Breaking News

ಯೆಲ್ಲೋ ಫಂಗಸ್’ ಪತ್ತೆ..? ಏನಿದು..? ಇದರ ಲಕ್ಷಣಗಳೇನು..?

ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಆತಂಕದ ನಡುವೆಯೇ ಇದೀಗ “ಯೆಲ್ಲೋ” ಫಂಗಸ್ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಯೆಲ್ಲೋ ಫಂಗಸ್ ಎನ್ನುವುದು ಫಂಗಸ್ ನ ವರ್ಣ ವ್ಯತ್ಯಾಸವಷ್ಟೆ. ಇವು ದೇಹದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವರ್ಣದಲ್ಲಿ ಇರುತ್ತವೆ.

ಹಾಗಂತ ಬೇರೊಂದು ಶಿಲೀಂಧ್ರಕ್ಕಿಂತ ಯೆಲ್ಲೋ ಫಂಗಸ್ ಮಾರಕ ಎನ್ನಲಾಗದು. ಶಿಲೀಂಧ್ರಗಳಲ್ಲಿ 3 ಬಗೆ. ಮ್ಯೂಕೊರ್ವೈಕೊಸಿಸ್, ಕ್ಯಾಂಡಿಡಾ, ಆರ್ಸಲೋಸಿಸ್. ಕೋವಿಡ್ ನಂತರ ಕಾಣಿಸುವುದು ಮ್ಯೂಕೊರ್ವೈಕೊಸಿಸ್. ಆರ್ಸಲೋಸಿಸ್ ಶ್ವಾಸಕೋಶದ ಮೇಲೆ ಕಾಣಿಸುವಂತಹದ್ದು ಎನ್ನುತ್ತಾರೆ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ.

ಯೆಲ್ಲೋ ಫಂಗಸ್ ಸೋಂಕಿನ ಲಕ್ಷಣಗಳಿವು;

  • ಶಕ್ತಿಯನ್ನು ಕುಗ್ಗಿಸುತ್ತದೆ. ದೇಹದಲ್ಲಿ ತೀವ್ರವಾದ ಆಯಾಸ, ಆಲಸ್ಯ ಮಾಡಬಹುದು.
  • ಜೀರ್ಣಕ್ರಿಯೆ ಮೇಲೂ ಪ್ರಭಾವ ಬೀರಬಹುದು. ಹಸಿವು ಕಡಿಮೆಯಾಗುವುದು, ಆಹಾರ ಕ್ರಮದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ.
  • ಏಕಾಏಕಿ ದೇಹದ ತೂಕ ಕಡಿಮೆಯಾಗುವುದು ಕೂಡಾ ಇದರ ಒಂದು ಲಕ್ಷಣ.
  • ದೃಷ್ಟಿ ದೋಷ, ಕಣ್ಣು ಕೆಂಪು, ಹಳದಿಯಾಗುತ್ತದೆ. ಇದು ಕಣ್ಣಿನೊಳಗೆ ಕೀವು ಕೂಡಾ ಉಂಟು ಮಾಡಬಹುದು.
  • ಗಾಯಗಳಿಂದ ಕೀವು ಸೋರುವುದಲ್ಲದೆ, ಗಾಯಗಳು ಗುಣ ಆಗುವುದು ಬಹಳ ನಿಧಾನವಾಗಬಹುದು.

ಯಲ್ಲೋ ಫಂಗಸ್ ರೋಗವನ್ನು ಆಂಪೋಟೆರಿಸಿನ್ ಬಿ ಇಂಜೆಕ್ಷನ್ ಮೂಲಕ ಗುಣಪಡಿಸಬಹುದಾಗಿದೆ. ಆದರೆ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಸೋಂಕಿತರಲ್ಲಿ ಈ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಗಾಜಿಯಾಬಾದ್ ನಲ್ಲಿ ಯೆಲ್ಲೋ ಫಂಗಸ್ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿತ್ತು.

About vijay_shankar

Check Also

ಕರೋನ ಕಟ್ಟಿ ಹಾಕಲು ಪೂರ್ವಭಾವಿ ಸಭೆ,ಗ್ರಾಮ ಹಿತ ರಕ್ಷಣ ಸಮಿತಿಯಿಂದ ಕರೋನಾ ಜಾಗೃತಿ ಟಿಮ್ ವಕ್೯ ಶುರು,

ಅಮೀನಗಡ:ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೦೫ ಗಂಟೆಗೆ ವಿಜಯ ಮಹಾಂತೇಶ ಮಠದಲ್ಲಿ ಕರೋನ ಜಾಗೃತಿ ಹಾಗೂ ಕರೋನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.