ಬಾಗಲಕೋಟೆ : ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆಯೇ ವೈದ್ಯರು, ನರ್ಸ್ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಥ ಕೊರೊನಾ ವಾರಿಯರ್ಗಳ ಕಾಳಜಿ ವಹಿಸಬೇಕಾಗಿರುವುದು ಕೂಡ ಈ ಹೊತ್ತಿನ ಅಗತ್ಯತೆ. ಅವರು ಚೆನ್ನಾಗಿದ್ದರೆ ಮಾತ್ರ ಈ ಭೀಕರ ಪರಿಸ್ಥಿತಿಯನ್ನು ಎದುರಿಸಬಹುದು. ಆ ಕಾರಣಕ್ಕಾಗಿ ಸ್ಟೀಲ್ ಉದ್ಯಮಿ, ಹಾಗೂ ಬಿಜೆಪಿ ಪಕ್ಷದ ಯುವ ನಾಯಕ ರಾಜು ದಾನಿ ಅವರು ತಮ್ಮ ನೆರವಿನ ಹಸ್ತ ಚಾಚಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಹಾಗೂ ಇಲಕಲ್ಲ ತಾಲೂಕಿನ ಗುಡೂರ ಎಸ್.ಸಿ, ಚಿಕನಾಳ, ಮುರಡಿ, ವಡಗೇರಿ, ಕೆಲೂರು ಸೂಳೇಭಾವಿ, ಗ್ರಾಮ ಪಂಚಾಯತ್ ಹಾಗೂ ಅಮೀನಗಡ, ಗುಡೂರು, ಸೊಳೇಭಾವಿ, ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ಗಳು ಸಿಬ್ಬಂದಿಗೆ, ಮತ್ತು ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ಇಂದು ಊಟ ನೀಡುತ್ತಿದ್ದಾರೆ, ಇಂದು 280 ಕ್ಕೊ ಅಧಿಕ ಕರೋನಾ ವಾರಿಯರ್ ಗಳಿಗೆ ಮಧ್ಯಾಹ್ನ ಔತನ ನೀಡಿದರು, ದಿನವಿಡೀ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿದ್ದಾರೆ,

ಅಲ್ಲದೇ ಕೆಲಸದ ಒತ್ತಡದ ಮಧ್ಯ ಮನೆಗೆ ಊಟಕ್ಕಾಗಿ ತೆರಳುವುದು ಕಷ್ಟ ಹೀಗಾಗಿ ಕಾರ್ಯ ಸ್ಥಳದಲ್ಲಿ ಅವರಿಗೆ ಉತ್ತಮ ರುಚಿಕರವಾದ ಊಟ ನೀಡಬೇಕು, ಎಂಬುದು ರಾಜು ಅವರ ಅಭಿಪ್ರಾಯ ಹೀಗಾಗಿ ಇಂದು ಮಧ್ಯಾಹ್ನ ೧:೩೦ ರ ಸುಮಾರಿಗೆ ಊಟದ ವ್ಯವಸ್ಥೆ ಮಾಡಿದ್ದರು, ಅಲ್ಲದೆ ರಾತ್ರಿ ೯ ಗಂ, ಸುಮಾರಿಗೆ ಅಮೀನಗಡ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಸ್ಥಳಿಯ ಪತ್ರಕರ್ತರಿಗೆ ವಿಶೇಷ ಔತನ ಕೂಟ ಏರ್ಪಡಿಸಿದ್ದರು.ಅವರ ಈ ಸಮಾಜ ಸೇವೆ ಇದು ಮೊದಲಿನಲ್ಲ ನೀರಂತರವಾಗಿ ಸಾಮಾಜಿಕ ಧಾರ್ಮಿಕವಾಗಿ , ಸಾಮೂಹಿಕ ವಿವಾಹ, ಆರ್ಥಿಕ ಸಹಾಯ ಮಾಡುವ ಮೂಲಕ ರಾಜ್ಯ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡವರು. ಇವರ ಈ ಸಾಮಾಜಿಕ ಕಾಳಜಿ, ಹೀಗೆ ಮುಂದುವರಿಯಲಿ ಎಂದು ನಮ್ಮ ಬಿಬಿ,ನ್ಯೂಜ್ ಆಸಿಸುತ್ತದೆ. ಅಲ್ಲದೆ ಇಂದಿನ ಈ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು
ಮಹೇಶ ಪವಾರ ,ವಿನೋದ ಜೋತುರಿ
ಪ್ರಶಾಂತ ಬಸವಾ ,ಸಚ್ಚಿನ್ ದಲಮಂಜನ್,ನಾಗೇಶ ಅರವಿಂದ ಮೇರವಾಡಿ, ಪ್ರಶಾಂತ ಪಾಟೀಲ ಗಂಜಿಹಾಳ,ಗ್ಯಾನಪ್ಪ ಗೋನಾಳ S SK ಸಮಾಜ ಗುಡೂರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.