
ಬಾಗಲಕೋಟೆ : ನಗರದ ಜಯ ಕರ್ನಾಟಕ ಸಂಘಟನೆ ಯಿಂದ ಪಾದಯಾತ್ರೆ ಮೂಲಕ ನಗರದ ಪ್ರಮುಖ ಬಿದಿಯ ಮೂಲಕ ದಿಕ್ಕಾರ ಕೂಗುತ್ತಾ ಹನೀಫ್ ಬೀಳಗಿಯನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಇಲ್ಲಾ ಅವನನ್ನು ಎನ್ ಕೌಂಟರ್ ಮಾಡಿ ಅದು ಸಾಧ್ಯ ಇಲ್ಲ ಅಂದ್ರೆ ಅವನನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ನೀಡುತ್ತೇವೆ, ಎಂದು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಆರ್,ಡಿ ಬಾಬು ಅವರು

ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಮದ ದಲಿತ ಬಾಲಕಿ ಕುಮಾರಿ ಜ್ಯೋತಿ ಭಾಗವ್ವಗೋಳ (೨೨) ಇವಳನ್ನು ಕಲಾದಿಗಿ ಗ್ರಾಮದ ಹನೀಫ್ ಬೀಳಗಿ ಎಂಬ ಯುವಕ ಪ್ರೀತಿಸಿ ನಂತರ ಅವಳ ಶೀಲದ ಮೇಲೆ ಅನುಮಾನಗೊಂಡು ಸಹಚರರೊಂದಿಗೆ ಅತ್ಯಾರ ಮಾಡಿ ಅವಳನ್ನು ಕೊಲೆ ಮಾಡಿಲಾಗಿದೆ ಎಂದು ಸಾರ್ವಜನಿಕ ರಂಗದಲ್ಲಿ ಹಲವಾರು ರೀತಿಯ ಆರೋಪಗಳು ಕೇಳಿ ಬರುತ್ತಿದ್ದು ಅದು ಏನೆ ಇರಲಿ ಭಗ್ನ ಪ್ರೇಮಿ ಅವಳು ಇನ್ನೊಬ್ಬನನ್ನು ಲವ್ಹ್ ಮಾಡುತ್ತಿದ್ದಾಳೆ ಎಂದು ಅನುಮಾನ ಗೊಂಡು ಕೊಲೆ ಮಾಡಿ ಎಸೆದು ಹೊಗಿದ್ದು ವಿಷಾದಕರ.

ಇದನ್ನು ನಾವು ನಮ್ಮ ಜಯ ಕರ್ನಾಟಕ ಸಂಘಟನೆಯಿಂದ ಖಂಡಿಸುತ್ತೇವೆ, ಹಾಗೂ ಎಲ್ಲಾ ಆಯಾಮದಿಂದ ತನಿಖೆ ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಕಾನೂನಿನ ಕುಣಿಕೆ ಎಷ್ಟೇ ಬಿಗಿ ಗೊಳಿಸಿದರು ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇರೊದು ವಿಷಾದಕರ.

ಸದರಿ ಈ ಪ್ರಕರಣವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ಗಮನ ಹರಿಸಿ ಆ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ನಮ್ಮ ಸಂಘಟನೆ ಆಗ್ರಹಿಸುತ್ತದೆ ಎಂದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಆರ್,ಡಿ,ಬಾಬು,ಸಲೀಂ,ಜಗನಾಥಪೂರಿ,ವಿಜಯಕುಮಾರ್ ಆಲೂರ,ನಾಗಪ್ಪ ಮಾದರ ,ಇರ್ಫಾನಾ ಖಾಜೀ ,ಜಾವೀದ್ ಮನಿಯಾರ,ಕಪೂರಚಂದ ಅಗರವಾಲ,ಮಹೇಂದ್ರ ಕನವಿ,ನಾರಾಯಣ ಬಡಿಗೇರ, ಹಾಗೂ ಅನೇಕ ಸಂಘಟನೆಯ ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ವರದಿ: ಹಾಜೀಮಸ್ತಾನ್ ಬದಾಮಿ.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News