
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ ಮಾರ್ಚ್ ೧ ನೇ ತಾರಿಕು ಶಿವರಾತ್ರಿ ಅಮವಾಸ್ಯೆ ಅಂಗವಾಗಿ ಶಿವಯೋಗದ ನಿಮಿತ್ತವಾಗಿ ಶಿವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ ೧ ಮಂಗಳವಾರ ದಂದು ಬೆಳಗಿನ ಜಾವ ೪ ಗಂಟೆಗೆ ಶಿವಾಲಯದಲ್ಲಿ ಮಹಾ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಮಹಾ ಪೂಜೆ ನಡೆಯಲಿದೆ, ಬೆಳಗ್ಗೆ ೦೬ ಗಂಟೆಯಿಂದ ಮಹಾ ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮ ನಡೆಯಲಿದೆ. ನಂತರ ೧೨:೩೦ ಕ್ಕೆ ಎರಡನೆ ಮಹಾ ರುದ್ರಾಭಿಶೇಖ & ಸಹಸ್ರ ಬಿಲ್ವಾರ್ಚನೆ ಪೊಜೆ ನಡೆಯಲಿದೆ, ಮಧ್ಯಾಹ್ನ ೧ಗಂಟೆಯಿಂದ ರಾತ್ರಿ ೯ ಗಂಟೆಯ ವರೆಗೆ ಮಹಾ ಅನ್ನಸಂತರ್ಪನೆ ಪ್ರಸಾದ ನಡೆಯಲಿದೆ. ಅದೆ ದಿನ ಸಾಯಂಕಾಲ ೦೪ ಗಂಟೆಗೆ ೧೦೧ ಲೀಟರ್ ಹಾಲಿನಿಂದ ಶಿವಲಿಂಗಕ್ಕೆ ಮಹಾ ಕ್ಷೀರಾಭಿಶೇಖ ಪೊಜೆ ನಿರಂತರ ೩ ಗಂಟೆ ಮಾಹಾ ಕ್ಷೀರಾಭಿಶೇಖ ನಡೆಯಲಿದೆ ಸಾರ್ವಜನಿಕವಾಗಿ ಭಕ್ತರಿಗೆ & ಶಿವರಾತ್ರಿ ಉಪಾಸಕರಿಗೆ ಒಂದು ಬಟ್ಟಲು ಹಾಲು ಒಂದು ಬಿಲ್ವ ಪತ್ರಿಯನ್ನು ಶಿವಲಿಂಗಕ್ಕೆ ಅರ್ಪಿಸುವ ಅವಕಾಶವನ್ನು ನೀಡಲಾಗಿದೆ.
ಮೊದಲು ಬಂದವರಿಗೆ ಈ ಅವಕಾಶ ಸಿಗಲಿದೆ,ಸಾಯಂಕಲ ೭:೩೦ ಕ್ಕೆ ಮಹಾ ಮಂಗಳಾರತಿ, ಪೊಜೆ ನಡೆಯಲಿದೆ.ನಂತರ ದೇವಾಲಯಕ್ಕೆ ಬಂದ ಮುತ್ತೈದೇಯರಿಂದ ದೀಪೊತ್ಸವ ನಡೆಯಲಿದೆ. ಸಾಯಂಕಾಲ ೬;೩೦ ಕ್ಕೆ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತರಾಷ್ಟ್ರೀಯ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಮಹಾದೇವ ಸತ್ತಿಗೇರಿ ಅವರಿಂದ ಹಾಸ್ಯಸಂಜೆ ಜನಪದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
೨/೦೩/೨೦೨೨ ಬುಧವಾರ ಶಿವರಾತ್ರಿ ಅಮವಾಸ್ಯೆ ನಿಮಿತ್ಯ ಬೆಳಗ್ಗೆ ೮ ಗಂಟೆಗೆ ರುದ್ರಾಭಿಶೇಖ ಸಹಸ್ರ ಬಿಲ್ವಾರ್ಚನೆ, ಮಹಾ ಪೊಜೆ ನಡೆಯಲಿದೆ ೧೦:೩೦ ಕ್ಕೆ ಇಲಕಲ್ಲ ನಗರದ ಶ್ರೀಮತಿ ಸುನಿತಮ್ಮ ಕರಜಗಿ ಹಾಗೂ ಸಂಗಡಿಗರಿಂದ ಹಾಗೂ ಶೂಲೇಭಾವಿ ಗ್ರಾಮದ ಶ್ರೀಮತಿ ಜ್ಯೋತಿ ಜ ಪೂಜಾರ ಹಾಗೂ ದೇವಾಂಗ ಸಮಾಜದ ಮಹಿಳೆಯರಿಂದ ರುದ್ರ ಪಠಣ & ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ, ೧೨ ಗಂಟೆಗೆ ಮಹಾ ಅನ್ನಸಂತರ್ಪನೆ ಪ್ರಸಾದ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈ ಎರಡು ದಿನದ ವಿಶೇಷ ಧಾರ್ಮಿಕ ಪೊಜಾ ಕಾರ್ಯಕ್ರಮ ಹಾಗೂ ಶೂಲೇಶ್ವರ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಆ ಶಿವನ ಜಾಗರಣೆ ಮಾಡೋಣ ಹಾಗೆ ಎಲ್ಲರೂ ಸೌಹಾರ್ಧತೆಯಿಂದ ಭಾವೈಕ್ಯತೆಯಿಂದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಮಾಜಿ ಶಾಸಕ ಶ್ರೀ ಎಸ್,ಜಿ,ನಂಜಯ್ಯನಮಠ ಹಾಗೂ ಸಹಕಾರಿ ಧುರಿಣ ಶ್ರೀ ಆರ್,ಪಿ,ಕಲಬುರ್ಗಿ ಅವರು ತಿಳಿದರು. ಈ ಉತ್ಸವದ ಪೊಸ್ಟರ್ ಬಿಡುಗಡೆ ಸಂದರ್ಭದಲ್ಲಿ ಶೂಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಕಮತಗಿ,ಉಪಾಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ,ನಿರ್ದೆಶಕ ಶ್ರೀ ಮಹಂತೇಶ ಭದ್ರಣ್ಣನವರ,ಶ್ರೀ ಮುತ್ತಪ್ಪ ಹಡಪದ,ಶ್ರೀ ಆನಂದ ಮೊಕಾಶಿ ಶ್ರೀ ಮಹಾಂತಯ್ಯ ಹಿರೇಮಠ ಕಾರ್ಯದರ್ಶಿ , ಶ್ರೀ ಡಿ,ಬಿ,ವಿಜಯಶಂಕರ್ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಮಾನು ಹೊಸಮನಿ,ಶ್ರೀ ವಿರೇಶ ಮಠಪತಿ ಉಪಸ್ಥಿತಿ ಇದ್ದರು.