ಬೆಳಗಾವಿ: ಇನ್ಸ್ಪೆಕ್ಟರ್ ಜಾವೇದ ಮುಶಾಪುರಿ ನೇತೃತ್ವದ ಎಂಪಿಎಂಸಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ನಾಲ್ವರು ಅಂತರಾಜ್ಯ ಗಾಂಜಾ ಸಾಗಾಟಗಾರರನ್ನ ಬಂಧಿಸಿದ್ದಾರೆ. ಬಂಧಿತರಿಂದ 6 ಕೆಜಿ ಗಾಂಜಾ, 3 ಬೈಕ್ ಮತ್ತು ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ದ್ವಿಚಕ್ರ ವಾಹನಗಳ ಮೂಲಕ ಮಹಾರಾಷ್ಟ್ರದಿಂದ ಬೆಳಗಾವಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಎಂಪಿಎಂಸಿ ಪೋಲಿಸರ ಕಾರ್ಯಕ್ಕೆ ಎಸಿಪಿ ಸದಾಶಿವ ಕಟ್ಟಿಮನಿ, ಡಿಸಿಪಿ ವಿಕ್ರಮ ಅಮಟೆ ಹಾಗೂ ಪೋಲಿಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ