
,ಅಮೀನಗಡ :
ಇಂದು ನಗರದ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿಸಿ. ಟ್ರಸ್ಟ್ (ರಿ) ಹುನಗುಂದ ಇವರಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಕಾರ್ಯಕ್ರಮ ನಡೆಯಿತು.
ಹುನಗುಂದ ತಾಲೂಕಿನ ಅನೇಕ ಗ್ರಾಮಗಳಿಂದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮವನ್ನು ಶಾಸಕ ಡಾ: ವಿಜಯಾನಂದ ಕಾಶಪ್ಪನವರು ಉದ್ಘಾಟನೆ ಮಾಡಬೇಕಿತ್ತು ಕಾರಣಾಂತರಗಳಿಂದ ಅವರು ಬರದೇ ಇದ್ದುದ್ದಕ್ಕಾಗಿ ಚಂದ್ರಶೇಖರ್ ಜೆ, ಹಾಗೂ ಪಿಸೆ್ಐ ಜ್ಯೋತಿ ವಾಲಿಕಾರ ಅವರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಬೇಬಿ ರಮೇಶ ಚವ್ಹಾಣ ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಚಂದ್ರಶೇಖರ ಜೆ ಹಾಗೂ PSI ಶ್ರೀಮತಿ ಜ್ಯೋತಿ ವಾಲಿಕಾರ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳು : ಶರಣ ಶ್ರೀ ಪಾರ್ವತಿ ಪರಮೇಶ್ವರಿ ಚೋಳಚಗುಡ್ಡ ವೇದಾಶ್ರಮ ಅಮೀನಗಡ. ಹಾಗೂ ಅಥಿತಿಗಳಾಗಿ ಶ್ರೀ ಚನ್ನಕೇಶವ ,ಜಿಲ್ಲಾ ನಿರ್ದೆಶಕರು ಬಾಗಲಕೋಟೆ, ಹಾಗೂ

ಶ್ರೀಮತಿ ಮಂಜುಳಾ ಕಳ್ಳಿಮಠ, ಹಾಗೂ ಶ್ರೀಮತಿ ವಿಜಯಲಕ್ಷ್ಮೀ ತತ್ರಾನಿ, ಹಾಗೂ ಈ ಸಂಸ್ಥೆಯ ಅಪಾರ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಈ ಸಭೆ ಉದ್ದೇಶಿಸಿ ಚಂದ್ರಶೇಖರ್ ಜೆ, ಹಾಗೂ ಪಿಎಸ್ಐ ಶ್ರೀಮತಿ ಜ್ಯೋತಿ ವಾಲಿಲಾರ, ಹಾಗೂ ಚನ್ನಕೇಶವ ಅವರು ಹಾಗೂ ಶರಣಶ್ರೀ ಪಾರ್ವತಿ ಅಮ್ಮನವರು ಬಹಳ ಅದ್ಬುತ ವಿಚಾರಗಳನ್ನು ಇಲ್ಲಿ ಮಂಡಿಸಿದರು. ಧರ್ಮಸ್ಥಳ ಸಂಘದ ಮಹಿಳೆಯರಿಂದ ಸಂಸ್ಕೃತಿಕ ಕಾರ್ಯಕ್ರಮ ನೆರವೇರಿತು

ವರದಿ : ಮುಸ್ತಪ್ ಮಾಸಾಪತಿ