
ನೂತನ ಬಾಗಲಕೋಟೆ ಜಿಲ್ಲೆಯ ಕೊರಮ ಸಮಾಜದ ಅಧ್ಯಕ್ಷರಾಗಿ ಇಂದು ಶ್ರೀ ಅಶೋಕ ಭಜಂತ್ರಿ ಅವರು ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲೆಯ ಕೊರಮ ಸಮಾಜದ ನೂತನ ಪದಾಧಿಕಾರಿಗಳನ್ನು ನಗರದ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು, ಕೊರಮ ಸಮಾಜದ(ಭಜಂತ್ರಿ) ನೂತನ ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯಲ್ಲಿ BO,DDPI ಆಗಿ ನಿವೃತ್ತಿ ಹೊಂದಿದ ನಂತರ ಸಮಾಜದ ಭಲವರ್ಧನೆ ಹಾಗೂ ಚಾಣಕ್ಯ ಸಂಘಟಕರಾದ ಅಶೋಕ ಅವರು ೧೯೯೨ ರಲ್ಲಿಯೇ ನೌಕರರ ಸಂಘದ ಮೂಲಕ ಸಮಾಜದ ಒಗ್ಗಟ್ಟಿನ ಮಂತ್ರ ಜಪಿಸಿದವರು ಅಂದು ಅವರು ಸಮಾಜದ ಒಗ್ಗಟ್ಟಿಗಾಗಿ ಅವೀರತ ಶ್ರಮ ಹಾಕಿ ಮೂಲ ಬೂನಾದಿ ಹಾಕಿದವರು ಇಂದು ಜಿಲ್ಲೆಯ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದರು. ಜಿಲ್ಲಾ

ನೂತನ ಬಾಗಲಕೋಟೆ ಜಿಲ್ಲೆಯ ಕೊರಮ ಸಮಾಜದ ಗೌರವ ಅಧ್ಯಕ್ಷರಾಗಿ ಇಂದು ಶ್ರೀ ಮೋಹನ್ ಕಟ್ಟಿಮನಿ ಅವರು ಅವಿರೋಧವಾಗಿ ಆಯ್ಕೆಯಾದರು.ಅವರೊಂದಿ ಒಂದು ನನ್ನ ಸೆಲ್ಪಿ ಪೊಟ
ಜಿಲ್ಲಾ ಕೊರಮ ಸಮಾಜದ ಗೌರವ ಅಧ್ಯಕ್ಷರಾಗಿ ಮೋಹನ್ ಕಟ್ಟಿಮನಿ ಅವರು ಆಯ್ಕೆಯಾದರು ಸಮಾಜದ ಒಗ್ಗಟಿಗಾಗಿ ಅನೇಕ ಸಮಾಶವೇಶ ಹಾಗೂ ಕಾರ್ಯಕ್ರಮಗಳ ಮೂಲಕ ಸಮಾಜದ ಭಲವರ್ಧನೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿದವರು ಇಂದು ಸಮಾಜದ ಎಲ್ಲಾ ಪ್ರಮುಖರ ಸಮ್ಮುಖದಲ್ಲಿ ಅವಿರೋಧವಾಗಿ ಜಿಲ್ಲಾ ಸಮಿತಿಯ ಗೌರವ ಅಧ್ಯಕ್ಷರಾಗಿ ಆಯ್ಕೆಯಾದರು .

ಕೊರಮ ಸಮಾಜದ ಮಾಣಿಕ್ಯ ಸಂಘಟನ ಚತುರ ಜಮಖಂಡಿ ನಗರದಲ್ಲಿ ಸಮಾಜದ ಅರಿವಿನ ಕ್ರಾಂತಿ ಮೂಡಿಸಿ ಸಮಾಜದ ಒಗ್ಗಟಿಗೆ ಹಾಗೂ ಅಭಿವೃದ್ಧಿಗೆ ಕಂಕಣ ಬದ್ದವಾಗಿ ನಿಂತ ರಮೇಶ ಭಜಂತ್ರಿ ಅವರು ಇಂದು ಜಿಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈ ಮೂವರು ಈ ಸಮಾಜದ ಏಳಿಗೆಗಾಗಿ ಅನೇಕ ದಿಗ್ಗಜ ರಾಜಕೀಯ ನಾಯಕರೊಂದಿಗೆ ಹಾಗೂ ರಾಜ್ಯ ಮಟ್ಟದ ಸರಕಾರಿ ಅಧಿಕಾರಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ,ಇವರಿಂದಾದರೂ ಈ ಸಮಾಜದ ಚಿತ್ರಣ ಬದಲಾಗಿ ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕು ಹಾಗೂ ಹಳ್ಳಿ ಹಳ್ಳಿಗಳಲ್ಲಿ ಸಮಾಜ ಒಗ್ಗಟ್ಟಾಗಿ, ಸಂಘಟನೆ ಆದಾಗ ಈ ಸಣ್ಣ ಅಸಂಘಟಿತ ಸಮಾಜ ರಾಜಕೀಯವಾಗಿ,ಹಾಗೂ ಆರ್ಥಿಕವಾಗಿ ಬೆಳೆಯಲಯ ಲು ಸಾಧ್ಯ . ಅದು ಅಲ್ಲದೆ ನಮ್ಮ ಜನಾಂಗದಲ್ಲಿ ಯಾರು ರಾಜಕೀಯವಾಗಿ ಬಲಶಾಲಿ ಇಲ್ಲ ,ನಮ್ಮ ಜನಾಂಗದ ಉಳಿವಿಗಾಗಿ,ಮುಂದಿನ ನಮ್ಮ ಮಕ್ಕಳ ಭವಿಷ್ಯದ ಸಲುವಾಗಿ ಈ ಸದಾಶಿವ ಆಯೋಗದ ವರದಿ ತಡೆಯುವ ಸಲುವಾಗಿ ನಾವೆಲ್ಲರೂ ಇಂದು ಸಮಾಜವನ್ನು ಬಡೆದೆಬ್ಬಿಸಿ ಸಂಘಟನೆ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಲ್ಲಿ ಎರಡು ಮೂರು ಭಣಗಳನ್ನು ಮಾಡಿ ಒಡೆದು ಆಳುವ ಇಬ್ಬದಿ ನೀತಿ ಅನುಸರಿಸದೇ ನಾವೆಲ್ಲರೂ ವಯಕ್ತಿಕ ಸ್ವಾರ್ಥವನ್ನು ಬದಿಗೊತ್ತಿ ಅಶೋಕ ಸರ್, ಮೋಹನ್ ಸರ್ ರಮೇಶ ಸರ್ ಅವರ ಜೊತೆಗೆ ಸಹಕಾರ, & ಸಹಾಯ ಮಾಡಿ ಈ ಸಮಾಜದ ಭಲವರ್ಧನೆಗೆ ನಾವು ಕೈ ಜೊಡಿಸಿ ಒಗ್ಗಟ್ಟಾಗಿ ನಿಲ್ಲುವ ಮೂಲಕ ಈ ಸದಾಶಿವ ಆಯೋಗದ ವರದಿ ವಿರಿದ್ದ ತೋಡೆ ತಟ್ಟಬೇಕಾಗಿದೆ. ಮಾನ್ಯ ನಮ್ಮ ಕೊರಮ ಸಮಾಜದ ನೂತನ ಎಲ್ಲಾ ಪದಾಧಿಕಾರಿಗಳು ಆದಷ್ಟು ಬೇಗನೆ ಸಮಾಜದ ಪ್ರತಿ ತಾಲೂಕಿನಲ್ಲಿ ಸಭೆ ಕರೆದು ಎಲ್ಲಾ ತಾಲೂಕಿನ ಅಧ್ಯಕ್ಷರ ಸಭೆ ಕರೆದು ಆಯಾ ತಾಲೂಕಿನಲ್ಲಿ ಇರುವಂತಹ ಸಮಾಜದ ಒಗ್ಗಟಿಗೆ ಕೈ ಜೊಡಿಸಿ ಒಂದು ಬೃಹತ್ ಸಮಾವೇಶದ ಮೂಲಕ ರಣಕಹಳೇ ಮೊಳಗಿಸಿ ಸರಕಾರಕ್ಕೆ ನಮ್ಮ ಸಮಾಜದ ತಾಕತ್ತು ತೋರಿಸುವ ಕಾಲ ಬಂದಿದೆ ಎಲ್ಲರೂ ಎದ್ದೇಳಿ ನನ್ನ ಕುಳುವ ಬಾಂಧವರೆ ನಾವೆಲ್ಲರೂ ಈ ಸಮಿತಿಯೊಂದಿಗೆ ಕೈ ಜೊಡಿಸೋಣ, ಜೈ ಕುಳುವಾ…..
ನೂತನ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಗೌರವ ಅಧ್ಯಕ್ಷರಿಗೆ ಹಾಗೂ ಪ್ರದಾನ ಕಾರ್ಯದರ್ಶಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ, ವಿಜಯಶಂಕರ್ ಅವರು ಹಾಗೂ ಈ ಸಮಿತಿ ಜಿಲಾ ಸದಸ್ಯರಾದ ಶ್ರೀ ರಮೇಶ ಭಜಂತ್ರಿ ಹಾಗೂ ಯುವ ಮುಖಂಡ ಶ್ರೀ ದುರಗಪ್ಪ ಭಜಂತ್ರಿ ಹಾಗೂ ನೂತನ ಕೊರಮ ಸಮಾಜದ ಜಿಲ್ಲಾ ಸಮಿತಿ ಸದಸ್ಯ ಶ್ರೀ ಹನಮಂತ ಹಿರೇಮನಿ ಅವರು ಸೇರಿ ಸನ್ಮಾನ ಮಾಡಿ ಶುಭ ಕೋರಿದರು.