
:ಹಣನಮಸಾಗರ; ಕೇಂದ್ರ ಸರಕಾರದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕೂಲಿ ಕಾರ್ಮಿಕರಿಗೆ ಹಾಗೂ ಒಂದು ಕುಟುಂಬಕ್ಕೆ ೧೦೦ ದಿನ ಗ್ರಾಮ ಪಂಚಾಯತಿ ಕೂಲಿ ಕೆಲಸ ಕೊಡಬೇಕು ಗ್ರಾಮೀಣ ಕೂಲಿ ಕಾರ್ಮಿಕರಿಗೆ ವರದಾನಾವಾಗಿ ದೆ,ಇದರಿಂದ ನಿತ್ಯ ನೂರಾರು ಜನರು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪಂಚಾಯತಿಗಳಲ್ಲಿ
ಕೆಲಸವನ್ನೆ ಮಾಡದೆ ಕೂಲಿ ಕಾರ್ಮಿಕರ ಖಾತೆಗೆ ಹಣ ಹಾಕಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನೆಲ್ಲ ಇವತ್ತು ಯಾಕೆ ಈ ವಿಷಯ ಚರ್ಚೆ ಮಾಡುತ್ತಿಧ್ನೇನೆ ಎಂದರೆ ನಮ್ಮ ಭಾರತ ದೇಶೆ ಅನೇಕ ಧರ್ಮೀಯರ ಆಚರಣೆಗಳು ಇನ್ನೂ ಪದ್ದತಿಯಲ್ಲಿ ಇವೆ ,ನಮ್ಮ ಸಂಸ್ಕೃತಿ ,ಆಚಾರ,ವಿಚಾರ, ಹಿಂದೂ ಧರ್ಮ ,ನಮ್ಮ ಜನಪದ ಸಂಸ್ಕ್ರತಿಗೆ ಸರಿಸಾಟಿ ಯಾರು ಇಲ್ಲ, ಅದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಸೇಬಣಕಟ್ಟಿ ಗ್ರಾಮದ ಹೊರ ವಲಯದಲ್ಲಿ ಕೆರೆ ಕೆಲಸ ಮಾಡುವಾಗ ಸುಮಾರು ೨೫೦ ಕೂಲಿ ಕಾರ್ಮಿಕರು ಕೆರೆ ಕೆಲಸ ಮಾಡುವಾಗ ಮಧ್ಯಾಹ್ನಾ ಊಟ ಮಾಡಿದ ನಂತರ ಸುದೀಪ್ ಅವರು ಅಭಿನಯ ಮಾಡಿದ ರೋಣ ಚಿತ್ರದ ಎಕ್ಕಾಸಕ್ಕಾ ಹಾಡಿಗೆ ಹಲವು ಜನ ಕಾರ್ಮಿಕರು ಸೇರಿ ಟ್ಯಾಕ್ಟರ್ ನಲ್ಲಿ DJ ಸಾಂಗ್ ಹಾಕಿ ಕುಣಿದು ಕುಪ್ಪಳಿಸಿದ್ದಾರೆ, ನಂತರ ಜಾನಪದ ಹಾಡಿಗೆ ” *”ಹೇ ಹುಡುಗಿ ಯಾಕಿಂಗಾಡ್ತಿ ,ಮಾತಲ್ಲಿ ಮಳ್ಳಮಾಡ್ತಿ ವರ್ಷಾತ್ತು ಹಿಂಗಾಮಾಡ್ತಿ ಸಿಗವಲ್ಲಿ ಕೈಗೆ.
ಈ ಹಾಡಿಗೆ ತಮ್ಮ ವಯಸ್ಸಿನ ಬೇದವನ್ನು ಮರೆತು ಡಾನ್ಸ್ ಮಾಡಿದ ಮಹಿಳೆಯರ ವಿರುದ್ದ ಹಲವವು ಜನ ಪರ ವಿರೋಧ ಮಾತುಗಳು ಕೇಳಿ ಬಂದಿವೆ, ಕೂಲಿ ಕಾರ್ಮಿಕರ ಮೇಟ್ ಸುಖಾ ಸುಮ್ಮನೆ ಹಾಜರಾತಿ ನೀಡಿ ಹಣ ಕೊಳ್ಳೆ ವಡೆಯುತ್ತಿದ್ದಾರೆ, ಕೂಲಿ ಕಾರ್ಮಿಕರ ಕೆಲಸದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸುವಂತಿಲ್ಲ ಎಂದು ಹೇಳುತ್ತಿದ್ದಾರೆ, ಕೆಲಸ ಬಿಟ್ಟು ಈ ರೀತಿಯಾಗಿ ಬೇಕಾಬಿಟ್ಟಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾ? ಅಥವಾ ಲೈವ್ಹ್ ಬಾರ್ ರೆಸ್ಟೋರೆಂಟ್ ಕ್ಲಬ್ ಡಾನ್ಸರ್ಗಳಾ ಎಂದು ಅಂತರಜಾಲ ತಾನದಲ್ಲಿ ಕೂಲಿ ಕಾರ್ಮಿಕರಿಗೆ ಚಾಟಿ ಬಿಸಿದ್ದಾರೆ, ಈ ಬಗ್ಗೆ ಕಬ್ಬರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ನಿಂಗಪ್ಪ ಮೂಲಿಮನಿ ಅವರನ್ನು ಪ್ರಶ್ನಿಸಿದಾಗ ಇದು ಕೆಲಸದ ಸಮಯದಲ್ಲಿ ಡಾನ್ಸ್ ಮಾಡಿಲ್ಲ ಊಟ ಮಾಡಿದ ನಂತರ ಧನಿವು ಆರಿಸಿಕೊಳ್ಳಲು ಮಾಡಿದ ಡಾನ್ಸ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಉದ್ಯೋಗ ಖಾತ್ರಿ ಯೋಜನೆ ಇಷ್ಟು ದಿನ ಹಳ್ಳ ಹಿಡಿದಿತ್ತು ಈಗ ಕೆರೆ ಹಿಡಿದಿದೆ, ಕೂಲಿ ಕಾರ್ಮಿಕರು ಈ ಭಾರತದ ಮಣ್ಣಿನ ಗುಣ ಹಾಗೂ ಸಂಸ್ಕೃತಿಯನ್ನು ಕಲಿಯಲಿ, ಈ ಹಿಂದೆ ನಮ್ಮ ಪೂರ್ವಜರು ಹೊಲದಲ್ಲಿ,ರಾಶಿ ಕಣಗಳಲ್ಲಿ ರಾಜ ಮಹಾರಾಜರ ಪರಾಕ್ರಮದ ಬಗ್ಗೆ, ಭಾರತದ ಭವ್ಯ ಪರಂಪರೆ ಬಗ್ಗೆ ಜಾಣಪದ ,ಗೀಗಿ,ಪದ ಹಾಡಿ ಕೆಲಸ ಮಾಡುತ್ತಿದ್ದರು, ಆದರೆ ಇಂದಿನ ನಮ್ಮ ತಾಯಂದಿರು ಡಾನ್ಸ್ ನೋಡಿ ಅವರ ವ್ಯವಸ್ಥೆ ನೋಡಿ ನಮ್ಮ ಗ್ರಾಮೀಣ ಭಾಗದ ಮುಗ್ದ ತಾಯಂದಿರ ಈ ನಂಗಾನಾಚ್ ಡಾನ್ಸ್ ನೋಡಿ ಹೊಟ್ಟೆ ತುಂಬಿದೆ ಎಂದು BB News ನೊಂದಿಗೆ ಕಾಂಗ್ರೆಸ್ ಪಕ್ಚದ ಮುಖಂಡರೊಬ್ಬರು ಹೇಳಿಕೆ ನೀಡಿ ಖಂಡಿಸಿದ್ದಾರೆ, ಈ ಬಗ್ಗೆ ವಿಕೃತ ತನಿಖೆ ಮಾಡಿ ಕೆಲಸ ಸಮಯದಲ್ಲಿ ಈ ಡಾನ್ಸ್ ಮಾಡಲಾಗಿದೆಯಾ? ಅಥವಾ ಬಿಡುವಿನ ವೇಳೆಯಲ್ಲಿ ಈ ಡಾನ್ಸ್ ಮಾಡಲಾಗಿದೆಯಾ ಎಂದು ಸೂಕ್ತ ತನಿಖೆ ಮಾಡಿ ಮೊದಲು ಅಭಿವೃದ್ಧಿ ಅಧಿಕಾರಿ ಮೂಲಿಮನಿ ಅವರನ್ನು ಹಾಗೂ ಮೇಟ್ ಅವರನ್ನು ಸಂಸ್ಪೆಂಡ್ ಮಾಡಿ ಉದ್ಯೋಗ ಖಾತ್ರಿ ಯೋನೆಯು ಹಾದಿ ತಪ್ಪದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಮನಗೌಡ ಗೌಡರ್, ರಮಾನಂದ ಕಾಳೆ ,ಸಿದ್ದಣ್ಣ ಗೌಡರ, ಸುಭಾಸ್ ಮಾಂಡ್ರೆ, ಹುಚ್ಚಪ್ಪ ನಾಯಕ ,ಗೀತಾ ಪಾಟೀಲ ಅವರು ಖಂಡಿಸಿದ್ದಾರೆ.