ಜಾಹಗೀರ ಗುಡದೂರು: ರಾಜ್ಯದಲ್ಲಿ ಇರುವಂತಹ ಎಷ್ಟೋ ಗ್ರಾಮ ಪಂಚಾಯತ್ ಚುನಾವಣಾ ಕಣಕ್ಕೆ ವಿಧ್ಯಾವಂತರಿಗಿಂತ ಅವಿಧ್ಯಾವಂತರು ಹೆಚ್ಚು ರಾಜಕೀಯ ರಂಗಕ್ಕೆ ಪ್ರವೇಶ ಮಾಡುತ್ತಾರೆ ಅದರಲ್ಲಿ ಕೆಲವರು ಏನೂ ಕಾನೂನಿನ ಅರಿವು ಸಾಮಾನ್ಯ ತಿಳುವಳಿಕೆ ಕೂಡ ಇರದ ಎಷ್ಟೋ ಜನ ಪ್ರತಿನಿಧಿನಿಗಳನ್ನ ನಾವು ನೋಡಿದ್ದೇವೆ ಆದರೂ ಕೆಲವು ಜನ ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ಮನಗೆದ್ದು ನಿರಂತರ ಅಧಿಕಾರದಲ್ಲಿ ಇರುವವರು ನಮ್ಮ ಕುಷ್ಟಗಿ ತಾಲೂಕಿನ ಜಾಹಗೀರ ಗುಡದೂರು ಗ್ರಾಮ ಪಂಚಾಯತ ದಲ್ಲಿ ಇದ್ದಾರೆ,
ಐದು ವರ್ಷ ಆಡಳಿತ ಮಾಡಿ ಸಾರ್ಥಕ ಬದುಕು ಕಂಡುಕೊಂಡಿದ್ದಾರೆ. ಅಂತವರ ಸಾಲಿನಲ್ಲಿ ಪ್ರಥಮ ಅವದಿಯಲ್ಲಿ ಚುನಾಯಿತರಾಗಿ ಕೋನಾಪೂರ ಗ್ರಾಮದಿಂದ ಆಯ್ಕೆ ಆಗಿ ಉತ್ತಮ ಜನ ಸೇವೆ ಮೂಲಕ ಗುರುತಿಕೊಂಡ ಬಿಜೆಪಿ ಪಕ್ಷದ ಯುವ ನಾಯಕ ಶ್ರೀ ಹನುಮಂತ ಶರಣಪ್ಪ ಓಗಿ, ಕೋನಾಪೂರ ಗ್ರಾಮದ ವರು ,ಚುನಾಯಿತರಾಗಿ ಐದು ವರ್ಷ ಒಂದು ರೆಡ್ ಮಾಕ್೯ ಇಲ್ಲದೇ ಜನ ಸೇವೆ ಮಾಡಿ ಸೈ ಎನ್ನಿಸಿಕೊಂಡ ಯುವ ನಾಯಕ ,ಸದರಿ ಇವರ ಗ್ರಾಮವು ಜಾಹಗೀರ ಗುಡದೂರು ಗ್ರಾಮ ಪಂಚಾಯತಿಗೆ ಒಳಪಡುತ್ತದೆ.

ಒಟ್ಟು ನಾಲ್ಕು ಹಳ್ಳಿಗಳನ್ನು ಇದು ಒಳಗೊಂಡಿದೆ, ಪರಮನಟ್ಟಿ,ಗುಡ್ಡದ ದೇವಲಾಪೂರ, ಕೋನಾಪೂರ, ಒಳಗೊಂಡಿದೆ ಒಟ್ಟುಒಟ್ಟು ೧೫ ಜನ ಸದಸ್ಯರನ್ನು ಒಳಗೊಂಡ ಈ ಪಂಚಾಯತ್ ನಲ್ಲಿ ಅತ್ಯುತ್ತಮ ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಕೋನಾಪೂರ ಗ್ರಾಮದ ಹಿಂದಿನ ಮಾಜಿ ಸದಸ್ಯರಾದ ದಿವಂಗತ: ಚನ್ನಬಸಪ್ಪರವರು,ಹಾಗೂ ದೇವೇಂದ್ರಪ್ಪ ,ಮತ್ತು ಯಲಗೂರದಪ್ಪ, ಇವರಿಗೆ ಸಾಕಷ್ಟು ಅಭಿವೃದ್ಧಿ ಕನಸು ಹೊತ್ತಿದ್ದರು ಆದರೆ ಅಂದಿನ ಪಂಚಾಯತ್ ಅನುದಾನ ಸಕಾಲಕ್ಕೆ ಸಿಗಲಿಲ್ಲ.
ಸಿಕ್ಕರೂ ಸಹ ಅದಕ್ಕೆ ತಕ್ಕ ಪ್ರತಿಕ್ರಿಯೆ ಸಿಗಲಿಲ್ಲ ಪಂಚಾಯತ್ ಆಡಳಿತ ಅಧಿಕಾರಿಗಳು ಸಹ ಸ್ಪಂದನೆ ಮಾಡಲಿಲ್ಲ ಎಂದು ಆರೋಪ ಮಾಡಲಾಗಿದೆ ಆದರೆ ಅದು ಏನೇ ಇರಲಿ ಕೋನಾಪೂರ ಗ್ರಾಮದಲ್ಲಿ ಹನುಮಂತ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಮುಂಬರುವ ಈ ಗ್ರಮಾ ಪಂಚಾಯತ್ ಚುನಾವಣಾ ಕಣಕ್ಕೆ ಮತ್ತೆ ಜೈ ಎಂದು ಜನತೆ ಶುಭ ಹಾರೈಸುತ್ತಿದ್ದಾರೆ ,ಹನುಮಂತ ಓಗಿ ಅವರು ಸದಾ ಸಂಘ ಜೀವಿ,ಸ್ನೇಹ ಜೀವಿ ,ಅವರ ಸರಳತೆಯ ಗುಣದಿಂದ ಸರಕಾರಿ ಶಾಲೆಯ ತಡೆ ಗೊಡಿ,ಹಾಗೂ ಶಾಲೆಯಲ್ಲಿ ಪ್ರತ್ಯೇಕ ಕಟ್ಟಡ, ಗ್ರಾಮದಲ್ಲಿ ಸಿಸಿ ರಸ್ತೆ,ನಿಮಾರ್ಣ , ಚರಂಡಿ ನಿರ್ಮಾಣ, ಇಂಗುಗುಂಡಿ, ಅಲ್ಲದೆ ವಿವಿಧ ವಸತಿ ಯೋಜನೆ ಗಳಾದ ಬಸವ ವಸತಿ ಯೋಜನೆ, ಆಶ್ರಯ ,ಇಂದಿರಾ,ಅನೇಕ ಯೋಜನೆ ಮೂಲಕ ಸುಮಾರು ೬೨ ಮನೆಗಳನ್ನು ಇಲ್ಲಿಯ ವರೆಗೆ ಬಡವರಿಗೆ ಹಾಕಿಸಿದ್ದಾರೆ.
ಪಂಚಾಯತ್ ಅನುದಾನವನ್ನು ಬಳಸಿಕೊಂಡು ಕೋನಾಪೂರ ಗ್ರಾಮವನ್ನು ಒಂದು ಉತ್ತಮ ಮಾದರಿ ಗ್ರಾಮವನ್ನಾಗಿ ಮಾಡುವ ಕನಸು ಕಂಡಿದ್ದಾರೆ ಶಾಲೆಯಲ್ಲಿವಸುಂದರ ಕೈ ದೋಟ ಮತ್ತು ಉತ್ತಮ ಪರಿಸರ ನಿಮಾರ್ಣಕ್ಕೆ ಪಣ ತೊಟ್ಟಿದ್ದಾರೆ, ಸಾರ್ವಜನಿಕರ ಯಾವುದೆ ಸಮಸ್ಯೆ, ತೊಂದರೆ, ಇದ್ದಲಿ ಸವಾಲಾಗಿ ಸ್ವೀಕರಿಸಿ ಅದನ್ನು ಬಗೆಹರಿಸುವ ಶಕ್ತಿ ,ಹಾಗೂ ನಾಯಕತ್ವದ ಗುಣ ಹನುಮಂತ ಅವರಿಗೆ ಇದೆ ,ಅಂತೆಯೆ ಜನ ಈಗ ಮತ್ತೊಂದು ಬಾರಿ ಚುನಾವಣಾ ಅಖಾಡಕ್ಕೆ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ, ಶಾಸಕರಿಗೆ ಒತ್ತಡ ಹಾಕಿ ಅನುದಾನ ತಂದು ಸಿಸಿ ರಸ್ತೆ ಕೆಲಸ ಮಾಡಿಸಿ ಸೈ ಎನ್ನಿಸಿಕೊಂಡ,ಹಾಗೆ ಜಿಲ್ಲೆಯ ಶಾಸಕರು ಹಾಗೂ ಸ್ವ ಪಕ್ಷದ ದಿಗ್ಗಜ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಹನುಮಂತ ಅವರ ರಾಜಕೀಯ ಜೀವನ ,ಹಾಗೂ ಜನರ ಅಪಾರವಾದ ಪ್ರೀತಿ, ಬೆಂಬಲ ಒಂದು ದಿನ ಉನ್ನತ ರಾಜಕೀಯ ಸ್ಥಾನ ಮಾನ ದೊರೆಯಲಿದೆ ಎಂದು ಜನತೆಯ ನಂಬಿಕೆ ಅವರ ಆಶಯ ದಂತೆ ಇಂತಹ ಯುವ ಉತ್ಸಾಹಿ ಹನುಮಂತ ಓಗಿ ಅವರು ಪಕ್ಷವನ್ನು ಬಲ ಪಡಿಸುವ ಮೂಲಕ ತನ್ನದೇ ಆದ ಸರಳ ವ್ಯಕ್ತಿತ್ವದ ಮೂಲಕ ಗುರುತಿಸಲ್ಪಡುವ ವಿಷೇಶ ವ್ಯಕ್ತಿ ಅಂದರೆ ತಪ್ಪಾಗಲಾರದು,
ಏನೆ ಆದರೂ ಯಾವುದೇ ಅಧಿಕಾರ ಶಾಶ್ವತ ಅಲ್ಲ ತಾವು ಮಾಡಿದ ಗ್ರಾಮದಲ್ಲಿನ ಅಭಿವೃದ್ಧಿ ಕೆಲಸಗಳು ಮಾತ್ರ ಜೀವಂತ ಅಂತಹ ಒಳ್ಳೆಯ ಕೆಲಸದಿಂದ ಮತ್ತಷ್ಟು ಗುರುತಿಸುವ ಶಕ್ತಿ ನಿಮಗೆ ಭಗವಂತ ದಯಪಾಲಿಸಲಿ ಎಂದು ನಮ್ಮ ಪತ್ರಿಕೆಯ ಆಶಯ,ಹಾಗೂ ಜನತೆಯ ಆಶಯವಾಗಿದೆ.