
ಅಮೀನಗಡ:
ದಿನದಿಂದ ದಿನಕ್ಕೆ ಏರುತ್ತಿರುವ ಡೀಸೆಲ್ ಬೆಲೆ ಇತ್ತ ಅನೇಕ ಮೈನಿಂಗ್ ಕಂಪನಿಗಳು ಮಾತ್ರ ಲಾರಿ ಮಾಲೀಕರಿಗೆ ಮೊದಲಿನ ಧರ ನೀಡುತ್ತಾ ಮೈನಿಂಗ್ ಟ್ರಾನ್ಸ್ಪೋಟ್೯ ಮಾಡುತ್ತಿದ್ದಾರೆ, ಇದರಿಂದ ಲಾರಿ ಮಾಲೀಕರಿಗೆ ಲಾಭ ಇರಲಿ ಹೆಚ್ಚುತ್ತಿರುವ ಡಿಸೇಲ್, ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ಇತ್ತ ಡ್ರೆವೈರ್ ಸಂಬಳ ಊಟ, ಕೈಲೆ ನಾವೇ ಕೊಟ್ಟರೂ ಸಹ ಪ್ರತಿ ದಿನ ನಾವು ನಷ್ಟ ಅನುಭವಿಸುತ್ತಿದ್ದೇವೆ,

ಡಿಸೇಲ್ ಬೆಲೆ ನಿಯಂತ್ರಣ ಬರುವ ವರೆಗೂ ದೊಡ್ಡೆನವರ್ ಮೈನಿಂಗ್ ಹಾಗೂ ಭೋರಾ ಮೈನಿಂಗ್ ಕಂಪನಿಗಳು ಲಾರಿ ಮಾಲೀಕರ ಸಧ್ಯದ ಪರಿಸ್ಥಿತಿಯನ್ನು ಅವರು ಅವಲೋಕನ ಮಾಡಿಕೊಂಡು ಹೆಚ್ಚುವರಿ ಹಣ ಲಾರಿ ಮಾಲೀಕರಿಗೆ ನೀಡಬೇಕೆಂದು ನಾವು ಈ ಲಾರಿಮುಷ್ಕರ ಮಾಡುವ ಮೂಲಕ ಅವರಲ್ಲಿ ವಿನಂತಿಸುತ್ತೇವೆಂದು ಉಧ್ಯಮಿ ಶ್ರೀ ಹುಸೇನ್ ಫೀರಾ ಖಾದ್ರಿ ಅವರು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.

ನಗರದ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಇಕ್ಬಾಲ್ ದೊಡಮನಿ ಅವರು ನಾವು ಸ್ವಯಂ ಪ್ರೇರಣೆಯಿಂದ ಈ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದೇವೆ ಜಿಲ್ಲೆಯಲ್ಲಿ ಅನೇಕ ಲಾರಿ ಮಾಲೀಕರು ಇದಕ್ಕೆ ಬೆಂಬಲ ನೀಡಿದ್ದಾರೆ.

ನಮ್ಮ ಬಾಗಲಕೋಟೆ ಜಿಲ್ಲೆಯಿಂದ ಹೊರಡುವ ಲೈಮಸ್ಟೂನ್,ಡೊಲೊಮೈಟ್,ಮೈನ್ಸ್, ಮತ್ತು ಬೇರೆ ಜಿಲ್ಲೆಯಿಂದ ಬರುವ ಪೌಂಡಾಶ್ (ಭೂದಿ) ಶ್ಲಾಗ್ ಗಳನ್ನು ಸಾಗಾಟ ಮಾಡುವುದನ್ನು ನಾವು ನೀಶೆಧಿಸಲಾಗಿದೆ. ಇವುಗಳನ್ನು ಹೊರತು ಪಡಿಸಿ ಎಲ್ಲದಕ್ಕೂ ಅನುಮತಿ ಇದೆ.

ಈ ನಮ್ಮ ಹೋರಾಟಕ್ಕೆ ನ್ಯಾಯ ಸಿಗುವ ವರೆಗೂ ಈ ಮುಷ್ಕರ ನಿಲ್ಲುವುದಿಲ್ಲ ಮೈನ್ಸ್ ಕಂಪನಿ ಮಾಲೀಕರು ಕೂಡ ನಮ್ಮ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಈ ಸಮಸ್ಯಗೆ ಅವರೆ ಉತ್ತರ ನೀಡಬೇಕು ಎಂದರು. ಈ ಲಾರಿ ಮುಷ್ಕರದಲ್ಲಿ ಭೀಮಸಿ,ಭೀರಪ್ಪ,ಲಾಲಸಾಬ ಬಾಗೇವಾಡಿ, ದಾವಲಸಾಬ ಲವಳಸರ,ಹಾಗೂ ನಗರದ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಮಂಜುನಾಥ ರಾಠೊಡ ಸೇರಿದಂತೆ ಅನೇಕ ಲಾರಿ ಮಾಲೀಕರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
