
ನಾಳೆ ಹುನಗುಂದ ನಗರದಲ್ಲಿ ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಅದ್ದೂರಿ ಜಯಂತೋತ್ಸವವನ್ನು ಮಾಡುವುದಾಗಿ ಸಮಾಜ ಅಧ್ಯಕ್ಷ ಎಸ್ ಎಸ್ ಸಂಗಮದ ಅವರು ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು ಬೆಳಗ್ಗೆ ೯ ಗಂಟೆಗೆ ನಮ್ಮ ಸಮಾಜದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಿಂದ ಶಿವಶರಣ ನೂಲಿ ಚಂದಯ್ಯನವರ ಭಾವ ಚಿತ್ರದ ಮೆರವಣಿಗೆಯನ್ನು ಮುತ್ತೈದೆಯರಿಂದ ಕುಂಭ ಮೆರವಣಿಗೆ ಮೂಲಕ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ವಿಜಯ ಮಹಾಂತೇಶ ಕಲ್ಯಾಣ ಮಂಟಪಕ್ಕೆ ಬಂದು ತಲುಪಲಿದೆ.
ನಂತರ ೧ ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ,ಎಂದರು ನಂತರ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಇಲಕಲ್ಲ ನ ಪ,ಪೂ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಹಾಗೂ ಮುನಿಪ್ರ ಶ್ರೀ ಖುಷಿಬೇಂದ್ರ ದೇಶಿಕೇಂಧರ ಮಹಾಸ್ವಾಮಿಗಳು ,ನೂಲಿ ಚಂದಯ್ಯಪೀಠ ಶಿವಣಗಿ,

ಹಾಗೂ ಸಿದ್ಯದನಕೊಳ್ವಳದ ಡಾ: ಶಿವಕುಮಾರ್ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕರಾದ ಡಾ: ವಿಜಯಾನಂದ ಕಾಶಪ್ಪನವರ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಶ್ರೀ ಪಿ,ಸಿ ಗದ್ದಿಗೌಡರ್ ,ಮಾಜಿ ಶಾಸಕ ಶ್ರೀ ಎಸ್ ,ಜಿ, ನಂಜಯ್ಯನಮಠ, ಹಾಗೂ ಶ್ರೀ ದೊಡ್ಡನಗೌಡ ಜಿ ಪಾಟೀಲ ಸೇರಿದಂತೆ

ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಕೊರಮ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ನಂತರ ಮಾತನಾಡಿದ ಸಮಾಜದ ಮಾಜಿ ಅಧ್ಯಕ್ಷರು ಬಿಜೆಪಿ ಪಕ್ಷದ ಮುಂಡರಾದ ಬಸವರಾಜ್ ಹುನಕುಂಟಿ ಮಾತನಾಡಿ ಜಿಲ್ಲೆಯ ಹಾಗೂ ಅವಳಿ ಹುನಗುಂದ – ಇಲಕಲ್ಲ ತಾಲ್ಲೂಕಿನ ಕೊರಮ ಸಮಾಜದ ಎಲ್ಲಾ ಮುಖಂಡರು ನಾಳೆ ಬೆಳಗ್ಗೆ ೮ ಗಂಟೆಗೆ ಹುನಗುಂದ ನಗರದ ನಮ್ಮ ಸಮಾಜದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದಿಂದ

ಭವ್ಯ ಮೆರವಣಿಗೆ ನಡೆಯಲಿದ್ದು ತಾಯಂದಿರು ಬೇಗ ಬಂದು ಕುಂಭವನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಭಾಗವಹಿಸಬೇಕು ಕ್ಷೇತ್ರದ ಶಾಸಕರಾದ ಡಾ: ವಿಜಯಾಂದ ಎಸ್ ಕಾಶಪ್ಪನವರು ಹಾಗೂ ಮಾಜಿ ಶಾಸಕರಾದ ಶ್ರೀ ದೋಡ್ಡನಗೌಡ ಜಿ ಪಾಟೀಲ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ, ಸಹಕಾರಿ ಧುರಿಣರಾದ ಶ್ರೀ ಆರ್,ಪಿ ಕಲಬುರ್ಗಿ, ಸೇರಿದಂತೆ ಅನೇಕ ಮುಖಂಡರು ನಾಳೆ ಉಪಸ್ಥಿತಿ ವಹಿಸಲಿಸ್ದಾರೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಸಮಜಾದ ಮುಖಂಡರಾದ ಶ್ರೀ ತುಕಾರಾಮ ಭಜಂತ್ರಿ,

ಶ್ರೀ ಭೀಮಸಿ ( ಮುತ್ತಣ್ಣ ) ಭಜಂತ್ರಿ ಶ್ರೀ ಮಹಾಂತೇಶ ಬಿಂಜವಾಡಗಿ, ಶ್ರೀ ಡಿ,ಬಿ,ವಿಜಯಶಂಕರ್, ಶ್ರೀ ಸಂಗಪ್ಪ ಭಜಂತ್ರಿ, ಶ್ರೀ ರೋಮಣ್ಣ ಭಜಂತ್ರಿ, ಮುತ್ತಣ್ಣ ಭಜಂತ್ರಿ, ಶ್ರೀ ದೇವಪ್ಪ ಭಜಂತ್ರಿ, ಶ್ರೀ ಚಂದ್ರು ಭಜಂತ್ರಿ, ಶ್ರೀ ಯಶೋಧರ ಭಜಂತ್ರಿ, ಶ್ರೀ ಹನಮಂತ ಹಿರೇಮನಿ, ಶ್ರೀ ಸುಭಾಸ್ ಭಜಂತ್ರಿ ಶ್ರೀ ಮಲ್ಲೇಶ ಹುನಗುಂದ, ಶ್ರೀ ನಿಂಗಪ್ಪ ಕೆಲೂರ, ಶ್ರೀ ದೇವೇಂದ್ರಪ್ಪ ಭಜಂತ್ರಿ ಶ್ರೀ ಮಾರುತಿ ಭಜಂತ್ರಿ ಶ್ರೀ ಗದ್ದೆಪ್ಪ ಭಜಂತ್ರಿ ಉಪಸ್ಥಿತಿ ಇದ್ದರು.
ವರದಿ : ಭೀಮಸಿಂಗ್ ನಾಯಕ್
+91 96320 09391
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News