
ಧನ್ನೂರ:
ಹುನಗುಂದ ಹಾಗೂ ಇಲಕಲ್ಲ ತಾಲ್ಲೂಕಿನಾಧ್ಯಾಂತ ಕರೋನಾ ಸೇನಾನಿಗಳಾದ ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ, ಪಂಚಾಯತ್ ಪೌರ ಕಾರ್ಮಿಕರು ಹಾಗೂ ಪತ್ರಕರ್ತರು ಹೀಗೆ ಕಳೆದ ೦೩ ತಿಂಗಳಲ್ಲಿ ಸಾವಿರಾರು ಕರೋನಾ ವಾರಿಯರ್ ಗಳನ್ನು ಗುರುತಿಸಿ ಅವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಸನ್ಮಾನಿಸಿ ಅವರ ಕುಟುಂಬಕ್ಕೆ ಕಿರಾಣಿ ಆಹಾರ ಕಿಟ್ ನೀಡುವ ಮೂಲಕ ಜಿಲ್ಲೆಯಲ್ಲಿ ಎಸ್,ಆರ್,ಎನ್ ,ಇ ಫೌಂಡೇಶನ್ ಸಮಾಜ ಸೇವೆ ಮಾಡುತ್ತಿದೆ,

ಇಡೀ ಹುನಗುಂದ ಮತಕ್ಷೇತ್ರದಲ್ಲಿ ನೊಂದವರ ಪಾಲಿನ ನೆರಳಾಗಿ ಸದಾ ಜನಪರ ಕಾರ್ಯ ಮಾಡುತ್ತಿರುವ S,R ನವಲಿ ಹಿರೇಮಠ ಅವರ ಕಾರ್ಯವನ್ನು ಇಡಿ ಕ್ಷೇತ್ರದ ಜನ ಕೊಂಡಾ ಡುತ್ತಿದ್ದಾರೆ, ಇದನ ಸಹಿಸಲು ಆಗದ ಕೆಲವು ಜನರಿಗೆ ಹಗಲು ರಾತ್ರಿ ನಿದ್ದೆ ಬರುತ್ತಿಲ್ಲ ನಿನ್ನೆಯ ದಿನ ಧನ್ನೂರು ಗ್ರಾಮದಲ್ಲಿ ಆಹಾರ ಕಿಟ್ ವಿತರಿಸಿದರು.

ನಂತರ ಹಾವರಗಿ ಗ್ರಾಮದಲ್ಲಿ ಅಲ್ಲಿನ ಕರೋನಾ ವಾರಿಯರ್ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸನ್ಮಾನ & ಆಹಾರ ಕಿಟ್ ನೀಡಲು ಮುಂದಾದಾಗ ಮಾಜಿ ಶಾಸಕ ಡಾ: ವಿಜಯಾನಂದ ಕುಟುಂಬದವರು ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹೆದರಿಸಿ ಆಹಾರ ಮತ್ತು ಸನ್ಮಾನ ಸ್ವೀಕರಿಸದಿರಲು ಕರೆ ಮಾಡಿ ಹೇದರಿಸಿದ್ದಾರೆ ,ಹೀಗಾಗಿ ಯಾರೂ ಕರೋನಾ ವಾರಿಯರ್ ೩:೩೦ ರ ವರೆಗೆ ಆಸ್ಪತ್ರೆ ಮುಂದೆ ಇದ್ದರು ಕರೆ ಬಂದ ನಂತರ ಎಲ್ಲರೂ ಮನೆಗೆ ಹೋದ್ರು ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬಂತೆ ಬಡವರ ಬಾಯಿಯಲ್ಲಿ ವಿಜಯಾನಂದ ಕಾಶಪ್ಪನವರ ಕುಟುಂಬದವರು ಮಣ್ಣು ಹಾಕಿದ್ದಾರೆ ಎಂದು ನವಲಿ ಹಿರೇಮಠ ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ SRNE ಫೌಂಡೇಶನ್ ಸಂಸ್ಥಾಪಕ ,ಅಧ್ಯಕ್ಷರಾದ ಶ್ರೀ ಎಸ್,ಆರ್ ನವಲಿ ಹಿರೇಮಠ ಅವರು ಡಾ: ವಿಜಯಾನಂದ ಕುಟುಂಬದವರು ಅಲ್ಲಿನ ಬಡವರ ಬಾಯಿಯಲ್ಲಿ ಮಣ್ಣು ಹಾಕುವ ಕೆಲಸ ಮಾಡಿದ್ದಾರೆ,ಆಹಾರ ಕಿಟ್ ಹಾಗೂ ಸನ್ಮಾನ ಮಾಡಲು ನಮ್ಮ ಕಾರ್ಯಕರ್ತರು ಮುಂದಾದಾಗ ಅವರನ್ನು ದಬ್ಬಾಳಿಕೆಯಿಂದ ಹೇದರಿಸಿ ಕಳಿದ್ದಾರೆ.

ಇದು ಅವರ ಕುಟುಂಬದ ಸಂಸ್ಕಾರ ಅಲ್ಲ ಇದನ ಜನತೆ ಕ್ಷೇತ್ರದಲ್ಲಿ ಸುಕ್ಷ್ಮವಾಗಿ ಗಮನಿಸುತ್ತಿದ್ದಾರೆ,ಎಂದರು. ದಬ್ಬಾಳಿಕೆಯಿಂದ ಜನನ್ನು ಹತ್ತಿಕ್ಕುವ ಪ್ರಯತ್ನ ಬಹಳ ಕಾಲ ಉಳಿಯದು ಎಂದರು.
ಈ ಸಂಧರ್ಭದಲ್ಲಿ ಅಪಾರ ಎಸ್,ಆರ್,ಎನ್,ಇ, ಕಾರ್ಯಕರ್ತರು ,ಅಭಿಮಾನಿಗಳು ,ಉಪಸ್ಥಿತಿ ಇದ್ದರು.

ಧನ್ನೂರು ಗ್ರಾಮದಲ್ಲಿ ಆಸ್ಪತ್ರೆ ಸಿಬ್ಬಂದಿ ಹಾಗೂ ಕರೋನಾ ವಾರಿಯರ್ ಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ SRNE ಫೌಂಡೇಶನ್ ಅಧ್ಯಕ್ಷರಾದ ಶ್ರೀ ಎಸ್,ಆರ್, ನವಲಿ ಹಿರೇಮಠ.