Breaking News
ಮುದ್ದೇಬಿಹಾಳದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಕಲಾವಿದರಿಗೆ  ಸನ್ಮಾನ ಸಮಾರಂಭ

ಮುದ್ದೇಬಿಹಾಳದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಜನಪದ ಕಲಾವಿದರಿಗೆ ಸನ್ಮಾನ ಸಮಾರಂಭ

ಮುದ್ದೇಬಿಹಾಳ:
ವಿಶ್ವದ ಜನಪದ ಸಂಸ್ಕೃತಿ, ಕಲೆ ಮತ್ತು ಕಲಾವಿದರ ಸೇವೆಯನ್ನು ಸ್ಮರಿಸಲು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ವಿಜಯಪುರ ಜಿಲ್ಲಾ ಘಟಕ ಹಾಗೂ ಕನ್ನಡ ಜಾನಪದ ಪರಿಷತ್, ಬೆಂಗಳೂರಿನ ಸಂಯುಕ್ತಾಶ್ರಯದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಇಂದು (30 ಆಗಸ್ಟ್ 2025, ಶನಿವಾರ) ಮುದ್ದೇಬಿಹಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭವ್ಯವಾಗಿ ಜರುಗಿತು.

ಸಮಾಜ ಸೇವಕ ನೇತಾಜಿ ನಲವಡೆ
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ
ಆಧುನಿಕ ಭರಾಟೆಯಲ್ಲಿ ನಮ್ಮ ಜನಪದ ಕಲೆಗಳು ಮರೆಯಾಗುತ್ತಿವೆ. ಮತ್ತು ಅನೇಕ ಕಲಾವಿದರು ಎಲೆಮರೆ ಕಾಯಿಯಂತೆ ನಮ್ಮ ನಡುವೆ ಬದುಕುತ್ತಿದ್ದಾರೆ ಅಂಥವರನ್ನು ಇಂಥ ವೇದಿಕೆ ತಂದು ಜನಪದ ಕಲೆಗಳನ್ನು ಪ್ರದರ್ಶಿಸಿ ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮತ್ತು ಜನಪದ ಪರಿಷತ್ತಿನ ಕಾರ್ಯ ಶ್ಲಾಘನೀಯ. ಕಾರ್ಯ ಎಂದು ಹೇಳಿದರು

ಇನ್ನೂರ್ವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಗಲಕೋಟೆಯ ಕರ್ನಾಟಕ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ ಬಿ ವಿಜಯಶಂಕರ್ ಮಾತನಾಡಿ
ಭಾರತ ಸಂಸ್ಕೃತಿಗೆ ಅತ್ಯಂತ ಶ್ರೀಮಂತ ಸಂಸ್ಕೃತಿ ಬೇರೆ ಬೇರೆ ರಾಷ್ಟ್ರಗಳು ನಮ್ಮ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿವೆ ಭಾರತೀಯರಾದ ನಾವು ಇಂಥ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮ ಹೆಗಲ ಮೇಲಿದೆ ಎಂದು ಹೇಳಿದರು.

ಉಪನ್ಯಾಸಕರಾಗಿ ಆಗಮಿಸಿದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ್ ಕೊಪ್ಪ ಮಾತನಾಡಿ ಜೀವನದಲ್ಲಿ ಯಂಗ್ ಬದುಕಬೇಕು ನಮ್ಮ ಜೀವನವನ್ನು ಹೆಂಗ್ ರೂಪಿಸಿಕೊಳ್ಳಬೇಕು ಮನುಷ್ಯ ಪಥದಿಂದ ದೈವತ್ವದ ಪತದತ್ತ ಸಾಗಲು ದಾರಿಯನ್ನು ತೋರಿಸಿಕೊಟ್ಟವರು ನಮ್ಮ ಜನಪದರು. ಲಿಖಿತ ವಿಲ್ಲ ಶಾಸನವಿಲ್ಲ ಏನು ಇಲ್ಲ ಬಾಯಿಂದ ಬಾಯಿಗೆ ಬಂದ ಪದವೇ ಜಾನಪದ. ಜನರ ಮನಸ್ಸನ್ನು ಸ್ವಚ್ಛಗೊಳಿಸಿ ಸುಂದರ ಜೀವನವನ್ನು ರೂಪಿಸಿದೆ,

ಸಾಹಿತ್ಯ ಜಾನಪದ ಸಾಹಿತ್ಯ. ನಮ್ಮ ಅಡುಗೆಯಲ್ಲಿ. ನಡುಗೆಯಲ್ಲಿ. ಊಟದಲ್ಲಿ.ಆಟದಲ್ಲಿ. ಪಾಠದಲ್ಲಿ ಜಾನಪದವಿದೆ.ಇಂಥ ಶ್ರೀಮಂತ ಸಾಹಿತ್ಯ ಬೇರೆ ಎಲ್ಲಿ ಇಲ್ಲ. ಇಂಥ ಜಾನಪದ ತತ್ವ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನ ಹಸನಾಗುತ್ತದೆ. ಎಂದು ಹೇಳಿದ್ದರು
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಸಮಾಜಸೇವಕರಾದ ನೇತಾಜಿ ನಲವಡೆ , ಸತೀಶ ಓಶ್ವಾಲ್ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್.ಎಸ್. ಅಂಗಡಿ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು. ಉಪಸ್ಥಿತರಿದ್ದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಎಚ್. ಕೊಪ್ಪ ಜನಪದ ಕಲೆ, ಸಂಸ್ಕೃತಿ ಮತ್ತು ಸಮಾಜದಲ್ಲಿ ಜನಪದ ಪರಂಪರೆಯ ಪ್ರಾಮುಖ್ಯತೆಯನ್ನು ಒಳಗೊಂಡಂತೆ ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ಕಾಂಗ್ರೆಸ್ ಮುಖಂಡರು ರಾಯನಗೌಡ ತಾತರಡ್ಡಿ, ಉದ್ಯಮಿ ಗಣೇಶ ಅನ್ನಗೌನಿ, ಶ್ರೀ ಡಿ,ಬಿ, ವಿಜಯಶಂಕರ್ ಪತ್ರಕರ್ತರು ಹಾಗೂ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ .ಕ,ರಾ,ಜ,ಪ,ಪ ಬಾ ಜಿಲ್ಲಾಧ್ಯಕ್ಷರು ದಾನಯ್ಯಸ್ವಾಮಿ ಹಿರೇಮಠ, ಸಮಾಜಸೇವಕರು ಅಶೋಕ ನಾಡಗೌಡ, ಕ.ಹಾ.ಪ ಅಧ್ಯಕ್ಷರು ಎ.ಆರ್. ಮುಲ್ಲಾ. ಜಾನಪದ ಯುವ ಬ್ರಿಗೇಡ್ ನಗರ ಸಂಚಾಲಕ ಕೃಷ್ಣ ಕುಂಬಾರ್. ಉಪಾಧ್ಯಕ್ಷ ಆಕಾಶ ನಾಲತವಾಡ.ಬಸವರಾಜ್ ಮೇಟಿ ಶ್ರೀ ಭೀಮಸಿಂಗ್ ರಾಠೋಡ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಪುಂಡಲೀಕ ಮುರಾಳ ಸ್ವಾಗತ ಭಾಷಣ ಮಾಡಿದರು. ಐ.ಬಿ. ಹಿರೇಮಠ ಸಮಾರಂಭವನ್ನು ಸಂಯೋಜಿಸಿದರು.

ಜನಪದ ಪರಂಪರೆಯನ್ನು ಉಳಿಸಿ ಬೆಳೆಸಲು, ಸ್ಥಳೀಯ ಕಲಾವಿದರನ್ನು ಗೌರವಿಸಲು ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡಿದವು. ಜನಪದ ಪ್ರೇಮಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮುದ್ದೇಬಿಹಾಳದಲ್ಲಿ ಜನಪದ ಸಂಸ್ಕೃತಿಯ ಮಹತ್ವವನ್ನು ತೋರುವ ಈ ಭವ್ಯ ಸಮಾರಂಭವು ಕಲಾವಿದರಿಗೆ ಹೊಸ ಪ್ರೇರಣೆಯನ್ನು ನೀಡಿದೆ

ವರದಿ ಭೀಮಸಿಂಗ್ ನಾಯಕ್

ಪೊನ್ ನಂಬರ್ : +91 96320 09391

About vijay_shankar

Check Also

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.