಾ ಗೌರವಾಧ್ಯಕ್ಷರು ಕೂಡ್ಲೆಪ್ಪ ಶಿಕ್ಕೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶಿಮ ಪೆಂಡಾರಿ ಜಿಲ್ಲಾ ಉಪಾಧ್ಯಕ್ಷರು ರಮೇಶ್ ಮೂಲಿಮನಿ ಜಿಲ್ಲಾ ಖಜಾಂಚಿ ಈರಣ್ಣ ಮುಚಕಂಡಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರು ಮಲ್ಲು ಪೂಜಾರಿ ಹಾಗೂ ಹುನಗುಂದ ತಾಲೂಕಾ ಅಧ್ಯಕ್ಷರು ಹನುಮಂತ್ ಎಲ್ ಮಲಗನ್ ತಾಲೂಕಾ ಉಪಾಧ್ಯಕ್ಷರು ಅಮರೇಶ್ ಬಂಡ್ರಗಲ್ ಹಾಗೂ ಇನ್ನುಳಿದ ಪದಾಧಿಕಾರಿಗಳು ಮತ್ತು ಬಾಗಲಕೋಟೆ ಜಿಲ್ಲೆಯ ಸದಸ್ಯರು ಹಾಜರಿದ್ದರು.
ವರದಿ : ಹಾಜಿಮಸ್ತಾನ್ ಬದಾಮಿ