ಹನುಮನಾಳ : ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಗಳಾದ ಸಂಗಮೇಶ ಗುಜ್ಜಲ್ ಅವರಿಗೆ ಅವರ ಕರ್ತವ್ಯ ನಿಷ್ಟೆ ಮೆಚ್ಚಿ ಹಾಗೂ ಸಂಘದ ಬೆಳವಣಿಗೆ ಮತ್ತು ಅಲ್ಪಾವಧಿಯ ಸಮಯದಲ್ಲಿ ಸಂಪೂರ್ಣ ಸಂಘವು ಸಾಲದಲ್ಲಿ ಇದ್ದುದ್ದನ ಮತ್ತು ಸಂಘದ ಬಗ್ಗೆ ಜನ ಆ ಕಡೆ ತಿರುಗಿ ಸಹ,

ನೋಡದ ಸ್ಥಿತಿಯಲ್ಲಿ ಇದ್ದ ಈ ಸಂಸ್ಥೆಯ ಚಿತ್ರಣವನ್ನು ಬದಲಿಸಿದ ಸಂಗಮೇಶ ಅವರ ಕಾರ್ಯ ದಕ್ಷತೆಯನ್ನು ಗುರುತಿಸಿ ಇಂದು ಅವರಿಗೆ ನಮ್ಮ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ ಮತ್ತು ಬಯಲು ಬಿರುಗಾಳಿ ಪತ್ರಿಕೆಯಿಂದ ಸಂಗಮೇಶ ಅವರಿಗೆ ಇಂದು ಸಂಘದ ಅಧ್ಯಕ್ಷ ,,,,ಹವಾಲ್ದಾರ್ ಅವರ ನೇತೃತ್ವದಲ್ಲಿ ಹಾಗೂ ಪತ್ರಿಕೆಯ ಸಂಪಾದಕ ಡಿ,ಬಿ,ವಿಜಯಶಂಕರ್ ಅವರಿಂದ ಅತ್ಯುತ್ತಮ ಕರ್ತವ್ಯ ಪಾಲನಾ ,ರಾಜ್ಯ ಪ್ರಶಸ್ತಿ ನೀಡಿ ಗೌರವ ಸನ್ಮಾನ ಮಾಡ ಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಹಾಂತೇಶ ಜಿ ಹವಾಲ್ದಾರ್ ಇವರ ಅತ್ಯುತ್ತಮ ಕಾರ್ಯ ಚಟುವಟಿಕೆಗಳನ್ನು ನೋಡಿ ಇವರಿಗೂ ಸಹ ಗೌರವ ಸನ್ಮಾನ ಮಾಡಲಾಯಿತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಮಹಾಂತೇಶ ಅವರು ಕಳೇದ ನನ್ನ ನಾಲ್ಕು ವರ್ಷಗಳ ಆಡಳಿತ ಸಂಘದಲ್ಲಿರುವ ಭ್ರಮಾಂಡ ಭ್ರಷ್ಟಾಚಾರ ತೊಳೆಯಲು ಅನಾವಶ್ಯಕ ಸಮಯ ಹಾಳಾಗಿದೆ ಅಂತಹ ಭ್ರಷ್ಟ ಕಾರ್ಯದರ್ಶಿಈ ಹಿಂದೆ ಇದ್ದ ಅವರನ್ನು ಇಲ್ಲಿಂದ ಕಿತ್ತಿ ಹಾಕುವಷ್ಟರಲ್ಲಿ ಸಮಯ ಹೊಯಿತು ಅಲ್ಲದೆ ಸಂಘವನ್ನು ಎಲ್ಲಾ ಹಾಳು ಮಾಡಿ ರೈತರಿಗೆ ಅಪಾರ ಪ್ರಮಾಣದ ಅನ್ಯಾಯ ಆಗಿದೆ,ಅದನ ಈಗ ನೂತನ ಕಾರ್ಯದರ್ಶಿ ಸಂಗಮೇಶ ತುಂಬಿ ಕೊಟ್ಟಿದ್ದಾರೆ,

ಮುಂದೆ ಇನ್ನೂ ಯಾವತ್ತು, ಆ ತರ ಆಗಲು ಬಿಡಲ್ಲ ೧೯೭೪ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಒಬ್ಬ ಒಳ್ಳೆಯ ಕಾರ್ಯದರ್ಶಿ ಕೈಯಲ್ಲಿ ,ಉತ್ತಮ ಕೆಲಸಗಾರನ ಕೈಯಲ್ಲಿ ಇದು ಸಿಗಲಿಲ್ಲ ,ಹೀಗಾಗಿ ನಮ್ಮ ಆಡಳಿತ ಬಂದ ನಂತರ ಉತ್ತಮ ಕೆಲಸ ಮಾಡಿದ್ದೇವೆ ಇದರ ಫಲವಾಗಿ ಇಂದು ಸ್ವತಹ ಮಾಧ್ಯಮ ಮಿತ್ರರು ನಮ್ಮ ಸಂಘದ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಹಾಗೂ ಸಂಘದ ಕಾರ್ಯದರ್ಶಿ ಅವರ ಪ್ರಾಮಾಣಿಕ ಸೇವೆ ನೋಡಿ ,ಕೇಳಿ ಇಂದು ಅತ್ಯುತ್ತಮ ಕಾರ್ಯನಿ ರ್ವಾಹಕ, ರಾಜ್ಯ ಪ್ರಶಸ್ತಿ ನೀಡಿದ್ದು ನಮಗೆ ಬಹಳ ಹೆಮ್ಮೆ ಎನಿಸಿದೆ.
ಇದು ಬರಿ ನಮ್ಮ ಸಂಘಕ್ಕೆ ಸಂದ ಗೌರವ ಅಲ್ಲ ಇಡೀ ಜಾಹಗೀರ ಗುಡದೂರು ಗ್ರಾಮಕ್ಕೆ ಸಂದ ಗೌರವ ,ಇದರಿಂದ ಮಾನ್ಯ ಸಂಪಾದಕರಿಗೆ ನಮ್ಮ ಸಂಘದ ಪರವಾಗಿ ಹಾಗೂ ಗ್ರಾಮದ ಪರವಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ,ನಿಮ್ಮೆಲ್ಲರ ನಂಬಿಕೆಯನ್ನು ನಮ್ಮ ಆಡಳಿ ಮಂಡಳಿ ಯಾವತ್ತು ಸುಳ್ಳು ಮಾಡಲ್ಲ ಇಡೀ ಕೊಪ್ಪಳ ಜಿಲ್ಲೆ ನಮ್ಮ ಸಂಘದ ಕಡೆ ನೋಡುವ ಹಾಗೆ ರೈತರಿಗೆ ವಿವಿಧ ಸಾಲ,ಸೌಲಭ್ಯ ಒದಗಿಸಲು ತಮ್ಮೆಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು,
ಸದರಿ ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸೇರಿದಂತೆ ಸಂಘದ ಕಾರ್ಯದರ್ಶಿ ಸಂಗಮೇಶ, ಗುಜ್ಜಲ್ ಹಾಗೂ ಇನ್ನೂರ್ವ ಕಾರ್ಯದರ್ಶಿಗಳಾದ ಮಹಾಂತೇಶ, ಮತ್ತು ಗ್ರಾಮದ ಪ್ರಮುಖರಾದ ನಿಂಗಪ್ಪ ಕುಂಬಾರ,ಬಸವರಾಜ ರಾಜೂರು, ರವಿ, ಪರಸಾಪೂರ,ಉಮೇಶ್ ಪರಸಾಪೂರ, ನಿಂಗಪ್ಪ, ತುಮರಿಕೊಪ್ಪ, ಮಂಜು, ಪೂಜಾರಿ, ಈಶಪ್ಪ, ಬಾದವಾಡಗಿ ಡಗಿ ,ಹನಮಂತ. ಘನವಾರಿ, ಪದ್ದಪ್ಪ,ಸೂಡಿ,ಸಿದ್ದಪ್ಪ,ಸೂಡಿ ಶರಣಪ್ಪ ಕಳ್ಳಿಗು ಡ್ಡ ,ಹಾಗೂ ಸಂಘದ ಸದಸ್ಯರು, ಯುವಕರು ಪಾಲ್ಗೊಂಡಿದ್ದರು.