
ಕಮತಗಿ : ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮುತ್ತಣ್ಣ ಮುಳ್ಳೂರು ಅವರ ಸಹೋದರ ಹನಮಂತ ಅವರು ಇಂದು ಕೋವಿಡ್ ಸೋಂಕಿನಿಂದ ಅಕಾಲಿಕ ಮರಣ ಹೊಂದಿದರು, ಅವರು ಇತ್ತಿಚ್ಚಿಗೆ ಸಾಮಾಜಿಕ ,ರಾಜಕೀಯ ರಂಗದಲ್ಲಿ ಸಕ್ರೀಯವಾಗಿ ಸಮಾಜ ಸೇವೆ ಮಾಡುತ್ತಿದ್ದರು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕುರುಬ ಜನಾಂಗದ ಸಂಘಟನೆ ಹಾಗೂ ಒಗ್ಗಟ್ಟಿಗಾಗಿ ಹೋರಾಟ ಮಾಡುತ್ತಿದ್ದರು, ಇಂತಹ ಒಬ್ಬ ಯುವ ನಾಯಕನನಗನ್ನು ಕಳೆದುಕೊಂಡಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ,ಇವರ ಧರ್ಮಪತ್ನಿ ಕಳೇದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುಳ್ಳೂರು ಗ್ರಾಮದಿಂದ ಆಯ್ಕೆಯಾಗಿ ಪಂಚಾಯತಿ ಉಪಾಧ್ಯಕ್ಷರಾಗಿ ರಾಜಕೀಯ ರಂಗದಲ್ಲಿ ಗುರುತಿಸುವ ಮೂಲಕ ಹನಮಂತ ರಾಜಕೀಯ ಪ್ರವೇಶ ಮಾಡಿದ್ದರು,ಮುಂದೆ ರಾಜಕೀಯ ರಂಗದಲ್ಲಿ ಉತ್ತಮ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುವ ದಿನಗಳು ದೂರ ಇರಲಿಲ್ಲ

ಅವರು ಸದಾ ಹಸನ್ಮುಖರಾಗಿ ತಮ್ಮ ಸರಳ ನಡೆ ನುಡಿ ವ್ಯಕ್ತಿತ್ವದಿಂದ ದಿಗ್ಗಜ ರಾಜಕೀಯ ರಂಗದ ಗಣ್ಯರೋಂದಿಗೆ ಗುರುತಿಕೊಂಡವರು ಸದಾ ಸಮಾಜದ ,ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ದುಡಿಯಲು ಕಂಕನ ಬದ್ದರಾಗಿ ರಾಜಕೀಯ ಮಾಡುವ ಕನಸು ಹೊತ್ತಿದ್ದರು ಇಂತಹ ವ್ಯಕ್ತಿಯನ್ನು ನಾವು ಕಳೆದು ಕೊಂಡಿದ್ದು ತುಂಬಾ ನಮಗೂ ನೋವಾಗಿದೆ . ನಮ್ಮ BB News ಬಳಗದಿಂದ ಅವರಿಗೆ ಸಂತಾಪ ತಿಳಿಸುತ್ತೇವೆ, ಆ ದೇವರು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ, ಮತ್ತು ಸಂಗಣ್ಣ ಹಂಡಿ,ಎಮ್,ಆರ್,ಹಂಡಿ, ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ,
ವರದಿ: ಶ್ರೀಮತಿ ಶೀಲಾ ಸುಂಕದ