
ಗೋವಾ : ಬಡವರ ಬಂದು ,ಯುವಕರ ಯುತ್ ಐಕಾನ್ ಎಂದೇ ಗೋವಾ ಹಾಗೂ ಕರ್ನಾಟಕದ ವಿಜಯಪುರ & ಬಾಗಲಕೋಟೆ ಜಿಲ್ಲೆಯಲ್ಲಿ ಗುರುಸಿಕೊಂಡ ಹಾಗೂ ಕನ್ನಡಪರ ಸಂಘಟನೆಯ ಗೋವಾ ರಾಜ್ಯಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿದ್ದನ ಎಸ್ ಮೇಟಿ,ಅವರ ಧರ್ಮಪತ್ನಿ ಬಡವರ ಆಶ್ರಯ ದಾತೆ ಶ್ರೀಮತಿ ನೀಲಮ್ಮ ಎಸ್ ಮೇಟಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ವಿಜಯಪುರ, ಇಂದು ಗೋವಾದ ತಮ್ಮ ನಿವಾಸದಲ್ಲಿ ನಮ್ಮ BB News ನೊಂದಿಗೆ ಅವರು ಗೋವಾದ ಕನ್ನಡ ಜನತೆಗೆ ಒಂದು ಕರೆ ನೀಡಿದರು. ಕರ್ನಾಟಕದ ವಿವಿಧ ಬಾಗಲಕೋಟೆ, ರಾಯಚೂರು, ಕೊಪ್ಪಳ, ವಿಜಯಪುರ, ಗದಗ, ಜಿಲ್ಲೆಯಗಳಿಂದ ಬರುವ ನಮ್ಮ ಎಲ್ಲಾ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ಹಾಕಿಸಿಕೊಂಡು ಬರಬೇಕು,ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ನಾವು ಗೌರವಿಸಬೇಕು, ಅಲ್ಲದೆ ಎಲ್ಲಾ ಕನ್ನಡ ಜನತೆ ಬಹಳ ಕಷ್ಟ ಪಟ್ಟು ದುಡಿಯುತ್ತಿರಿ ಹಣವನ್ನು ಹಲವು ದುಷ್ಟ ಚಟಗಳಿಗೆ ವೆಚ್ಚ ಮಾಡದೆ ಹಣ ಉಳಿಸಿ ಆರೋಗ್ಯವಾಗಿ ಇರಿ ಎಂದರು ತಮ್ಮ ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನ್ನಡಿಗರು ಒಗ್ಗಟ್ಟಾಗಿ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಸರಕಾರಕ್ಕೆ ಮನವರಿಕೆ ಮಾಡಿ ಕೊಡಬೇಕು ಎಲ್ಲರೂ ನಮ್ಮ ಕನ್ನಡಪರ ಸಂಘಟನೆಗೆ ಸಹಕಾರ ನೀಡಿ ಒಗ್ಗಟ್ಟಾಗಿ ಗೋವಾದಲ್ಲಿ ಕನ್ನಡ ಭವಣ ನಿರ್ಮಾಣದ ಸಲುವಾಗಿ ನಾವು ಸರಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಿದ್ದೇವೆ,ಗೋವಾ ಸರಕಾರ ಈ ಬಗ್ಗೆ ಮಂದಾಗಬೇಕು,ಈಗಾಗಲೆ ನಮ್ಮ ಕರ್ನಾಟಕ ಸಿಎಂ ಅವರು ೨ ಕೋಟಿ ಕನ್ನಡ ಭವಣಕ್ಕೆ ಕೊಟ್ಟಿದಗದು ಅವರಿಗೆ ಗೋವಾ ಕನ್ನಡಗರ ಪರವಾಗಿ ಅಭಿನಂದನೆಗಳು ಎಂದರು. ರಾಜಕೀಯದಿಂದ ಸದ್ಯ ನಾನು ದೂರ ಉಳಿದಿದ್ದು ನಾನು ಈಗ ರಾಜಕೀಯದ ಯಾವ ವಿಷಯವನ್ನು ಮಾತನಾಡಲ್ಲ ಗೋವಾದ ನಮ್ಮ ಕನ್ನಡಿಗರ ಧ್ವನಿಯಾಗಲು ನಮ್ಮ ಮನೆಯವರು ಹಗಲು – ರಾತ್ರಿ ಹೋರಾಟ ಮಾಡುತ್ತಿದ್ದಾರೆ,ಕನ್ನಡ ಜನತೆಗಾಗಿ ಇಲ್ಲಿ ನಾವು ೬೦ ವರ್ಷಗಳಿಂದ ಬದುಕುಕಟ್ಟಿಕೊಂಡು ಕನ್ನಡಪರ ಸಂಘಟನೆ ಹುಟ್ಟು ಹಾಕಿದ್ದಾರೆ,ನಮ್ಮ ಕನ್ನಡ ಜನತೆ ಅದನ ಅರಿತು ಸಹಕಾರ ನೀಡಬೇಕು ಎಂದರು.