
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಗೌರಮ್ಮ ಹನಮಂತಪ್ಪ ಮುಳ್ಳೂರು ಅವರು ಆಯ್ಕೆಯಾದರು. 1983 ರಿಂದ ರಾಜ್ಯ ರಾಜಕೀಯ ರಂಗದಲ್ಲಿ ದಿಗ್ಗಜ ನಾಯಕರೊಂದಿಗೆ ಗುರುತಿಸಿಕೊಂಡ ಮುತ್ತಣ್ಣ ಮುಳ್ಳೂರು ಅವರ ಸಹೋದರ ಹನಮಂತ ಮುಳ್ಳೂರು ಅವರ ಧರ್ಮಪತ್ನಿ ಗೌರಮ್ಮ ಇಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಗುರುಹಿರಿಯಗೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ನಮ್ಮ ಕುಟುಂಬದ ಪರವಾಗಿ ಮುತ್ತಣ್ಣ ಅವರು ಹಾಗೂ ಹನಮಂತ ಅವರು ಧನ್ಯವಾದ ಹೇಳಿದರು. ಸದಾ ಜನಪರವಾಗಿ ಯುವಕರ ಕಣ್ಮನಿಯಾದ ಮುತ್ತಣ್ಣ ಮುಳ್ಳೂರು ಅವರ ಸಕ್ರಿಯ ರಾಜಕಾರಣಿ ಹಾಗೂ ಅವರ ಜನಪರ ಕೂಗು ಮತ್ತು ಸದಾ ಜನರೊಂದಿಗಿನ ಒಡನಾಟದ ಫಲವಾಗಿ ಇಂದು ನಮ್ಮ ಮನೆತನಕ್ಕೆ ಅಧಿಕಾರ ಮತ್ತೆ ಬಂದಿದೆ ಇದು ನಮ್ಮ ತಂದೆ ತಾಯಿ ಪುಣ್ಯದ ಫಲ ಎಂದರು.

ನಮ್ಮ ಕುಟುಂಬದ ರಾಜಕೀಯ ಜೀವನ ಮತ್ತೆ ಪ್ರಾರಂಭವಾಗಿದೆ,ನಮ್ಮನ ಆರ್ಶಿವಾದ ಮಾಡಿದ ಜನತೆ ಮತ್ತೆ ನಮ್ಮ ಸಹೋದರನಿಗೂ ಆರ್ಶಿವಾದ ಮಾಡಿದ್ದು ನಮ್ಮ ತಂದೆ ತಾಯಿಯ ಪುಣ್ಯದ ಫಲ ಎಂದು ನಾನು ಭಾವಿಸಿದ್ದೇನೆ, ನಾನು ೨೦೦೫ ರಲ್ಲಿ ಸದಸ್ಯರಗಿ ೨೦೦೭ ರಲ್ಲಿ ತಾಲ್ಲೂಕು ಪಂಚಾಯತ ಅಧ್ಯಕ್ಷರಾಗಿ ಸೇವೆ ಮಾಡಿನಿ ಅವತ್ತಿನ ಅಪಾರ ಜನಗಳ ಪ್ರೀತಿಯನ್ನು ನಾವು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ ಅದರ ಫಲವಾಗಿ ಇಂದು ನಮ್ಮ ಮನೆತನಕ್ಕೆಈ ಅಧಿಕಾರ ಸಂದ ಗೌರವ ಎಂದರು.

ಈ ಅಭಿನಂದನಾ ಸರಳ ಸಭೆಯಲ್ಲಿ ಮುತ್ತಣ್ಣ ಮುಳ್ಳೂರು ಹಾಗೂ ಹನಮಂತ ಮುಳ್ಳೂರು ,ಹಾಗೂ ಧರ್ಮಪತ್ನಿ ಶ್ರೀಮತಿ ಗೌರಮ್ಮ ಮುಳ್ಳೂರು, ಮತ್ತು ಗ್ರಾಮದ ಹಿರಿಯರಾದ ಶ್ರೀ ಯಮನಪ್ಪ ಹಿರೇಗೌಡರ್ ,ಐಯ್ಯಪ್ಪ ಮಲ್ಲಪ್ಪ ಬೆಳ್ಳಿ

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News