ಪೆದ್ದು ನಾರಾಯಣ’ ಮೊದಲ ಹಂತ ಮುಕ್ತಾಯ!

ಬೆಂಗಳೂರು: ಗಂಗಾಗುರು ಕಂಬೈನ್ಸ್ ಅವರ ಕೆ.ವಾಸುದೇವ ಅರ್ಪಿಸುವ , ಭೀಮಾರೆಡ್ಡಿ ನಿರ್ಮಾಣದ, ‘ಪೆದ್ದು ನಾರಾಯಣ’ ಕನ್ನಡ ಚಲನಚಿತ್ರದ ಮೊದಲಹಂತ ಚಿತ್ರೀಕರಣ ಮುಕ್ತಾಯಗೊಂಡಿದ್ದು , ಸದ್ಯ ಹಾಡುಗಳಿಗೆ ರಾಗಸಂಯೋಜನೆ ಕಾರ್ಯ ಕೈಗೊಂಡಿದ್ದಾರೆ.
ಮೊದಲಬಾರಿಗೆ ನಾಯಕನಾಗಿ ಅಭಿನವ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಮಿಲನ ರಮೇಶ, ಕೀರ್ತಿರಾಜ್, ಶೋಭರಾಜ್ , ಕಮಲ, ರಮೇಶ್ ಭಟ್ , ಅರುಣ, ಬಾಲರಾಜ್ ಮೊದಲಾದವರು ನಟಿಸುತ್ತಿದ್ದಾರೆ. ಮುಗ್ದ ಯುವಕ ವಿದ್ಯಾವಂತ ಹುಡುಗಿಯ ಪ್ರೀತಿಯ ಬಲೆಯಲ್ಲಿ ಬಿದ್ದರೆ ಜೀವನ ಹೇಗೆ ಶೃಂಗಾರಮಯವಾಗುತ್ತದೆ ಎನ್ನುವುದು ಕತೆಯ ಸಾರಾಂಶ .
ಈ ಚಿತ್ರದಲ್ಲಿ ಐದು ಹಾಡುಗಳಿವೆ. ಸಂಗೀತವನ್ನು ವಿಶಾಲ್ ಆಲಾಪ್ ಅನ್ನುವ ಹೊಸ ಪ್ರತಿಭೆಗೆ ಅವಕಾಶ ನೀಡಲಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಜೊತೆಗೆ ಛಾಯಾಗ್ರಹಣ ಜವಾಬ್ದಾರಿಯನ್ನು ಹುಬ್ಬಳ್ಳಿಯ ಯುವ ಉತ್ಸಾಹಿ ನಿರ್ದೇಶಕ ರಘು ರೂಗಿ ಹೊತ್ತಿದ್ದಾರೆ. ಡಾ.ವಿ,ನಾಗೇಂದ್ರ ಪ್ರಸಾದ್, ರಘು ರೂಗಿ, ರಾಮಾರ್ಜುನ್, ವಿರಂತ್ ಕೆರೂರ ಅವರು ಹಾಡುಗಳನ್ನು ಬರೆದಿದ್ದಾರೆ. .
ವಿಶಾಲ್ ಆಲಾಪ್ ಅವರ ಸಂಗೀತವಿದ್ದು ಸಂಕಲನ ಎನ್.ಎಂ.ವಿಶ್ವ, ಗೀತರಚನೆ ಡಾ.ವಿ. ನಾಗೇಂದ್ರ ಪ್ರಸಾದ್ , ರಘು ರೂಗಿ, ರಾಮಾರ್ಜುನ್, ವಿರಂತ್ ಕೆರೂರ ಬರೆದಿದ್ದು, ಮದನ್‌ಹರಿಣಿ ನೃತ್ಯ ಸಂಯೋಜಿಸಿದ್ದಾರೆ. ಚಿತ್ರದ ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಅವರದಿದೆ. ಮುಂದಿನ ತಿಂಗಳು ಎರಡನೇ ಹಂತದ ಚಿತ್ರೀಕರಣ ಆರಂಭ ಮಾಡಲಾಗುತ್ತದೆ ಎಂದು ನಿರ್ಮಾಪಕ ಭೀಮಾ ರೆಡ್ಡಿಯವರು ತಿಳಿಸಿದ್ದಾರೆ.
**
ವರದಿ: ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News