Breaking News

ಹರಾಜಿಗೆ “ಅನರ್ಹ” ಅಸ್ತ್ರ: ಗ್ರಾ.ಪಂ. ಚುನಾವಣೆ:

ಬೆಂಗಳೂರು: ಗ್ರಾಮ ಪಂಚಾಯತ್‌ ಸ್ಥಾನಗಳಿಗಾಗಿ ಹರಾಜು-ಆಮಿಷಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಸಾಕ್ಷ್ಯ ಸಾಬೀತಾದರೆ ಅಂಥವರಿಗೆ “ಅನರ್ಹತೆ’ಯ ಬಿಸಿ ಮುಟ್ಟಿಸಲು ರಾಜ್ಯ ಚುನಾವಣ ಆಯೋಗ ಚಿಂತನೆ ನಡೆಸಿದೆ. ಈ ಸಂಬಂಧ ಆಯೋಗವು ಸರಕಾರ ದೊಂದಿಗೆ ಚರ್ಚೆ ನಡೆಸಿದ್ದು, ಪ್ರಸ್ತಾವನೆ ಸಲ್ಲಿಸಲು ಯೋಚಿಸುತ್ತಿದೆ. ಈ ಪ್ರಸ್ತಾವನೆ ಈ ಚುನಾವಣೆಗೆ ಅಲ್ಲದಿದ್ದರೂ ಮುಂದಿನ ಬಾರಿ ಅನುಕೂಲ ಆಗಬಹುದು ಎಂದು ರಾಜ್ಯ ಚುನಾವಣ ಆಯುಕ್ತ ಡಾ| ಬಿ. ಬಸವರಾಜು ತಿಳಿಸಿದ್ದಾರೆ.

ಗ್ರಾ.ಪಂ. ಸ್ಥಾನಗಳನ್ನು ಬಹಿರಂಗ ಹರಾಜು ಹಾಕು ವುದು, ಆಮಿಷಗಳಿಗೆ ಮಾರಾಟ ಮಾಡಿ ಕೊಳ್ಳುವ ಸಾಕ್ಷ é ಸಿಕ್ಕವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗುತ್ತಿದೆ. ಆದರೆ ಇಂತಹ ಪ್ರಕರಣಗಳಲ್ಲಿ “ಅನರ್ಹ’ಗೊಳಿಸಲು ಈಗ ಅವಕಾಶವಿಲ್ಲ.

ಆದ್ದರಿಂದ ಹರಾಜು- ಆಮಿಷಗಳಲ್ಲಿ ತೊಡಗಿಸಿಕೊಂಡು ಸಾಕ್ಷ é ಸಾಬೀತಾದರೆ ಅಂಥವರನ್ನು “ಅಸಿಂಧು’ಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಲು ಸೂಚನೆ
ಅನೇಕ ಕಡೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಬಸವರಾಜು ತಿಳಿಸಿದ್ದಾರೆ. ಚುನಾವಣ ಅಕ್ರಮ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿದರೆ ಪಾರಾಗುವುದು ಸುಲಭವಲ್ಲ. ಅದಕ್ಕಾಗಿ ನಾಮಪತ್ರ ಪರಿಶೀಲನೆ ವೇಳೆ ಇವುಗಳ ಬಗ್ಗೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡ ಲಾಗಿದೆ. ಅವಿರೋಧ ಆಯ್ಕೆಗಳ ಸತ್ಯಾಸತ್ಯತೆ ಪರಿಶೀಲಿಸುವ ಹಂತದಲ್ಲಿ ಬಿಗಿ ಹೆಜ್ಜೆಗಳನ್ನು ಇರಿಸಲಾಗುತ್ತಿದೆ. ಸಾಕ್ಷಿ ಸಿಕ್ಕರೆ ಎಫ್‌ಐಆರ್‌ ದಾಖಲಿಸಿ ಅಂತಹ ಪ್ರಕರಣಗಳನ್ನು ಪ್ರತ್ಯೇಕ ವಾಗಿ ನಿರ್ವಹಿಸುತ್ತೇವೆ ಎಂದಿದ್ದಾರೆ.

ಮತ ಮಾರಿಕೊಳ್ಳಬಾರದು
ಅವಿರೋಧ ಆಯ್ಕೆ ಹೊಸದಲ್ಲ ಮತ್ತು ಕಾಯ್ದೆಯಲ್ಲಿ ಅದಕ್ಕೆ ಅವಕಾಶವೂ ಇದೆ. ಅವಿರೋಧ ಆಯ್ಕೆ ಒಮ್ಮತದಿಂದ ಆಗಿದ್ದರೆ ಒಳ್ಳೆಯ ಬೆಳವಣಿಗೆ. ಆದರೆ ಇದಕ್ಕಾಗಿ ಆಮಿಷ, ಒತ್ತಡ, ಬೆದರಿಕೆ ಹಾಕುವುದಕ್ಕೆ ಅವಕಾಶವಿಲ್ಲ. ಈ ದಿಶೆಯಲ್ಲಿ ಆಯೋಗ ಕ್ರಮ ಕೈಗೊಳ್ಳುತ್ತಿದೆ ಎಂದು ಬಸವರಾಜು ತಿಳಿಸಿದರು. ಮತದಾರರು ಮತ ಮಾರಾಟ ಮಾಡಿಕೊಳ್ಳಬಾರದು ಎಂದು ಆಯುಕ್ತ ಬಸವರಾಜು ಮನವಿ ಮಾಡಿಕೊಂಡಿದ್ದಾರೆ.
ಎಂಟು ಎಫ್‌ಐಆರ್‌ ದಾಖಲು ಹರಾಜು, ಆಮಿಷಗಳ ಮೂಲಕ ಅವಿರೋಧವಾಗಿ ಆಯ್ಕೆ ಮಾಡಿರುವ ಬಗ್ಗೆ 8 ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ರಾಜಕೀಯ ತಡೆ ಸವಾಲು
ಗ್ರಾ.ಪಂ. ಚುನಾವಣೆ ಪಕ್ಷ ರಹಿತ. ಈಗಿನ ರಾಜಕೀಯ ಸನ್ನಿವೇಶದಲ್ಲಿ ಹಳ್ಳಿ-ಹಳ್ಳಿಗಳಲ್ಲಿ, ಮನೆ-ಮನೆಗಳಲ್ಲಿ ರಾಜಕಾರಣ ಬಂದಿದೆ. ರಾಜಕೀಯ ಪಕ್ಷಗಳು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. ಇದನ್ನು ತಡೆಯುವುದು ದೊಡ್ಡ ಸವಾಲು. ಆಯೋಗದಿಂದ ಮಾತ್ರ ಇದನ್ನು ಸರಿಪಡಿಸಲು ಸಾಧ್ಯವಿಲ್ಲ. ಜನರ ಸಹಕಾರ ಬೇಕು ಎಂಬುದು ಆಯುಕ್ತರ ಅಭಿಪ್ರಾಯ.

ವೆಚ್ಚಕ್ಕೆ ಮಿತಿ ಇಲ್ಲ
ಗ್ರಾ.ಪಂ. ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣ ವೆಚ್ಚಕ್ಕೆ ಮಿತಿ ಇಲ್ಲ. ಗ್ರಾ.ಪಂ. ಚುನಾವಣೆ ಅತ್ಯಂತ ತಳಹಂತದ್ದು. ಅದಕ್ಕೆ ದೊಡ್ಡ ಮಟ್ಟದ ಭಾರ ಹಾಕಿದರೆ ಚುನಾವಣೆ ನಡೆಯುವುದೇ ಇಲ್ಲ. ಇದರಿಂದ ಅರ್ಹರು ಹಿಂದೇಟು ಹಾಕುವ ಅಪಾಯವಿರುತ್ತದೆ ಎಂದು ಬಸವರಾಜು ಹೇಳಿದರು.
ಚುನಾವಣ ಸಿದ್ಧತೆಗಳು ಆರಂಭವಾದ ದಿನದಿಂದ ಆಡಳಿತ ಯಂತ್ರ ಆಯೋಗಕ್ಕೆ ಪೂರ್ಣ ಸಹಕಾರ ನೀಡುತ್ತಿದೆ. ಪ್ರತೀ ಜಿಲ್ಲೆಯಲ್ಲೂ ನೆರವು ಸಿಗುತ್ತಿದೆ ಎಂದರು.

About vijay_shankar

Check Also

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.