Breaking News

ಶೂಲೇಭಾವಿ ಗ್ರಾಮದಲ್ಲಿ ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಉದ್ಘಾಟನೆ ಮಾಡಿದ ಕೃಷ್ಣಾ ರಾಮಾದುರ್ಗ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮದ ಮಹಿಳೆಯರಿಂದ ಶ್ರೀ ಅನ್ನಪೂರ್ಣೇಶ್ವರಿ ಸ್ವ- ಸಹಾಯ ಸಂಘವನ್ನು ಉದ್ಘಾಟನೆ ಮಾಡುವ ಮೂಲಕ ಮಹಿಳೆಯರು ಈ ಸಂಘದಡಿ ತಾವು ಸಾಲ- ಸೌಲಭ್ಯಗಳನ್ನು ಪಡೆದು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗುಡಿ ಈ ಸಂಘದ ಸೌಲಭ್ಯ ಪಡೆಯುವ ಜೊತೆಗೆ ಉತ್ತಮ ಹಣಕಾಸಿನ ವ್ಯವಹಾರ

ಮಾಡಬೇಕೆಂದು ಕೃಷ್ಣಾ ರಾಮದುರ್ಗ ಅವರು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ಶ್ರೀ ಜೀ,ಜನಾರ್ಧನ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಿ ಈ ಸಂಘ ಉತ್ತಮ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದು ಸಕಾಲಕ್ಕೆ ಮರು ಪಾವತಿ ಮಾಡಿ ಈ ಸಂಘವನ್ನು ಬೆಳೆಸಿ ಎಂದು ಸಲಹೆ ನೀಡಿದರು. ಈ ಸಂಘದ ಗೌರವ ಅಧ್ಯಕ್ಷ ಕೃಷ್ಣಾ ರಾಮದುರ್ಗ, ಮುಖ್ಯಸ್ಥರು ಶ್ರೀಮತಿ ಭಾರತಿ ಎಫ್,ಎಸ್ , ಹಾಗೂ ದೇವರಾಜ ಕಮತಗಿ ,ಇಬ್ರಾಹಿಂ ಮಾಗಿ, ಶಿವುಕುಮಾರ ರಾಮದುರ್ಗ ,ಮಂಜುನಾಥ ರಾಮದುರ್ಗ, ಶ್ರೀಮತಿ ಶಿಲಾ ರಾಮದುರ್ಗ, ಶ್ರೀಮತಿ ಶಿವಲಿಲಾ,ಹರಗಬಲ್ಲ,ಶ್ರೀಮತಿ ಲತಾ ಎಮ್,ರಾಮದುರ್ಗ, ಉಪಸ್ಥಿತಿ ಇದ್ದರು.

About vijay_shankar

Check Also

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ  ಆಯ್ಕೆ

ಮಲ್ಲಗಂಭ ಸ್ಪರ್ಧೆಯಲ್ಲಿ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.