Breaking News

ವಿಶ್ವ ಪರಿಸರ ದಿನದಂದು ಸಿದ್ದಶ್ರೀ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ಸಸಿ ನೆಡಲಾಯಿತು

ಕಮತಗಿ : ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಳವರೆಗೂ ಹೀಗೆಯೂ ಉಳಿಯಬೇಕಿದೆ.

ಇಂದು ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಸಿದ್ದಶ್ರೀ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಕಮತಗಿ ಇವರ ವತಿಯಿಂದ ಜೂನ್ 5 ರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀ ಮಸಂಗಸ್ವಾಮಿ ಗದ್ದುಗೇಯ ಆವರಣದಲ್ಲಿ ಸುಮಾರು 6 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಂಕರ್ ವನಕಿ, ವೀರಭದ್ರಪ್ಪ ಮುರಾಳ, ನಾಗಪ್ಪ ಅಚನೂರ, ಅಜೀಜ್ ಕೊಲ್ಹಾರ, ನಾರಾಯಣ ತತ್ರಾಣಿ, ಬಸವರಾಜ ನಾಗಶೆಟ್ಟಿ, ಶಿಕ್ಷಕರಾದ ರಾಘವೇಂದ್ರ ವಂದಗನೂರ, ಮಲ್ಲು ಹೋಟಿ, ಶಂಕರ್ ಬಿಜಾಪುರ, ರಾಮು ಕುಣಿಬೆಂಚಿ ಮತ್ತಿತರರು ಪಾಲ್ಗೊಂಡಿದ್ದರು

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.