Breaking News

Uncategorized

ಪ್ರವಾಹಕ್ಕೆ ನದಿ ಪಾತ್ರದ ರೈತರು ತತ್ತರ

ಬಾಗಲಕೋಟೆ: ಕೋವಿಡ್, ಪ್ರವಾಹದ ಮಧ್ಯೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೆರಡು ದಿನಗಳಿಂದ ಉಂಟಾದ ಪ್ರವಾಹದಿಂದ ನದಿ ಪಾತ್ರದ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆ, ನೀರಿನಲ್ಲಿ ನಿಂತು ಹಾನಿಯಾಗಿದ್ದು, ಜಿಲ್ಲಾಡಳಿತನಡೆಸಿದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಸುಮಾರು 246 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದ್ದು, ಸುಮಾರು 189 ಗ್ರಾಮಗಳ ರೈತರ ಬೆಳೆಗೆ ನೀರು ನುಗ್ಗಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ …

Read More »

ರಾಜ್ಯದಲ್ಲಿಂದು 7385, ಬೆಂಗಳೂರು 2912, ಬಳ್ಳಾರಿ 483, ಬೆಳಗಾವಿ 358, ಕೊಪ್ಪಳ 139, ಗದಗ 114, ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 7385, ಬೆಂಗಳೂರು 2912, ಬಳ್ಳಾರಿ 483, ಬೆಳಗಾವಿ 358, ಕೊಪ್ಪಳ 139, ಗದಗ 114,ಬಾಗಲಕೋಟೆ 159, ಬೆಂಗಳೂರು ಗ್ರಾಮಾಂತರ 77, ಬೀದರ್ 85, ಚಾಮರಾಜನಗರ 120,ಚಿಕ್ಕಬಳ್ಳಾಪುರ 76, ಚಿಕ್ಕಮಗಳೂರು 124, ಚಿತ್ರದುರ್ಗ 60, ದಕ್ಷಿಣ ಕನ್ನಡ 177, ಧಾರವಾಡ 159, ಹಾಸನ 196, ಹಾವೇರಿ 111, ಕಲಬುರಗಿ 210, ಕೊಡಗು 46, ಕೋಲಾರ 69, ಮಂಡ್ಯ 109, ಮೈಸೂರು 253, ರಾಯಚೂರು 111, ರಾಮನಗರ 27, …

Read More »

ಶೇ.51 ರಷ್ಟು ಮಂದಿಯ ಸಂಪೂರ್ಣ ಆದಾಯ ಸ್ಥಗಿತ: ಲಾಕ್‌ಡೌನ್ ಪರಿಣಾಮದ ಅಧ್ಯಯನ ವರದಿ ಬಹಿರಂಗ!

ಪಾಟ್ನಾ(ಆ.20): ಕೊರೋನಾ ವೈರಸ್ ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಭೀಕರತೆ ಹೆಚ್ಚಿಸುತ್ತಿದೆ. ಆರಂಭಿಕ ಹಂತದಲ್ಲಿ ಕೊರೋನಾ ವೈರಸ್ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಲಾಕ್‌ಡೌನ್ ಆದೇಶ ಜಾರಿ ಮಾಡಿದ್ದರು. ಮಾರ್ಚ್ 25 ರಿಂದ ಮೇ 31ರ ವರೆಗೆ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಇದರಿಂದ ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಲಾಕ್‌ಡೌನ್ ಸೃಷ್ಟಿಸಿದ ಪರಿಣಾಮ ಮಾತ್ರ ಘನಘೋರ. ಹಲವರು ಕೆಲಸ ಕಳೆದುಕೊಂಡಿದ್ದರು. ಕೂಲಿ ನೌಕರರು, ವಲಸೆ ಕಾರ್ಮಿಕರ ಆದಾಯ ಸಂಪೂರ್ಣ …

Read More »

ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಎಸ್‌ಬಿಐ-ಐಆರ್‌ಸಿಟಿಸಿ ಕಾರ್ಡ್‌ನ 10 ಉತ್ತಮ ಪ್ರಯೋಜನಗಳು ಈ ರೀತಿ ಇದೆ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್ಸಿಟಿಸಿ) ಒಟ್ಟಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿವೆ. ಎಸ್‌ಬಿಐ ಮತ್ತು ಐಆರ್‌ಸಿಟಿಸಿ ಜಂಟಿಯಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿವೆ. ಈ ಕಾರ್ಡ್‌ನೊಂದಿಗೆ ನೀವು ರೈಲು ಟಿಕೆಟ್‌ಗಳನ್ನು ಉಚಿತವಾಗಿ ಬುಕ್ ಮಾಡಬಹುದಾಗಿದೆ. ರುಪೇ ವೇದಿಕೆಯಲ್ಲಿ ಪ್ರಾರಂಭಿಸಲಾದ ಈ ಕಾರ್ಡ್‌ನ ಹೆಸರು ‘ಐಆರ್‌ಸಿಟಿಸಿ ಎಸ್‌ಬಿಐ ಪ್ಲಾಟಿನಂ ಕಾರ್ಡ್ ಅಂತ ಹೆಸರು ಇಡಲಾಗಿದೆ. ಈ ಕಾರ್ಡ್‌ನಿಂದ …

Read More »

ಮಡಗಾಸ್ಕರ್‌ನಲ್ಲಿ ಸಿಲುಕಿದ್ದ 17 ಮಂದಿ ಭಾರತಕ್ಕೆ ವಾಪಸ್

ದಾವಣಗೆರೆ: ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೋಪನಾಳ ಗ್ರಾಮದ 17 ಮಂದಿ ಗಿಡಮೂಲಿಕೆ ವ್ಯಾಪಾರಿಗಳು ಐದು ತಿಂಗಳ ಬಳಿಕ ವಿಶೇಷ ವಿಮಾನದ ಮೂಲಕ ಗುರುವಾರ ಭಾರತಕ್ಕೆ ಮರಳಿ ಬಂದರು. ಬುಧವಾರ ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.30) ‘ಏರ್ ಮಡಗಾಸ್ಕರ್‌’ ವಿಮಾನದಲ್ಲಿ ಹೊರಟ ವ್ಯಾಪಾರಿಗಳು, ಗುರುವಾರ ಮುಂಜಾನೆ 3.30ಕ್ಕೆ ಮುಂಬೈ ವಿಮಾನನಿಲ್ದಾಣಕ್ಕೆ ಬಂದು ಇಳಿದರು. ಬಳಿಕ ಅವರೆಲ್ಲರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ಕ್ವಾರಂಟೈನ್‌ …

Read More »

ಸಿರಿಯಾದಲ್ಲಿ ಚಿಕ್ಕ ಮೆಡಿಸಿನ್ ಸುಳಿವು; ಶಂಕಿತ ಉಗ್ರ ಸಿಕ್ಕಿಬಿದ್ದಿದ್ದು ಒಂದು ರೋಚಕ ಕಥೆ

ಬೆಂಗಳೂರು: ಎಂ.ಎಸ್​​ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕೆಲಸ ಮಾಡ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್​​ನನ್ನು ಎನ್​ಐಎ ಮೊನ್ನೆ ಬಂಧಿಸಿದೆ. ಈತನನ್ನು ಅರೆಸ್ಟ್​ ಮಾಡಿದ್ದು ಹೇಗೆ ಅನ್ನೋದೇ ರೋಚಕ ಕಥೆ. ಈ ಕುರಿತಾದ ಇಂಟರೆಸ್ಟಿಂಗ್ ಹಾಗೂ ಸ್ಫೋಟಕ ಮಾಹಿತಿಗಳು ಆರೋಪಿಯ ವಿಚಾರಣೆಯಿಂದ ಬಹಿರಂಗವಾಗಿದೆ. ಸಿರಿಯಾ ಮೇಲಿನ ದಾಳಿ ವೇಳೆ, ಮೆಡಿಸಿನ್ಸ್ ಕೊಟ್ಟ ಸುಳಿವುಅಬ್ದುಲ್ ರೆಹಮಾನ್ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು ಸಿರಿಯಾದಿಂದ. 2018ರಲ್ಲಿ ಅಮೆರಿಕಾ ಸಿರಿಯಾ ಮೇಲೆ ದಾಳಿ ನಡೆಸಿದ …

Read More »

ಸಚಿನ್‌ಗೆ ಮೊದಲ ಕಾರಿನ ಮೋಹ : ಮಾರುತಿ-800 ಹುಡುಕಿಕೊಡಬೇಕಂತೆ!

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರಿಗೆ ಕಾರುಗಳ ಕ್ರೇಜ್‌ ವಿಪರೀತ. ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್‌ ಜಿಟಿ-ಆರ್‌ನಂತಹ ಬೃಹತ್‌ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ. ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು. ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು …

Read More »

ಪ್ರವಾಹದ ಮಧ್ಯೆ ಸಿಲುಕಿದ ಲಾರಿಯಿಂದ ಹಾರಿ ಮರಹತ್ತಿದ ಚಾಲಕ

ಸಿದ್ದಿಪೇಟ್​: ಈ ಲಾರಿ ಚಾಲಕ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನ…ಆತನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೂ ಆತ ಜೀವ ಸಹಿತ ಬರಲೇ ಇಲ್ಲ… ಇದೊಂದು ದುರ್ಘಟನೆ ನಡೆದಿದ್ದು ತೆಲಂಗಾಣದ ಅಡಿಲಾಬಾದ್ ಜಿಲ್ಲೆಯಲ್ಲಿ. ಮೃತ ವ್ಯಕ್ತಿಯನ್ನು ಮುಡಿಗೊಂಡ ಶಂಕರ್ (35) ಎಂದು ಗುರುತಿಸಲಾಗಿದೆ. ಕಾಶಿರೆಡ್ಡಿ ಗ್ರಾಮದ ನಿವಾಸಿ. ಈತ ಮೃತಪಟ್ಟಿದ್ದು ಕೊಹೆಡಾ ಮಂಡಲ್ನಲ್ಲಿರುವ ಬಸ್ವಾಪುರ ಗ್ರಾಮದಲ್ಲಿ. ಈತ ತನ್ನ ಲಾರಿಯಲ್ಲಿ ಸಿದ್ದಿಪೇಟ್ನಿಂದ ಹಂಸಾಬಾದ್ಗೆ ತೆರಳುತ್ತಿದ್ದ. ಮುಂಜಾನೆ 4ಗಂಟೆ …

Read More »

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 10.3ರಿಂದ ಶೇಕಡಾ 7.72ಕ್ಕೆ ಇಳಿಕೆ

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ. ಆದರೂ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಈ ಕುರಿತಂತೆ ಮಾತನಾಡಿದ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪ್ರತಿದಿನ 7ರಿಂದ 8 ಲಕ್ಷ ಕೊರೋನಾ ವೈರಸ್ ಪರೀಕ್ಷೆ ಮಾಡುತ್ತಿದ್ದರೂ ಕೂಡ ಪಾಸಿಟಿವ್ ರೋಗಿಗಳ ಸಂಖ್ಯೆ ಕಳೆದ ನಾಲ್ಕೈದು ದಿನಗಳಲ್ಲಿ ಶೇಕಡಾ 10.3ರಿಂದ ಶೇಕಡಾ …

Read More »

ಟ್ರಂಪ್‌ ಅಮೆರಿಕಕ್ಕೆ ಸೂಕ್ತ ಅಧ್ಯಕ್ಷ ಅಲ್ಲ: ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಷಲ್‌ ಟೀಕೆ

ನ್ಯೂಯಾರ್ಕ್‌: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿರುವುದು ತಪ್ಪು ಆಯ್ಕೆ ಎಂದು ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಪತ್ನಿ ಮಿಷಲ್‌ ಒಬಾಮ ಟೀಕಿಸಿದ್ದಾರೆ. ಮಂಗಳವಾರ ಶುರು ವಾದ ಡೆಮಾಕ್ರಟಿಕ್‌ ಪಕ್ಷದ ನಾಲ್ಕು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಪರಿಸ್ಥಿತಿ ಉತ್ತವಾಗಿ ಇರಬೇಕು ಎಂದು ಬಯಸುವುದಿದ್ದರೆ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ಗೆ ಮತ ಹಾಕಿ ಅವರನ್ನೇ ಗೆಲ್ಲಿಸಬೇಕು ಎಂದು ಮಾಜಿ ಅಧ್ಯಕ್ಷರ ಪತ್ನಿ ಹೇಳಿದ್ದಾರೆ. “ಡೊನಾಲ್ಡ್‌ ಟ್ರಂಪ್‌ …

Read More »