Breaking News

ವರುಣನ ಆರ್ಭಟಕ್ಕೆ ತತ್ತರಿಸಿದ ಅಮೀನಗಡ ಜನತೆ , ವಯೊವೃದ್ದ ದಂಪತಿಗಳ ಮನೆ ನುಗ್ಗಿದ ಮಳೆ ನೀರು,

ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿಹೋದ ಅಮೀನಗಡ ಪಟ್ಟಣ ಪಂಚಾಯಿತಿ 15ನೇ ವಾರ್ಡನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ಕಳೆದ ಎರಡು ತಿಂಗಳಿಂದ ನಡೆಯುತ್ತಲೇ ಇದೆ ಈಗ ವೃದ್ಧರು ಕೂಡ ಮಳೆಯ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ,

ಹಾಗೂ ಪ್ರತಿಯೊಂದು ಮನೆಗೂ ನೀರು ನುಗ್ಗಿದೆ ತಕ್ಷಣದಲ್ಲೇ 15 ನೇ ವಾರ್ಡಿನ ಹಿಂದೆ ಹರಿಯುವ ಹಳ್ಳಕ್ಕೆ ಒಂದು ಸರಿಯಾದ ಕಾಲುವೆಯನ್ನು ನಿರ್ಮಿಸಿ 15ನೇ ವಾರ್ಡಿನ ಜನರಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಎಂದು ಪಟಣ್ಣದ 15 ನೇ ವಾರ್ಡಿನ ಸಾರ್ವಜನಿಕರು ಪಟ್ಟಣ ಪಂಚಾಯತ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದ್ದರು ಇನ್ನೂ ಕೂಡಾ ಇತ್ತ ಯಾವ ಕೆಲಸವು ಆಗಿರುವುದಿಲ್ಲ,

ಧಾರಾಕಾರ ಮಳೆಗೆ ಅಮೀನಗಡ ಪಟ್ಟಣದ ವಾಡ೯ ನಂ6 ರಲ್ಲಿಯೋ ಎರಡು ಮನೆಗಳು ಬಿದ್ದಿದೆ, ವಾರ್ಡ ನಂ 15 ರಲ್ಲಿ ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿಹೋಗಿದೆ ಇಂತಹ ದುಸ್ಥಿತಿಯಲ್ಲಿ ವೃದ್ಧರಾದ ಗುರುಸ್ವಾಮಿ ಹಿರೇಮಠ ವಯಸ್ಸು 97 ಹಾಗೂ ಅವರ ಶ್ರೀಮತಿ ಉಮಾದೇವಿ ಹಿರೇಮಠ ವಯಸ್ಸು 86 ಮನೆ ಒಳಗಡೆ ನೀರು ನುಗ್ಗಿ ಸಿಲುಕಿಕೊಂಡಿದ್ದಾರೆ. ತಕ್ಷಣದಲ್ಲಿ ನೆರೆಹೊರೆಯ ಯುವಕರು ಅವರನ್ನು ಹೊರತೆಗೆದಿದ್ದಾರೆ, ಈ ತರಹದ ಘಟನೆಗಳು ಎರಡು ತಿಂಗಳಿನಿಂದ ನಡೆಯುತ್ತಲೇ ಇವೆ.

ಇತ್ತ ಪಟ್ಟಣ ಪಂಚಾಯತ ಸಿಬ್ಬಂದಿಯು ಕೂಡಾ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ, ಆದರೆ ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕು ಎಂದು ಅಮೀನಗಡ ಪಟ್ಟಣದ ವಾರ್ಡ ನಂ 15 ರ ಎಲ್ಲ ಜನರ ಕೇಳಿ ಕೋಳುತ್ತಿದ್ದಾರೆ.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.