ಗುಡೂರು sc :
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬಿದಿ ಬದಿ ಹಣ್ಣು,ಚಹಾ, ಪಾನ್ ,ಹಾಗೂ ಇತರೆ ವ್ಯಾಪಾರಕ್ಕೆ ನಿಲ್ಲಿಸಿದ ಅಕ್ರಮ ತಳ್ಳು ಬಂಡಿಗಳ ಹಾವಳಿಯಿಂದ ಗುಡೂರು ಗ್ರಾಮದಲ್ಲಿ ಸಂಚರಿಸವ ಸರಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ, ನಿತ್ಯ ವಾಣಿಜ್ಯ ಕೇಂದ್ರ ಬಿಂದುವಾದ ಈ ಗ್ರಾಮಕ್ಕೆ ಪತ್ರಿದಿನ ನೂರಾರು ಜನ ವಿವಿಧ ಗ್ರಾಮಗಳಿಂದ ಸಂತೆ,ವ್ಯಾಪಾರಕ್ಕೆ ಬರುತ್ತಾರೆ, ಇಲ್ಲಿ ನೂತನ ಹೊಸ ತಂಗುದಾನ ಗ್ರಾಮದ ಹೊರ ಭಾಗದಲ್ಲಿ ಇದ್ದರು ಸಹ ಅಲ್ಲಿಗೆ ಸಾರ್ವಜನಿಕರು ಹೋಗುವುದಿಲ್ಲ , ಅಲ್ಲಿ ಮೂಲಭೂತ ಯಾವ ಸೌಲಭ್ಯಗಳು ಇಲ್ಲದ ಕಾರಣ ಜನ ಹಿಂದೆಟು ಹಾಕಿದ ಕಾರಣ ಪೊಲೀಸ್ ಠಾಣೆ ಮುಂದೆ ಸಣ್ಣ ಬಸ್ ತಂಗುದಾನವೇ ಈಗ ಗ್ರಾಮದ ಪ್ರಮುಖ ಬಸ್ ನಿಲ್ದಾಣ ಹೀಗಾಗಿ ಪ್ರತಿ ಶುಕ್ರವಾರ ಸಂತೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ ಸುಮಾರು ೧೦, ಸಾವಿರ ಜನ ಜಂಗುಳಿಂದ ತುಂಬಾ ಟ್ರಾಫಿಕ್ ಕಿರಿ ಕಿರಿ ಜನರಿಗೆ ಅಭ್ಯಾಸವಾದಂತೆ ಕಾಣುತ್ತದೆ. ಆದರೆ ಹೊರಗಿನಿಂದ ಈ ಗ್ರಾಮದ ಮೂಲಕ ಸಂಚರಿಸು ಕಾರಚ,ಬೈಕ್ ಖಾಸಗಿ ವಾಹಣಗಳು ತುಂಬಾ ಪ್ರಾಯಾಸದಿಂದ ಗ್ರಾಮ ದಾಟಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಈ ಬಸ್ ನಿಲ್ದಾಣದ ಸುತ್ತ ಕಾಲಿ ಕಾಲಿಯಾವಿ ಒಂದಕೊಂದು ಅಂಟಿಕೊಂಡು ನಿಂತಿರುವ ತಳ್ಳು ಬಂಡಿಗಳ ಹಾವಳಿ , ಇವು ಯಾರುವು ? ಇದರ ಮಾಲಿಕರು ಯಾರು,? ಯಾವ ಕಾರಣಕ್ಕೆ ಇವು ಇಲ್ಲಿ ನಿಲ್ಲಿಸಲಾಗಿದೆ ? ಇದರಿಂದ ವಾಹಣ ಸವಾರರಿಗೆ, ಸಾರ್ವಜನಿಕ ಬಸ್ ಗಳಿಗೆ ಆಟೊ ಚಾಲಕರಿಗೆ ದೊಡ್ಡ ತೊಂದರೆ ಆಗುತ್ತಿದ್ದರು ಸಹ ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಬಸವರಾಜ್ ರೇವಡಿ ಹಾಗೂ ಪಂಚಾಯತಿ ಅಧ್ಯಕ್ಷರಾದ ಶಶಿಕುಮಾರ್ ಮ್ಯಾಗೇರಿ ಅವರು ಸಾರ್ವಜನಿಕರಿಗೆ ಉತ್ತರ ನೀಡಬೇಕಾಗಿದೆ.
ಇಲ್ಲಿ ಅಕ್ರಮವಾಗಿ ತಳ್ಳು ಬಂಡೆಗಳನ್ನು ನಿಲ್ಲಿಸಲಾಗಿದೆ, ಇವು ನಿಜವಾದ ಕೂಲಿ ವ್ಯಾಪಾರಿಗಳ ಬಂಡಿಗಳು ಅಲ್ಲ , ಇದರಲ್ಲಿ ಕೆಲವು ಗ್ರಾಮದ ಪ್ರಮುಖರು 4-5 ಬಂಡಿ ನಿಲ್ಲಿಸಿ ದಿನದ ಬಾಡಿಗೆಯಂತೆ ನಿತ್ಯ ಕೂಲಿ ವ್ಯಾಪಾರ ಮಾಡುವವರಿಗೆ ದಿನಕ್ಕೆ 50 ರಿಂದ 100, ರೂಪಾಯಿ ಯಂತೆ ಬಾಡಿಗೆ ಹಣ ಪಡೆಯುತ್ತಾರೆ , ಎಂಬ ಆರೋಪಗಳು ಕೇಳಿ ಬರುತ್ತಿವೆ, ಹಾಗಾದರೆ ಇದರಿಂದ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅರಣ್ಯ ಇಲಾಖೆ ಇವರಿಗೆ ಯಾವ ರೀತಿ ಅನುಮತಿ ನೀಡಿದ್ದಾರೆ, ? ಇದರಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗುತ್ತಿದೆ, ಮೊದಲು ಸ್ಥಳೀಯ ಆಡಳಿಯ ಮಂಡಳಿ ಸಾರ್ವಜನಿಕ ಹಿತ ದೃಷ್ಟಿಯಿಂದ ಇಲ್ಲಿನ ನಿಜವಾದ ವ್ಯಾಪಾರಿಗಳಿಗೆ ಅನುಕೂಲ ಮಾಡಿ ಅಕ್ರಮ ವಾಗಿ ಬಂಡಿ ನಿಲ್ಲಿಸಿ ಬಾಡಿಗೆ ತಿನ್ನುತ್ತಿರುವ ಎಲ್ಲಾ ಕಾಲಿ ಇರುವ ತಳ್ಳು ಬಂಡಿಗಳನ್ನು ಸ್ಥಳದಿಂದ ತೆರವು ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ದಿನದಿಂದ ದಿನಕ್ಕೆ ಗುಡೂರು ಗ್ರಾಮ ದೊಡ್ಡ ಮಾರುಕಟ್ಟೆಗಾಗಿ ಬೆಳೆಯುತ್ತಿದೆ. ಇಲ್ಲಿ ಯಾರಿಗೂ ತೊಂದರೆ ಆಗದಂತೆ ಸ್ವಚ್ಚತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಳ್ಳು ಬಂಡೆಗಳನ್ನು ತೆರವು ಮಾಡಲು BB News ಕಳಕಳಿ ಒಂದು ವಾರದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ರೇವಡಿ ಅವರು ವಿಶೇಷ ಗಮನ ಹರಿಸಬೇಕೆಂದು ಜನತೆಯ ಕೂಗು ಇಲ್ಲವಾದರೆ ತಾಲೂಕ ಗ್ರಾಮೀಣ ಹಿತ ರಕ್ಷಣ ಸಮಿತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ದ್ಯಾಮಣ್ಣ ಅಂಕಲಕಟ್ಟಿ, ಸುಭಾಸ್ ಭಾಂಡೆ,ಬಸವರಾಜ್ ಕೋಟೆ, ಸಂಜಯ್ ಪಾಟೀಲ್ ,ನವೀನಕುಮಾರ ಹೊಸಮನಿ ಇತರರು ಎಚ್ಚರಿಸಿದರು.