ಮಾಸ್ಕೋ: ರಷ್ಯಾದ ವೆಕ್ಟೊರ್ ಸ್ಟೇಟ್ ಸೆಂಟರ್ ಆಫ್ ವೈರಾಲಜಿ ಆ್ಯಂಡ್ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿರುವ ಕೋವಿಡ್ ವೈರಸ್ ನಿಗ್ರಹ ಲಸಿಕೆಯು ಪ್ರಯೋಗಗಳಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ ಎಂದು ಕೇಂದ್ರದ ನಿರ್ದೇಶಕ ರಿನಟ್ ಮಾಕ್ಸಿಯುಟೊವ್ ಹೇಳಿದ್ದಾರೆ. ಈ ಲಸಿಕೆ ವೆಕ್ಟೊರ್ ಕೇಂದ್ರದ ಅಮೈನೋ ಆ್ಯಸಿಡ್‌ಗಳ ಮಿಶ್ರಣದ ವಿಶಿಷ್ಟ ಪೆಪ್ಟೆ„ಡ್ ಆಧಾರಿತವಾಗಿದ್ದು, ತನ್ನ ಪ್ರಿಕ್ಲಿನಿಕಲ್ ಪರೀಕ್ಷೆಗಳಲ್ಲಿ ಹೆಚ್ಚು ದಕ್ಷತೆಯನ್ನು ಪ್ರದರ್ಶಿಸಿ ಕ್ಲಿನಿಕಲ್ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ರಿನಟ್ ತಿಳಿಸಿದ್ದಾರೆ. ಇನ್ನು ಮೊದಲ ಹಂತದ ಪ್ರಯೋಗದ …
Read More »ಎರಡು ವರ್ಷದಿಂದ ಎಸ್ಕಾಂ ಅಧಿಕಾರಿಗಳ ಬೇಜವಬ್ದಾರಿ ತನಕ್ಕೆ ಬೇಸತ್ತ ಜನತೆ
ಕುಷ್ಟಗಿ: ತಾಲೂಕಿನ ಗಡಿ ಜಿಲ್ಲೆಯಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುರಡಿ ಗ್ರಾಮಕ್ಕೆ ಅಂಟಿಕೊಂಡ ಕೊನೆ ಕುಗ್ರಾಮ ಪರಮನಟ್ಟಿ ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀಗೂಡುದುರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡೆ ಹಳ್ಳಿ ಪರಮನಟ್ಟಿ ಯಾಕೊ ಏನೊ ಇಲ್ಲಿನ ಎಸ್ಕಾಂ ಅಧಿಕಾರಿ ಸೇರಿದಂತೆ ಇಲ್ಲಿನ ಲೈಮನ್ ರಗಿ ಸಾರ್ವಜನಿಕ ತೊಂದರೆ ಆದ್ರು ಕಣ್ಣಿದ್ದು ಕುರುಡರಂತೆ ಎರಡು ವರ್ಷಗಳಿಂದ ಗ್ರಾಮದ ಹನುಮಗೌಡ ಗೌಡರ ಇವರ ಮನೆ ಮುಂದ ಮೆನ್ …
Read More »ಹೇ ಕೊರೊನಾ !! ಚಳಿಗಾಲಕ್ಕೂ ನಿನಗೂ ಇದೆಂತಹ ನಂಟು ?
ಈಗ ಬಂದಿರುವ ಮಾಹಿತಿಯ ಪ್ರಕಾರ ಇದುವರೆಗೂ ನೋಡಿರುವ ಕೊರೊನಾದ ಅಟ್ಟಹಾಸ ಚಳಿಗಾಲದಲ್ಲಿ ಹಾಗೂ ನಂತರದಲ್ಲಿ ಎದುರಾಗುವ ಕೊರೊನಾದ ಎರಡನೇ ಅಲೆಗಿಂತ ತೀರಾ ಕಡಿಮೆ ಎಂಬ ಮಾತು ವಿಜ್ಞಾನಿಗಳು ಹಾಗೂ ಸಂಶೋಧಕರ ತಂಡದಿಂದ ಕೇಳಿ ಬರುತ್ತಿದೆ. ಕೊರೊನಾದ ರುದ್ರನರ್ತನ ಹಾಗೂ ಸಾವಿನ ರಣಕೇಕೆ ವಿಶ್ವದಲ್ಲೆಡೆ ಮಿತಿ ಮೀರಿದೆ. ಒಂದು ವರ್ಷ ಸಮೀಪಿಸುತ್ತಿದ್ದರೂ ಕೂಡ ಇನ್ನು ಒಂದೇ ಒಂದು ಪರಿಣಾಮಕಾರಿಯಾದ ಲಸಿಕೆ ಕೊರೋನಾಗೆ ಸಿಕ್ಕಿಲ್ಲ. ಹಾಗಾಗಿ ಜನರ ಬದುಕು ಮತ್ತು ಆರೋಗ್ಯ ಇಂದಿಗೂ …
Read More »ನೆರೆ ಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ
ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು ಎರಡು ದಿನಗಳಲ್ಲಿ ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು. ನಗರದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ಹಾವೇರಿ ತಾಲೂಕಿನ ನೆರೆ ಹಾನಿ ಮನೆಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಗಳ ಸಮೀಕ್ಷೆಗೆ ಗಡುವು ನೀಡಲಾಗಿದ್ದರೂ ಸಮೀಕ್ಷೆ ವಿಳಂಬವಾಗುತ್ತಿದೆ. ಇಂಜಿನಿಯರ್ಗಳ ಕೊರತೆಯಾಗಿದ್ದರೆ ಪಿಆರ್ಇಡಿ ಇಂಜಿನಿಯರ್ಗಳನ್ನು ನೇಮಿಸಿ ಶೀಘ್ರವಾಗಿ ಹಾನಿ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ …
Read More »ಉತ್ತರ ಕೊರಿಯಾ ಸರ್ವಧಿಕಾರಿ ಕಿಮ್ ಜಾಂಗ್ ಉನ್ ನಿಧನ? ಶೀಘ್ರದಲ್ಲೇ ಘೋಷಣೆ ಸಾಧ್ಯತೆ?
ಒಂದೊಮ್ಮೆ ಉನ್ ಸತ್ತಿರುವುದು ನಿಜವಾಗಿದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. 36 ವರ್ಷದ ಕಿಮ್ ಜಾಂಗ್ ಉನ್ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿಕೆ ನೀಡಿದ್ದರು. ಪಿಯಾಂಗ್‌ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು …
Read More »ಮರೆಯದ ಮಾಣಿಕ್ಯ ಚಂದ್ರಕಾಂತ ಗೌಡರ ಇನ್ನು ಅವರು ನೆನಪು ಮಾತ್ರ
ಜೀವನದಲಿ ಕೆಲವು ವ್ಯಕ್ತಿಗಳು ಆಕಸ್ಮಿಕವಾಗಿ ಪರಿಚಯವಾಗಿ ಆ ಪರಿಚಯ ಎಂದು ಮರೆಯದ ಸ್ನೇಹವಾಗಿ ನಿತ್ಯ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಸೇರ್ ಮಾಡುತ್ತಾ ಸುಖ,ದುಃಖ ,ಹಂಚಿಕೊಳ್ಳಲು ನಮ್ಮ ಇನ್ನೊಂದು ಜೀವ ಅಂದ್ರೆ ಅದೇ ಸ್ನೇಹ ಅಂತಹ ಒಬ್ಬ ನಮ್ಮ ಆತ್ಮೀಯ ನಮ್ಮ ಸ್ನೇಹಿತ ಇಂದು ಮಧ್ಯಾಹ್ನ ೨:೩೦, ಸುಮಾರಿಗೆ ಹೃದಯಾಘಾತದಿಂದ ಕಾಲವಾಗಿದ್ದು ನಮ್ಮ ಸ್ನೇಹಿತ ವೃಂದದಲ್ಲಿ ಹಾಗೂ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ,ಕಳೆದ ಆರು ವರ್ಷಗಳಿಂದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪೆದೆಯಾಗಿ …
Read More »ತಬ್ಲಿಘಿಗಳು ಕಾರಣರಲ್ಲ ಅವರನ್ನು ’ಬಲಿಪಶು’ಗಳನ್ನಾಗಿ ಮಾಡಲಾಗಿದೆ; ಮುಂಬೈ ಹೈಕೋರ್ಟ್
ಸರ್ಕಾರವನ್ನೂ ಟೀಕಿಸಿರುವ ನ್ಯಾಯಾಲಯ ದೇಶದಲ್ಲಿ ಸಾಂಕ್ರಾಮಿಕ ಬಿಕ್ಕಟ್ಟು ಉಂಟಾದಾಗ ಸರ್ಕಾರವು ರಾಜಕೀಯವಾಗಿ ತಮ್ಮನ್ನು ಉಳಿಸಿಕೊಳ್ಳಲು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ. ಮುಂಬೈ ; ಕಳೆದ ಮಾರ್ಚ್‌ನ ನಿಜಾಮುದ್ದೀನ್ ಬಳಿ ನಡೆದಿದ್ದ ತಬ್ಲಿಘಿ ಜಮಾಅತ್ ಸಭೆಯಲ್ಲಿ ಪಾಲ್ಗೊಂಡಿದ್ದ 29 ವಿದೇಶಿ ಪ್ರಜೆಗಳ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗಳನ್ನು ರದ್ದು ಪಡಿಸಿರುವ ಮುಂಬೈ ಹೈಕೋರ್ಟ್ಈ ಪ್ರಕರಣದಲ್ಲಿ ತಬ್ಲಿಘಿಗಳನ್ನು ’ಬಲಿಪಶು’ಗಳು ಎಂದು ಕರೆದಿದೆ. ಈ ವೇಳೆ ರಾಷ್ಟ್ರದ ಮಾಧ್ಯಮಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, …
Read More »ಭಾರತದಲ್ಲಿ ಲಸಿಕೆ ಅಭಿವೃದ್ಧಿ ಮಾಹಿತಿಗಾಗಿ ಶೀಘ್ರವೇ ಆನ್‌ಲೈನ್ ಪೋರ್ಟಲ್: ಐಸಿಎಂಎಆರ್!
ಭಾರತದಲ್ಲಿ ಕೊರೊನಾ ವೈರಸ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳಿಗೆ ಕಂಡುಹಿಡಿಯಲಾಗುತ್ತಿರುವ ಲಸಿಕೆಯ ಸಂಶೋಧನೆ ಮತ್ತು ಪ್ರಗತಿ ವರದಿಯನ್ನು ತಿಳಿಸಲು ಅಖಿಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್‌ನ್ನು ಉದ್ಘಾಟಿಸಲಿದೆ. ಭಾರತದಲ್ಲಿ ಕೊರೊನಾ ವೈರಸ್‌ಗಾಗಿ ಕಂಡು ಹಿಡಿಯಲಾಗುತ್ತಿರುವ ಲಸಿಕೆಯ ಸಂಶೋಧನೆ ಮತ್ತು ಪ್ರಗತಿ ವರದಿಯನ್ನು ತಿಳಿಸಲು ಅಖಿಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್‌ನ್ನು ಉದ್ಘಾಟಿಸಲಿದೆ. ಸದ್ಯಕ್ಕೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಯ ಕುರಿತಷ್ಟೇ ಮಾಹಿತಿ ನೀಡಲಿರುವ ಈ …
Read More »ರಾಯಚೂರು: ಕೋವಿಡ್ ಆಸ್ಪತ್ರೆಗೆ ನುಗ್ಗಿದ ಹಂದಿಗಳು, ಅವ್ಯವಸ್ಥೆ ಬಗ್ಗೆ ಸೋಂಕಿತರ ಆಕ್ರೋಶ
ಕೆಲ ದಿನಗಳ ಹಿಂದಷ್ಟೇ ಸೋಂಕಿತರೇ ಕೋವಿಡ್ ಆಸ್ಪತ್ರೆಯ ವಾರ್ಡಿನ ಕಸಗೂಡಿಸಿದ ಬಗ್ಗೆ ಮಾಹಿತಿ ಬಯಲಾಗಿತ್ತು. ಇದೀಗ ಹಂದಿಗಳು ಆಸ್ಪತ್ರೆಯೊಳಗೆ ನುಗ್ಗಿ ಮೆಡಿಕಲ್ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡಿದ್ದು ಸೋಂಕಿತರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಓಪೆಕ್ ನೆರವಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡಿನ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ. ಸೋಂಕಿತರಿಂದಲೇ ಅವ್ಯವಸ್ಥೆ ಬಯಲಿಗೆಳೆಯುವ ಪ್ರಯತ್ನ ಇದಾಗಿದೆ. ಕೋವಿಡ್ ವಾರ್ಡಿನಲ್ಲಿ ಶನಿವಾರ ರಾತ್ರಿ ಹಂದಿಗಳು ನುಗ್ಗಿ ವಿವಿಧ ರೀತಿಯ ತ್ಯಾಜ್ಯದ ಚೀಲಗಳನ್ನು ಕಿತ್ತಿ ತಿನ್ನುವ ವಿಡಿಯೋ …
Read More »ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ರೊಳಗೆ ತೀರ್ಪು ನೀಡುವಂತೆ ಸುಪ್ರೀಂ ಆದೇಶ
ಹೊಸದಿಲ್ಲಿ: ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ಟೆಂಬರ್ 30ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಬೇಕೆಂದು ಲಕ್ನೋ ಸಿಬಿಐ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಮಥೆ ಹಲವರು ವಿರುದ್ಧ ಪ್ರಕರಣ ದಾಖಲಾಗಿದ್ದು, ಲಕ್ನೋ ಸಿಬಿಐ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಆಗಸ್ಟ್ 31ರ ಒಳಗೆ ತೀರ್ಪು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News