Breaking News

ವಿಧಾನ ಪರಿಷತ್ ಚುನಾವಣಾ ಅಕಾಡಕ್ಕೆ ಜೆಡಿಎಸ್ ತಾಲೀಮು

ಬೆಂಗಳೂರು | ದಿನ ಕಳೆದಂತೆ ಪರಿಷತ್ ಚುನಾವಣೆಯ ಅಖಾಡ ರಂಗೇರುತ್ತಿದೆ. ಬಿಜೆಪಿ , ಕಾಂಗ್ರೆಸ್ ಪಕ್ಷಗಳಲ್ಲಿ ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷದಲ್ಲಿಯೂ ಪರಿಷತ್ ಚುನಾವಣಾ ಕಾರ್ಯಕ್ಕೆ ತಾಲೀಮು ಈಗಾಗಲೇ ಶುರುವಾಗಿದೆ. ಸುಲಭವಾಗಿ ಒಂದು ಸ್ಥಾನವನ್ನು ಗಳಿಸಿಕೊಳ್ಳಬಹುದಾದ ಜೆಡಿಎಸ್ ಪಕ್ಷದಲ್ಲೂ ಕೂಡಾ ಟಿಕೆಟ್ ಪಡೆದು ಮೇಲ್ಮನೆಗೆ ಎಂಟ್ರಿ ಕೊಡಲು ತೀವ್ರ ಪೈಪೋಟಿ ಏರ್ಪಡುತ್ತಿದೆ. ಆದರೆ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಬಲಪಡಿಸುವ ದೃಷ್ಟಿಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯನ್ನು ಪಕ್ಷದ ಮುಖಂಡರುಗಳು ಮಾಡುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇಜೆಡಿಎಸ್ರಾಷ್ಟ್ರೀಯಅಧ್ಯಕ್ಷರಾದಎಚ್.ಡಿದೇವೇಗೌಡಅವರನ್ನುರಾಜ್ಯಸಭೆಗೆಆಯ್ಕೆಮಾಡಲಾಗಿದ್ದುವಿಧಾನಪರಿಷತ್ಸ್ಥಾನಕ್ಕೆಉತ್ತರಕರ್ನಾಟಕದಲ್ಲಿಪಕ್ಷವನ್ನುಬಲಪಡಿಸಬೇಕುಎನ್ನುವದೃಷ್ಟಿಯಿಂದಅಚ್ಚರಿಯವ್ಯಕ್ತಿಯನ್ನುಕಣಕ್ಕಿಳಿಸಲುವೇದಿಕೆಸಜ್ಜಾಗುತ್ತಿದೆಎನ್ನಲಾಗಿದೆ.ಅದರಲ್ಲೂಉತ್ತರಕರ್ನಾಟಕ ಹಾಗೂ ಲಿಂಗಾಯತವಿರೋಧಿಪಕ್ಷಎನ್ನುವಹಣೆಪಟ್ಟಿಯನ್ನುತಗೆದುಹಾಕಬೇಕುಎನ್ನುವಉದ್ದೇಶದಿಂದಉತ್ತರಕರ್ನಾಟಕಭಾಗದಲಿಂಗಾಯತಸಮುದಾಯದವರನ್ನುಮೇಲ್ಮನೆಗೆಕಳುಹಿಸಬೇಕುಎನ್ನುವಚರ್ಚೆಪಕ್ಷದಆಂತರಿಕವಲಯದಲ್ಲಿನಡೆದಿದೆ.

34 ಶಾಸಕರನ್ನು ಹೊಂದಿರುವ ಜೆಡಿಎಸ್ ವಿಧಾನ ಪರಿಷತ್ ಗೆ ಸುಲಭವಾಗಿ ಒಬ್ಬರನ್ನು ಕಳುಹಿಸಬಹುದಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಮಾಜಿ ಶಾಸಕರು ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೋನರೆಡ್ಡಿ, ಹನುಮಂತ ಮಾವಿನ ಮರದ್ ಹಾಗೂ ಬಾಗಲಕೋಟೆ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾದ ನವಲೀ ಹಿರೇಮಠ್ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆಗಳು ಪ್ರಾರಂಭವಾಗಿದೆ.

ಜೆಡಿಎಸ್ಹಾಗೂಕಾಂಗ್ರೆಸ್ಸಮ್ಮಿಶ್ರಸರಕಾರದಲ್ಲಿಈಗಾಗಲೇರಾಜಕೀಯಕಾರ್ಯದರ್ಶಿಹುದ್ದೆಯನ್ನುಮಾಜಿಶಾಸಕಕೋನರೆಡ್ಡಿಅನುಭವಿಸಿದ್ದಾರೆಅಲ್ಲದೆ,ಧಾರವಾಡಮತ್ತುಗದಗಜಿಲ್ಲೆಗಳಲ್ಲಿಬಿಜೆಪಿಯತ್ತಜನರಒಲವುಹೆಚ್ಚಾಗಿದ್ದು,ಮುಂದಿನದಿನಗಳಲ್ಲಿಇದರಿಂದರಾಜಕೀಯವಾಗಿಆಗುವಲಾಭಕಡಿಮೆಒಳ್ಳೆಯಸಂಘಟನಾಕಾರರಾಗಿರುವಹನುಮಂತಮಾವಿನಮರದ್ಅವರವರ್ಚಸ್ಸುತಮ್ಮಕ್ಷೇತ್ರದಹೊರಗೆಹೆಚ್ಚಾಗಿಲ್ಲಆದರೆಬಾಗಲಕೋಟೆಜೆಡಿಎಸ್ಮಾಜಿಜಿಲ್ಲಾಧ್ಯಕ್ಷರಾಗಿರುವನವಲೀಹಿರೇಮಠ್ಅವರುಆರ್ಥಿಕವಾಗಿಯೂಸಧೃಢರಾಗಿದ್ದುಅಕ್ಕಪಕ್ಕದಎರಡುಮೂರುಜಿಲ್ಲೆಗಳಲ್ಲೂಪಕ್ಷಸಂಘಟನೆಗೆತೊಡಗಿಕೊಳ್ಳುವಂತಹವ್ಯಕ್ತಿಯಾಗಿದ್ದಾರೆಅಲ್ಲದೆಮುಂದಿನವಿಧಾನಸಭಾಚುನಾವಣೆಯಲ್ಲಿ 3 ರಿಂದನಾಲ್ಕುಸ್ಥಾನಗಳನ್ನುಗೆಲ್ಲಿಸುವವರ್ಚಸ್ಸನ್ನುಹೊಂದಿದ್ದಾರೆಹುನುಗುಂದಮತಕ್ಷೇತ್ರದಸಂಘಟನೆಗೆಒತ್ತುನೀಡಲಾಗುತ್ತಿಲ್ಲಎಂದುಜಿಲ್ಲಾಧ್ಯಕ್ಷಹುದ್ದೆಯನ್ನುತ್ಯಜಿಸಿದ್ದಾರೆ.

ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿರುವ ನವಲಿ ಹಿರೇಮಠ್ ಆ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ನವಲಿ ಹೀರೇಮಠ್ ಅವರು ಆಯ್ಕೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎನ್ನುವ ನಿರ್ಧಾರ ಪಕ್ಷದ ಮುಖಂಡರುಗಳಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

About vijay_shankar

Check Also

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.