
ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಎಚ್,ಮೈನ್ಸ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನ್ನು ಆಚರಿಸಲಾಯಿತು. ಹಲವಾರು ಮಹಿಳಾ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ವಿಶೇಷ ವಾಗಿ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸನ್ಮಾನ್ಯ ಶ್ರೀಮತಿ ಜ್ಯೋತಿ ಆರ್ ಸರಡಗಿ ಅವರು ಹೆಣ್ಣು ಮಕ್ಕಳು ಸಮಾಜದಲ್ಲಿ ಪುರುಷರಿ ಕ್ಕಿಂತ ಒಂದು ಹೆಜ್ಜೆ ಮುಂದೆನೆ ಇದ್ದಾಳೆ,

ಇಂದಿನ ದಿನಮಾನದಲ್ಲಿ ಈ ಸಮಾಜದಲ್ಲಿ ಬೆರಳೆಣಿಕೆ ಯಷ್ಟು,ಮಾತ್ರ ಮಹಿಳೆಯರು ಮುಂದೆ ಬಂದ್ರೆ ಆಗಲ್ಲ ಪ್ರತಿಯೊಬ್ಬ ಮಹಿಳೆ ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು,ಸಂಸ್ಕಾರ ಕೊಡಬೇಕು ಈ ಸಮಾಜದಲ್ಲಿ ಹೆಣ್ಣಿಗೆ ತುಂಬಾ ಗೌರವ ಇದೆ ಅದನ ನಾವು ನಮ್ಮ ಉಡುಗೆ ತೊಡುಗೆಗ ಳಿಂದ ಅಗೌರವ ತರುವಂತೆ ನಡೆದುಕೊಳ್ಳ ಬಾರದು, ಹೆಣ್ಣು ಹೆಣ್ಣಿಗೆ ಶತ್ರು ಎಂಬ ವಾಣಿಯನ್ನು ನಾವು ಸುಳ್ಳು ಮಾಡಬೇಕು ಹೆಣ್ಣು ಈ ಜಗದ ಕಣ್ಣು ,ಮನೆ ಬೆಳಗುವ ಮಹಾಲಕ್ಷ್ಮೀ ಅಂತಹ ಸ್ಥಾನವನ್ನು ಈ ಸಮಾಜ ನಮಗೆ ಕೊಟ್ಟಿದೆ,ಅದನ ನಾವು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಬಾಳಬೇಕು ಎಂದರು.

ನಾವೆಲ್ಲರೂ ಈ ದಿನಾಚರಣೆ ಅಂಗವಾಗಿ ನಮ್ಮ ತನದ ಬಗ್ಗೆ ನಾವು ಇಂದು ಚಿಂತನೆ ಮಾಡಬೇಕಾಗಿದೆ, ಎಲ್ಲರೂ ಈ ಸಮಾಜದಲ್ಲಿ ಮಾದರಿಯಾಗಿ ಒಬ್ಬರಿಗೊಬ್ಬರು ಸಹಾಯ ಹಸ್ತ ಚಾಚುತ್ತಾ ಉತ್ತಮ ಬದುಕು ಸಾಗಿಸಬೆಂದು ತಿಳಿಸಿದರು.

ಈ ಸರಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಂಪನಿ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಚಪ್ಪನವ ರು, ಇಂದಿನ ಕಲಿಯುಗದ ಲ್ಲಿ ಮಹಿಳೆಯರು ಈ ಸಾಮಾಜಿಕ ಕ್ಷೇತ್ರದಲ್ಲಿ ಎಲ್ಲ ರಂಗವನ್ನು ಮೀರಿ ಬೆಳೆದಿದ್ದಾಳೆ,ಪೆಟ್ರೋಲಿಯಂ ಬಂಕನಲ್ಲಿ ಕೂಲಿ ಕೆಸಲದಿಂದ ಸರಕಾರದ ಎಲ್ಲಾ ಇಲಾಖೆಯಗಳಲ್ಲಿ ತಳ ಮಟ್ಟದಿಂದ ಹಿಡಿದು ಉನ್ನತವಾದ ಉದ್ದೆಯಲ್ಲಿ ಮಹಿಳೆ ತನ್ನ ಪ್ರಾಭಲ್ಯವನ್ನು ತೋರಿಸಿದ್ದಾಳೆ.

ಒಂದು ಬಸ್ ಚಾಲಕ ಉದ್ದೆಯಿಂದ ವಿಮಾನಗಳಲ್ಲಿ ಇವತ್ತು ಗಗನ ಸಖಿಯರಾಗಿ,ಪೈಲೆಟ್ ಆಗಿ,ಉತ್ತಮ ಕೆಲಸ ಮಾಡುತ್ತಿದ್ದಾಳೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಶ್ರೀಯುತ ಮಮತಾ ಬ್ಯಾನರ್ಜಿ ಅವರು ಅಧಿಕಾರ ಮಾಡುತ್ತಿದ್ದಾರೆ,ಇತ್ತ ಉತ್ತರ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಅಕ್ಕ ಮಾಯಾವತಿ, ತಮಿಳುನಾಡಿನ ಅಮ್ಮ ದಿ,ಜಯಲಲಿತಾ ಅವರು ಹೀಗೆ ಅನೇಕ ಮಹಿಳೆಯರು ರಾಜಕೀಯವಾಗಿ,ಬೆಳೆದವರು ನಿಮ್ಮ ಮುಂದೆ ಸಾಕಷ್ಟು ಜನ ಇದ್ದಾರೆ,

ಹೆಣ್ಣು ಈ ಜಗತ್ತಿನ ಕಣ್ಣು ಮನೆಯ ಮಹಾಲಕ್ಷ್ಮಿ ಇವತ್ತು ನಮ್ಮ ಕಂಪನಿಯ ಎಲ್ಲಾ ಮಹಿಳಾ ಕಾರ್ಮಿಕರಿಗೆ ನಮ್ಮ ಕಂಪನಿ ಪರವಾಗಿ ತಮಗೆಲ್ಲ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯ ಕೋರುತ್ತೇನೆ, ಹಾಗೆ ತಮ್ಮೆಲ್ಲರಿಗೂ ನಮ್ಮ ಕಂಪನಿ ಪರವಾಗಿ ಗೌರವ ಸನ್ಮಾನವನ್ನು ಸ್ವೀಕಾರ ಮಾಡಿಕೊಂಡು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕು ಆ ನಿಟ್ಟಿನಲ್ಲಿ ಏನೆ ಸಹಾಯ ,ಸಹಕಾರ ಬೇಕಾದರೂ ಕಂಪನಿ ಸಹಕಾರ ಮಾಡಲಿದೆ ಎಂದರು.

ಈ ಸರಳ ಸಮಾರಂಭದಲ್ಲಿ ಕಂಪನಿಯ ವ್ಯವಸ್ಥಾಪಕರಾದ ಶ್ರೀ ಪ್ರಕಾಶ ವಾಯ್, ಶ್ರೀ ಸೀತಾರಾಮ ಮೂರ್ತಿ ,& ಕಂಪನಿ ಗುತ್ತಿಗೆದಾರರಾದ ಶ್ರೀಮತಿ ಎಮ್,ಡಿ,ರಾಠೊಡ, ಹಾಗೂ ಕಂಪನಿಯ ಎಲ್ಲಾ ಸಿಬ್ಬಂದಿವರ್ಗದವರು ಉಪಸ್ಥಿತಿ ಇದ್ದರು.
