Breaking News

vijay_shankar

ಗ್ರಾ.ಪಂ. ಚುನಾವಣೆ ವೇಳಾಪಟ್ಟಿ; ಆಯೋಗದ ನಿಲುವು ಕೇಳಿದ ಹೈಕೋರ್ಟ್

ಬೆಂಗಳೂರು: ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿರುವ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಹೈಕೋರ್ಟ್‌, ರಾಜ್ಯ ಚುನಾವಣ ಆಯೋಗದ ನಿಲುವನ್ನು ಕೇಳಿದೆ. ಈ ಕುರಿತು ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಕೆ. ಸಿ. ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ. ಎಸ್‌. ಓಕ್‌ ಹಾಗೂ ನ್ಯಾ| ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಚುನಾವಣ ಆಯೋಗದ …

Read More »

ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ನಟ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಕಲಾವಿದರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಈಗ ಕಿರುತೆರೆ ನಟ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಬೈನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮೀರ್ ಶರ್ಮಾ ‘ಕಹಾನಿ ಘರ್-ಘರ್ ಕಿ’ ಧಾರಾವಾಹಿಯಲ್ಲಿ ನಟಿಸಿದ್ದ. ನಟ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡು ಎರಡು ದಿನವಾಗಿದೆ ಎಂದು ಅಂದಾಜಿಸಲಾಗಿದೆ. ಪೊಲೀಸರು ಮನೆಯೊಳಗೆ ಹೋದಾಗ ಶವ ಕೊಳೆತ ಸ್ಥಿತಿಯಲ್ಲಿತ್ತಂತೆ. ಸೆಕ್ಯುರಿಟಿ ಗಾರ್ಡ್ ಗೆ ಕಿಟಕಿಯಲ್ಲಿ ಶವ ಫ್ಯಾನ್ …

Read More »

ಘಟಪ್ರಭಾ ನದಿ ನೀರು ಏರಿಕೆ; ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗುವ ಭೀತಿ

ಬಾಗಲಕೋಟೆ: ನಿರಂತರ ಮಳೆಗೆ ಘಟಪ್ರಭಾ ನದಿ ನೀರು ಏರಿಕೆಯಾಗಿದೆ. ಇದರ ಪರಿಣಾಮ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥನಾದ ಸುತ್ತ ನೀರು ಆವರಿಸಿದೆ. ಕಳೆದ ವರ್ಷ ಪ್ರವಾಹದ ವೇಳೆ ಈ ದೇವಸ್ಥಾನ ಸಂಪೂರ್ಣ ಜಲಾವೃತವಾದ್ದು, ಈಗ ಇದೇ ರೀತಿ ನದಿ ನೀರು ಹೆಚ್ಚಾದರೆ ಮತ್ತೆ ದೇವಸ್ಧಾನ ಜಲಾವೃತವಾಗುವ ಸಾಧ್ಯತೆ ಇದೆ. ನಿರಂತರ ಮಳೆಯಿಂದಾಗಿ ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆ ಯಾಗಿದೆ. …

Read More »

ಮೈಸೂರಿನಲ್ಲಿ ಭಾರಿ ಮಳೆಗೆ 4 ಮನೆಗಳು ಕುಸಿತ; ಹಾಸನದಲ್ಲಿ ವರುಣನ ಆರ್ಭಟ ಹೆಚ್ಚಳ

ಮೈಸೂರಿನಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸುರಿದ ಭಾರೀ ಮಳೆಯಿಂದ ಮೈಸೂರಿನ ಹುಣಸೂರು ತಾಲೂಕಿನಲ್ಲಿ ನಾಲ್ಕು ಮನೆಗಳು ಕುಸಿದಿವೆ. ಮೈಸೂರಿನ ಪಿರಿಯಾಪಟ್ಟಣದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಸಿದ್ದ ಗೋಲ್ಡನ್ ಟೆಂಪಲ್‌ಗೆ ತೆರಳುವ ಸೇತುವೆ ಬಂದ್ ಆಗಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾಗಿರುವುದರಿಂದ ಪಿರಿಯಾಪಟ್ಟಣದ ಕೊಪ್ಪ ಗ್ರಾಮದಲ್ಲಿ ಸೇತುವೆ ಮುಳುಗಡೆಯಾಗಿದೆ. ಗೋಲ್ಡನ್ ಟೆಂಪಲ್ಗೆ ತೆರಳಲು ಪರ್ಯಾಯ ಮಾರ್ಗ ಬಳಸುವ ಸೂಚನೆ ನೀಡಲಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಅಪಾರ ಪ್ರಮಾಣದ …

Read More »

ರಾಜ್ಯದ ಈ 7 ಜಿಲ್ಲೆಗಳಲ್ಲಿ ಭಾರಿ ಮಳೆ ಆ.11ರವರೆಗೆ ರೆಡ್ಡ ಅಲಟ್೯ ಘೋಷಣೆ

ಈಗಾಗಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇದರ ನಡುವೆಯೂ ಆಗಸ್ಟ್ 11ರವರೆಗೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವ ರಾಜ್ಯ ಹವಾಮಾನ ಇಲಾಖೆ, ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ಅಲ್ಲದೇ ಕರಾವಳಿ, ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ …

Read More »

ಅಕ್ರಮಗಳ ಬಗ್ಗೆ ಸುದ್ದಿ ಪ್ರಕಟಿಸುವುದು ವರದಿಗಾರನ ಮೂಲಭೂತ ಹಕ್ಕು: ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ: ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ, ಪ್ರಾಮಾಣಿಕವಾಗಿ ಸುದ್ದಿಗಳನ್ನ ಪ್ರಕಟಿಸುವುದು ವರದಿಗಾರನ ಮೂಲಭೂತ ಹಕ್ಕು. ಸರಿಯಾದ ರೀತಿಯ ವರದಿಗಾರಿಕೆಯಿಂದ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ. ಖಾಸಗಿ ಪತ್ರಕರ್ತರೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ. ಅಕ್ರಮ ಮರಳು‌ ಗಣಿಗಾರಿಕೆ ಬಗ್ಗೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಸುದ್ದಿ …

Read More »

ಮೈದುಂಬಿದ ಘಟಪ್ರಭೆ: ಮಿರ್ಜಿ-ಮಹಾಲಿಂಗಪುರ ರಸ್ತೆ ಸಂಪರ್ಕ ಕಡಿತ

ಬಾಗಲಕೋಟೆ: ಬೆಳಗಾವಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಮುಧೋಳ ತಾಲ್ಲೂಕಿನ ಮಿರ್ಜಿ- ಮಹಲಿಂಗಪುರ ನಡುವಿನ ಘಟಪ್ರಭಾ ನದಿಯ ಹಳೆ ರಸ್ತೆಯ ಸೇತುವೆ ಜಲಾವೃತವಾಗಿದೆ. ಮಿರ್ಜಿ, ಚನಾಳ, ಮಲ್ಲಾಪುರ ಒಂಟಗೋಡಿ ಗ್ರಾಮಗಳಿಂದ ಮಹಾಲಿಂಗಪುರ ಪಟ್ಟಣಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿದೆ.

Read More »

ಜಮ್ಮು-ಕಾಶ್ಮೀರದ ಬಗ್ಗೆ ಚೀನಾ ಹೇಳಿಕೆ: ಆಂತರಿಕ ವಿಷಯದಲ್ಲಿ ಮಾತನಾಡದಂತೆ ಭಾರತದ ಎಚ್ಚರಿಕೆ

ನವದೆಹಲಿ: ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಕಾಮೆಂಟ್ ಮಾಡಿದ್ದು ಭಾರತ ಎಚ್ಚರಿಕೆ ನೀಡಿದೆ. ಚೀನಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅನುರಾಗ್ ಶ್ರೀವಾಸ್ತವ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡದೇ ಇರುವಂತೆ ಚೀನಾಗೆ ಸಲಹೆ ನೀಡಿರುವುದಾಗಿ ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಬಗ್ಗೆ ಚೀನಾದ ಹೇಳಿಕೆಗಳನ್ನು ಗಮನಿಸಿದ್ದೇವೆ, ಈ ವಿಚಾರವಾಗಿ ಮಾತನಾಡುವುದಕ್ಕೆ ಚೀನಾಗೆ ಮಾನ್ಯತೆ ಇಲ್ಲ. ಬೇರೆ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿ ಮಾತನಾಡದಂತೆ ಚೀನಾಗೆ …

Read More »

ಎಲ್ಲ ಪ್ರಕಾರಗಳ ವೀಸಾದಾರರಿಗೆ ಭಾರತದಿಂದ ಯುಎಇಗೆ ಪ್ರಯಾಣಿಸಲು ಶೀಘ್ರ ಅವಕಾಶ

ದುಬೈ (ಯುಎಇ), ಆ. 5: ಎಲ್ಲ ಪ್ರಕಾರಗಳ ವೀಸಾ ಹೊಂದಿರುವವರು ಭಾರತದಿಂದ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದ ನಿರ್ಧಾರವೊಂದನ್ನು ಶೀಘ್ರವೇ ನಿರೀಕ್ಷಿಸಲಾಗಿದೆ ಎಂದು ಯುಎಇಗೆ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ. ”ಹೊಸ ವೀಸಾಗಳ ವಿತರಣೆಯನ್ನು ಯುಎಇ ಇತ್ತೀಚೆಗೆ ಆರಂಭಿಸಿರುವುದರಿಂದ, ಸೂಕ್ತ ವೀಸಾಗಳನ್ನು ಹೊಂದಿರುವ ಭಾರತೀಯರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ನಾವು ಭಾರತದ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದೇವೆ. ಈ ಬಗ್ಗೆ ಶೀಘ್ರ ನಿರ್ಧಾರ ಹೊರಬೀಳುವ …

Read More »

ಗೋವಾ- ಕರ್ನಾಟಕ ನಡುವಿನ ಘಾಟಿಯಲ್ಲಿ ಭೂ ಕುಸಿತ: ರೈಲು ಸಂಚಾರ ವ್ಯತ್ಯಯ

ಪಣಜಿ: ಭಾರಿ ಮಳೆಯಿಂದಾಗಿ ಗೋವಾ- ಕರ್ನಾಟಕ ನಡುವಿನ ಘಾಟಿಯಲ್ಲಿ ಎರಡು ಪ್ರತ್ಯೇಕ ಭೂ ಕುಸಿತ ಸಂಭವಿಸಿದ್ದು, ರೈಲು ಮತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಭೂಕುಸಿತದಿಂದಾಗಿ, ಬುಧವಾರ ಮುಂಜಾನೆ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣವನ್ನು ತಲುಪಬೇಕಿದ್ದ ಹಜ್ರತ್‌ ನಿಜಾಮುದ್ದೀನ್‌ ರೈಲು ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಕ್ಕೆ ತೆರಳಿದೆ. ಅಲ್ಲಿಂದ ನಿಗದಿತ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರಿಗೆ ವಿಶೇಷ ಬಸ್‌ ಸೌಕರ್ಯ ಕಲ್ಪಿಸಲಾಗಿತ್ತು. ಚೋರ್ಲಾ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತವು ಗೋವಾ ಮತ್ತು …

Read More »