ರಾಜ್ಯದ ಪಂಚಾಯತ್ ರಾಜ್ ಇತಿಹಾಸದಲ್ಲೇ ಮೊದಲ ಬಾರಿಗೆ ಪತ್ನಿ-ಪತಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಇಂಥದ್ದೊಂದು ಅಪರೂಪದ ಪ್ರಕರಣ ಹುಬ್ಬಳ್ಳಿ ತಾಲೂಕು ವರೂರ ಗ್ರಾಪಂನಲ್ಲಿ ನಡೆದಿದೆ. ಅಧ್ಯಕ್ಷೆಯಾಗಿ ಪತ್ನಿ ವಿಶಾಲಾಕ್ಷಿ ಚನ್ನಬಸಗೌಡ ಹನಮಂತಗೌಡರ, ಉಪಾಧ್ಯಕ್ಷರಾಗಿ ಪತಿ ಚನ್ನಬಸಗೌಡ ಚನ್ನಬಸನಗೌಡರ ಅವಿರೋಧ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಮೊದಲ ಬಾರಿಗೆ ಗ್ರಾಪಂಗೆ ಚುನಾಯಿತರಾಗಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
https://bayalubirugali.com/2021/02/03/petrol-diesel-prices-increasing-donkey-horsebacked-people/
ಅಧ್ಯಕ್ಷೆ ವಿಶಾಲಾಕ್ಷಿ ಪಂಚಾಯತ್‌ನ 1 ನೇ ವಾರ್ಡ್ ಹಾಗೂ ಉಪಾಧ್ಯಕ್ಷ ಚನ್ನಬಸನಗೌಡ 2ನೇ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಡಿಗೇರ ತಿಳಿಸಿದ್ದಾರೆ,
ಆಯ್ಕೆಯಾದ ಬಳಿಕ ದೂರವಾಣಿ ಮೂಲಕ ಬಿಬಿ ನ್ಯೊಜ್, ಜೊತೆಗೆ ಮಾತನಾಡಿದ ಉಪಾಧ್ಯಕ್ಷ ಚನ್ನಬಸನಗೌಡ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ನೀವೆ ಆಯ್ಕೆಯಾಗಬೇಕೆಂದು ಇಡೀ ಊರಿನ ಜನರು ಬಹಳ ವಿಶ್ವಾಸದಿಂದ ತಿಳಿಸಿದರು. ಅದರಂತೆ ಜನರೇ ನಮ್ಮನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡರು. ಬಹಳ ಖುಷಿಯಾಗುತ್ತದೆ. ಎಲ್ಲಾ ಸದಸ್ಯರು ಕೂಡ ನಮ್ಮ ಬೆಂಬಲಕ್ಕೆ ನಿಂತಿದ್ದರಿಂದ ಇದೆಲ್ಲ ಸಾಧ್ಯವಾಯಿತು ಎಂದು ಹೇಳಿದರು.ಈ ಸಂಧರ್ಭದಲ್ಲಿ ನಮ್ಮನು ಆಯ್ಕೆ ಮಾಡಲು ಶ್ರಮಿಸಿದ ಎಲ್ಲಾ ನಮ್ಮ ಗ್ರಾಮದ ಗುರು- ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ಎಂದರು ಸಮಗ್ರ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದರು.
https://bayalubirugali.com/2021/02/03/haryana-left-leader-of-jjp-in-support-of-peasant-struggle/
ಹಿಂದಿನ ಚುನಾವಣೆಯಲ್ಲಿ 18 ಮತಗಳಿಂದ ಸೋಲು ಅನುಭವಿಸಿದ್ದೆ. ಬಿದ್ದ 33 ಮತಗಳು ತಿರಸ್ಕೃತವಾಗಿದ್ದರಿಂದ ಸೋಲು ಕಾಣಬೇಕಾಯಿತು. ಈ ಸಲ ಜನರೇ ಗಂಡ-ಹೆಂಡ್ತಿ ಎಲೆಕ್ಷನ್ ನಿಲ್ಲುವಂತೆ ಸಲಹೆ ನೀಡಿದ್ದರು ಎಂದು ಹೇಳಿದರು.

ಪತ್ನಿ ಹಾಗೂ ಪತಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ವರೂರ ಗ್ರಾಮ ಪಂಚಾಯತ ಚುಕ್ಕಾಣೆ ಹಿಡಿದಿರುವುದು ವಿಶೇಷವಾಗಿದೆ ಎಂದು ಪಿಡಿಓ ತಿಳಿಸಿದರು. ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.