
ಬದಾಮಿ : ಡಾ: ಬಿ ಆರ್ ಅಂಬೇಡ್ಕರ್ ಅವರು ಬರಿ ದಲಿತರ ಸ್ವತ್ತಲ್ಲ ಈ ಕಂಡ ಮಹಾನ್ ನಾಯಕ ಅವರು ಈ ದೇಶದ ಆಸ್ತಿ ಅವರು ರಚಿಸಿರುವ ಈ ಸಂವಿಧಾನವು ಇತರೆ ಅನೇಕ ದೇಶಗಳು ಒಪ್ಪಿಕೊಂಡು ಭಾರತದ ಅನೇಕ ಕಾನುನೂಗಳನ್ನು ಅವರೂ ಕೂಡ ತಿಳಿದುಕೊಂಡು ಅಳವಡಿಸಿಕೊಂಡು ಮಾನವತಾ ಸಮಾನವಾದಿ ಸಂಕೇತವನ್ನು ಸಾರಿದವರು ಎಂದು ಸಂಘದ ಅಧ್ಯಕ್ಷರಾದ ತಿಪ್ಪಣ್ಣ ದೊ/ಮಾ,ಬೂದಿಹಾಳ ಅವರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೪ ನೇ ಜಯಂತಿಯನ್ನು ಸಂಘದ ಕಾರ್ಯಾಲಯದಲ್ಲಿ ಭಾವ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಮಾತನಾಡಿದರು.
ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಬರಿ ದಲಿತರು ಪೂಜಿಸುತ್ತಿಲ್ಲ ಬದಲಾಗಿ ಇಡೀ ಭಾರತದ ಜನತೆ ಹಾಗೂ ಇತರೆ ಅನೇಕ ದೇಶಗಳಲ್ಲಿ ಅವರು ರಾರಾಜಿಸುತ್ತಿದ್ದಾರೆ. ಅವರೊಬ್ಬ ದಲಿತ ಸಮುದಾಯದ ಅಮೂಲ್ಯ ರತ್ನ ಈ ದೇಶ ಕಂಡ ಮಹಾನ್ ನಾಯಕ ಅವರ ಹಾದಿಯಲ್ಲಿ ಇಂದು ನಾವು ನೀವು ನಡೆಯಬೇಕಾಗಿದೆ. ಅವರ ತತ್ವ ಸಿದ್ಧಾಂತಗಳನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಎಂದರು.
ಈ ಸರಳ ಜಯಂತಿಯನ್ನು ಗ್ರಾಮದ ಅರ್ಚಕರಾದ ಶ್ರೀ ಹುಚ್ಚೇಶ ಹುಚ್ಚಪ್ಪಯ್ಯನಮಠ ಅವರಿಂದ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಅಧ್ಯಕ್ಷರಾದ ತಿಪ್ಪಣ್ಣ ಬೂದಿಹಾಳ ಸಿದ್ದು ಗೌಡ ಶಿವು ಗಿರಣ್ಣವರ ಲಕ್ಷ್ಮಣ ಕೋರಿ ಬಸಪ್ಪ ಕೆಡಪ್ಪನವರ ಜಾಲಪ್ಪ ಮೇಟಿ ಶಂಕ್ರಪ್ಪ ಉಲ್ಲನ್ ಅವರ ಸುರೇಶ ಹಂಗರಗಿ. ಪರಸಪ್ಪ ಲಮಾಣಿ ನಿಂಗಪ್ಪ ಮಂಟಿ ಅನ್ನಪೂರ್ಣವ ಕಾಶಪ್ಪ ಬದಾಮಿ ಸಣ್ಣ ಮಲ್ಲವ್ವ ಗುಡುದಾರ ಸಿಬ್ಬಂದಿ ವರ್ಗಗಳು ಹಾಜರಾಗಿದ್ದರು

ವರದಿ : ಸಿದ್ದು ನೀಲಗುಂದ .