ಅಮೀನಗಡ : ಇಂದು ಮಕರ ಸಂಕ್ರಾಂತಿಯ ಅಂಗವಾಗಿ ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ವತಿಯಿಂದ ನೂತನ ಪಟ್ಟಣ ಪಂಚಾಯತ ಸದಸ್ಯರಿಗೆ ಸರಳ ಸನ್ಮಾನ ಸಮಾರಂಭ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕರದಂಟು ನಗರದ ಜನಕ , ಯುತ್ ಐಕಾನ್ ನೂತನ ಪ,ಪಂ, ಸದಸ್ಯರಾದ ಸಂತೋಷ ಐಹೊಳ್ಳೆ ಅವರು ನಿನ್ನೆಯ ದಿನ ವೀರಸನ್ಯಾಸಿಯಾದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಸದಸ್ಯರ ಸನ್ಮಾನ ಕಾರ್ಯಕ್ರಮ ಇದ್ದ ಕಾರಣ ಎರಡು ಒಂದೇ ಸಮಯದಲ್ಲಿ ಇದ್ದುದ್ದರಿಂದ ಬರಲು ಆಗಲಿಲ್ಲ ,ಇಂದು ಸಂಕ್ರಾಂತಿಯ ಸಂಭ್ರಮದಲ್ಲಿ ನನ್ನನ್ನು ಕರೆದು ಈ ಸಮಾರಂಭದ ಉದ್ಘಾಟನೆ ಮಾಡಿಸಿ ಗೌರವಿಸಿದ್ದಕ್ಕಾಗಿ ನಾನು ಧನ್ಯಾವಾದ ಹೇಳುತ್ತೇನೆ. ಯಾವತ್ತು ನಿಮ್ಮ ಶಿಕ್ಷಣ ಸಂಸ್ಥಯ ಜೊತೆಗೆ ನಾವು ಇದ್ದೇವೆ ಏನೇ ಸಹಕಾರ ಸಹಾಯ ಇದ್ದರು ಮಾಡತಿವಿ ಎಂದು ಎಲ್ಲರಿಗೂ ಸಂಕ್ರಮಣದ ಶುಭಾಶಯ ಕೋರಿದರು.

ಮುಖ್ಯಾಥಿತಿಗಳಾಗಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಯುವ ನಾಯಕ ಹಾಗೂ ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ವಿಜಯಕುಮಾರ್ ಎಸ್ ಕನ್ನೂರು ಅವರು ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಾಟ್ಟಾಗಿ ಶ್ರಮಿಸುತ್ತೇವೆ.ಅಲ್ಲದೆ ಸಾರ್ವಜ ನಿಕರಿಗೆ ಒಂದು ಉತ್ತಮ ಮಾದರಿ ಆಡಳಿತ ವ್ಯವಸ್ಥೆಯನ್ನು ಮಾಡಲಿದ್ದೇವೆ. ಇಲ್ಲಿ ಜಾತಿ,ಧರ್ಮ,ಪಕ್ಷಾತೀ ತವಾಗಿ,ಕರ್ತವ್ಯ ಮಾಡುತ್ತೇವೆ,ಸ್ಥಳೀಯ ಎಲ್ಲಾ ಸಂಘಸಂ ಸ್ಥೆಗಳು,ಪತ್ರಕರ್ತರು ನಿಮ್ಮೆಲ್ಲರ ಸಹಕಾರ ಇದ್ದರೆ ಈ ನಗರವನ್ನು ಮಾದರಿ ನಗರವನ್ನಾಗಿ ಮಾಡುತ್ತೇವೆ,ಎಂದರು.

ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯ ಕೋರಿದರು.ಈ ಸರಳ ಸನ್ಮಾನ ಸಮಾರಂಭ ದಲ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀಮತಿ ಫಾತೀಮಾ,ಡಿ ಅತ್ತಾರ,ಶ್ರೀ ಸಂಜಯ್ ಐಹೊಳೆ,ಶ್ರೀ ಶಂಕರಗೌಡ ಗೌಡರ, ಅನೇಕರಿಗೆ ಸನ್ಮಾನ ಮಾಡಲಾಯಿತು. ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶಾಂತಾದೇವಿ, ಡಾ: ಪ್ರಶಾಂತ ನಾಯಕ,ಶ್ರೀ ಡಿ,ಬಿ,ವಿಜಯ ಶಂಕರ್, ಶ್ರೀ ಡಿ,ಫಿ,ಅತ್ತಾರ, ಅನೇಕರು ಉಪಸ್ಥಿತಿ ಇದ್ದರು.







ಅಮೀನಗಡ ನಗರದ ಭಾರತೀಯ ಜನತಾ ಪಕ್ಷದ ಮುಖಂಡರಾದ ಶ್ರೀಮತಿ ರೇಣುಕಾ ಪಿ ರಾಠೋಡ,ಅವರಿಗೆ ಗೌರವ ಸನ್ಮಾನ
