
ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ ನಂತರ ಬದಾಮಿಯ ಹಂಪಿ ವಿಶ್ವವಿದ್ಯಾಲಯದಲ್ಲಿ ನಾಳೆ ಶನಿವಾರ ೧೯/ ೦೪/೨೦೨೫ ರ ಬೆಳಗ್ಗೆ ೧೦ ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ.
ರಾಜ್ಯದ ಉದ್ದಗಲಕ್ಕೂ ವಿವಿಧ ಉದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸ್ನೇಹಿತರು ನಾಳೆ ದಿನ ಒಂದೆ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಎಲ್ಲಾ ಸ್ನೇಹಿತರ ಬಳಗದಿಂದ ಗುರುಗಳಿಗೆ ಗೌರವ ನಮನ ಹಾಗೂ ಸನ್ಮಾನ ಮತ್ತು ನೆನಪುಗಳ ಬುತ್ತಿ ಬಿಚ್ಚಿಡುವ ಸುಂದರ ಸುಮಧುರ ಕ್ಷಣಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಎಲ್ಲಾ ಸ್ನೇಹಿತರು ತಪ್ಪದೇ ಈ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸ್ನೇಹಿತರಾದ ಪ್ರಸಾದ್ ಅವರು ವಿನಂತಿಸಿದ್ದಾರೆ.

ಕಾರ್ಯಕ್ರಮ ೧೦ ಗಂಟೆಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ: ಮೋಹನ್ ರಾವ್ ಬಿ ಪಂಚಾಳ್ ಅವರು ವಹಿಸಲಿದ್ದಾರೆ. ಸನ್ಮಾನಿತರಾಗಿ ಡಾ: ಎಸ್,ಸಿ,ಪಾಟೀಲ್, ಹಾಗೂ ಡಾ: ಎಸ್ ಎಸ್ ಗಡ್ಡಿ, ಡಾ: ಎನ್, ಎಂ ಅಂಗಡಿ,ಡಾ: ಮಲ್ಲಿಕಾರ್ಜುನ ಬಾಗೋಡಿ, ಡಾ: ಯಾದಪ್ಪ ಪರದೇಸಿ ಡಾ: ಶ್ರೀ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ,

ಶ್ರೀ ರಾಮಚಂದ್ರಪ್ಪನವರು. ಶ್ರೀ ಮಲ್ಲಿಕಾರ್ಜುನ ಮಹಾಮನಿ ಸೇರಿದಂತೆ ಅನೇಕ ಗುರುಗಳು ಈ ಕಾರ್ಯಕ್ರಮದಲ್ಲಿ ಗೌರವ ಸನ್ಮಾನಕ್ಕೆ ಆಗಮಿಸಲಿದ್ದಾರೆ. ಎಂದು ಗೆಳೆಯರ ಬಳಗ ಪ್ರಕಟನೆ ನೀಡಿದೆ.
ವರದಿ: ಸಿದ್ದು ನೀಲಗುಂದ