
ಅಮೀನಗಡ : ಇತ್ತಿಚ್ಚಿಗೆ ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಆಗಮಿಸಿದ ನೂತನ ಪಿ,ಎಸ್,ಐ ಶ್ರೀ ಶಿವಾನಂದ ಸಿಂಗನ್ನವರ ಇವರಿಗೆ ಅಮೀನಗಡ ನಗರದ ಗೃಹ ರಕ್ಷಕದಳ ಸಿಬ್ಬಂದಿಗಳಿಂದ ಗೌರವ ಸನ್ಮಾನ ಮಾಡಲಾಯಿತು. ಸುಮಾರು ದಶಕಗಳಿಂದ ಸುಸಜ್ಜಿತ ಕೊಠಡಿ ಇಲ್ಲದೆ ಕಾರ್ಯ ನಿರ್ವಹಿಸಲು ಆಗದೆ ಗೃಹರಕ್ಷಕ ಸಿಬ್ಬಂದಿಗಳಿಗೆ ಠಾಣೆಯ ಕ್ವಾಟಸ್೯ ಒಂದನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅನುಮತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ತಾವು ಕೈ ಜೋಡಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ ನೀಡಿದರು.

ಮೊಹರಮ ಹಬ್ಬದ ನಿಮಿತ್ತವಾಗಿ ತಾವೆಲ್ಲರೂ ಆಯಾ ಸ್ಥಳಗಳಲ್ಲಿ ಶಾಂತಿ ಕದಡದಂತೆ ಸಾರ್ವಜನಿಕರ ಮೇಲೆ ಕಿಡಗೆಡಿಗಳ ಮೇಲೆ ನಿಗಾ ವಹಿಸಿ ಉತ್ತಮ ಕರ್ತವ್ಯ ನಿಭಾಹಿಸಬೇಕು ನಾನು ಇರೊವರೆಗೂ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು ಎಂದು ಅಮೀನಗಡ ನಗರದ ಪ್ರಭಾರಿ ಘಟಕಾಧಿಕಾರಿ ಶ್ರೀ ಯಮನೂರಪ್ಪ ಭಜಂತ್ರಿ ತಿಳಿಸಿದರು. ಈ ಸರಳ ಸನ್ಮಾನ ವೇದಿಕೆಯಲ್ಲಿ ಗೃಹ ರಕ್ಸಿಷಕದಳದ ಬ್ಬಂದಿಗಳಾದ

ಸ್ವಾಗತ ಕೋರಿದ ಪ್ರ, ಘಟಕಾಧಿಕಾರಿ ಶ್ರೀ ಯಮನಪ್ಪ ಭಜಂತ್ರಿ
ಶ್ರೀ ಎ,ಎಲ್ ಸಾಹುಕಾರ ಜಿಲ್ಲಾ ಬೋಧಕರು ಇವರ ಮಾರ್ಗದರ್ಶನದಲ್ಲಿ ಶ್ರೀ ಬಿ,ವ್ಹಿ, ಕಡೆಮನಿ.ಶ್ರೀ ಬಿ,ಎಸ್ ಬಸರುಕೊಡ ಶ್ರೀ ರಾಘು.ಹಡಪದ ಶ್ರೀ ಪೂರ್ತಿಗೇರಿ ಶ್ರೀ ರಮೇಶ್ ಹುಲಿಕೇರಿ ,ಶ್ರೀ ವಿಠಲ ಜಾಲಿಹಾಳ ರಮೇಶ್ ಬಸರು ಕೊಡ ಈಶಪ್ಪ ಹಡಪದ ಅನೇಕ ಸಿಬ್ಬಂದಿ ಉಪಸ್ಥಿತಿ ಇದ್ದರು.