Breaking News

ಸಿಬಿಎಸ್‌ಇ 10, 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಪ್ರಕಟ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಮಂಗಳವಾರ 10 ಮತ್ತು 12ನೇ ತರಗತಿಗಳ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು cbse.nic.in ನಲ್ಲಿ ಲಭ್ಯವಿದೆ. ಪರೀಕ್ಷೆಯು ಆಫ್‌ಲೈನ್ ಲಿಖಿತ ಕ್ರಮದಲ್ಲಿ ನಡೆಯಲಿದ್ದು, ಪ್ರಶ್ನೆಪತ್ರಿಕೆಗಳು ಶೇ.33 ರಷ್ಟು ಆಂತರಿಕ ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನು ಸಹ ಶೇ.30ರವರೆಗೆ ಕಡಿತಗೊಳಿಸಲಾಗಿದೆ.

ಮೇ 4 ರಿಂದ ಜೂ.10 ರವರೆಗೆ ನಡೆಯಲಿರುವ ಪರೀಕ್ಷೆಗಳಲ್ಲಿ ಸುಮಾರು 30 ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ಸಾಧ್ಯತೆ ಇದೆ. ಮಾ. 1 ರಿಂದ ಶಾಲೆಗಳು ಕೋವಿಡ್‌-19 ಸಾಂಕ್ರಾಮಿಕ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಿವೆ. ಫಲಿತಾಂಶವನ್ನು ಜುಲೈ 15ರಂದು ಪ್ರಕಟಿಸಲಾಗುವುದು.

ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್’ ದಿನಾಂಕದ ವೇಳಾಪಟ್ಟಿ ಘೋಷಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

About vijay_shankar

Check Also

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.