
ಇಲಕಲ್ಲ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಎಲ್ಐಸಿ ಏಜೆಂಟರಾದ ಶ್ರೀ ಸಲೀಂ ಹೊಸಮನಿ ನಗದ ಸಾರ್ವಜನಿಕ ರಂಗದಲ್ಲಿ ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡ ಯುವನಾಯಕ, ತಾಲೂಕಿನ ಗೃಹರಕ್ಷಕ ದಳದ ಘಟಕಾ ಅಧಿಕಾರಿಯಾಗಿ ಉತ್ತಮ ಸೇವೆ ಮಾಡುತ್ತಾ ಇದರೊಂದಿಗೆ ಎಲ್ಐಸಿ ಕಂಪನಿಯಲ್ಲಿ ಎಲ್ಐಸಿ ಚೇರ್ಮನ್ ಕ್ಲಬ್ ಅಸೋಶಿಯೇಶನ್ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ, ಇದರ ಮಹತ್ವ ಪ್ರತಿಶತ ನೂರಕ್ಕೆ ನೂರರಷ್ಟು ಟಾರ್ಗೆಟ್ ಮಾಡಿದಾಗ ಈ ಅಸೋಸಿಯೇಷನ್ ನಲ್ಲಿ ಸದಸ್ಯತ್ವ ಸ್ಥಾನ ಸಿಗುತ್ತದೆ,

ಬಾಲ್ಯದಿಂದ ಅತ್ಯಂತ ಕ್ರಿಯಾಶೀಲ ಯುವಕರಾದ ಸಲೀಮ್ ಅವರು ಸಾರ್ವಜನಿಕ ರಂಗದಲ್ಲಿ ಸಮಾಜ ಸೇವಕರಾಗಿ ತಮ್ಮ ವೃತ್ತಿ ಬದುಕಿನೊಂದಿಗೆ ಸಮಾಜ ದೊಂದಿಗೆ ಬೆಳೆದುಕೊಂಡು ಉತ್ತಮ ಸೇವೆ ಮೂಲಕ ಗುರುತಿಸಿಕೊಂಡವರು ಬಡವರ ಪಾಲಿನ ಕಾಮಧೇನುವಾಗಿ ವಿವಿಧ ಧಾರ್ಮಿಕ ಸಮುದಾಯಗಳಿಗೆ ಸಹಾಯ ಸಹಕಾರ ನೀಡುತ್ತಾ ಪ್ರೋತ್ಸಾಹಿಸುತ್ತಾ ಸಮಾಜವನ್ನು ಸಂಘಟಿಸುತ್ತ ಹೋರಾಟಗಾರರಾಗಿ ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ. ಹಗಲು-ರಾತ್ರಿ ಎನ್ನದೆ ಹುನಗುಂದ ತಾಲೂಕಿನ ಗೃಹರಕ್ಷಕ ದಳ ತಾಲೂಕ ಘಟಕ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿದ್ದಾರೆ,

ಈ ಸಮಾಜದ ಯುವಕರಿಗ ಸಲೀಂ ಅವರು BB News ನನ್ನೊಂದಿಗೆ ಮಾತನಾಡಿ ಒಂದು ಕರೆಯನ್ನು ನೀಡಿದರ,ಈ ಭಾರತ ದೇಶದಲ್ಲಿ ಹೆಚ್ಚುತ್ತಿರುವ ಅನೇಕ ಮಲ್ಟಿನ್ಯಾಷನಲ್ ಕಂಪನಿಗಳು ಉದ್ಯೋಗವನ್ನು ಸೃಷ್ಟಿಸುವ ಭರವಸೆ ನೀಡಿ ತಮ್ಮ ತಂತ್ರಜ್ಞಾನಗಳ ಮೂಲಕ ದೇಶದಲ್ಲಿ ಹೆಚ್ಚಿನ ನಿರುದ್ಯೋಗವನ್ನು ಸೃಷ್ಟಿ ಮಾಡುತ್ತಿದ್ದಾರೆ ದೇಶದಲ್ಲಿ ದಿನದಿಂದ ದಿನಕ್ಕೆ ಕೃಷಿ ಭೂಮಿಗಳು ಕರಗುತ್ತಾ ಹೋಗುತ್ತಿವೆ, ಅಲ್ಲದೆ ಹಳ್ಳಿಗಳು ಪಟ್ಟಣಗಳಾಗಿ ಮಾರ್ಪಡುತ್ತಿವೆ, ಇದರಿಂದ ದೇಶದಲ್ಲಿ ಮುಂದಿನ ದಿನಮಾನದಲ್ಲಿ ಆಹಾರ ಸಮಸ್ಯೆ ,ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ. ಯುವಕರು ದೇಶದ ಸುಭದ್ರ ಸಮಾಜವನ್ನು ನಿರ್ಮಾಣ ಮಾಡಲು ಕಂಕಣಬದ್ಧರಾಗಿ ನಿಲ್ಲಬೇಕು.

ತಮ್ಮ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಹಗಲು-ರಾತ್ರಿ ಶ್ರಮಪಡಬೇಕು,ನಾನು ಶ್ರೀಮಂತನಲ್ಲ ಮಧ್ಯಮ ವರ್ಗದಲ್ಲಿ ಹುಟ್ಟಿದ್ದೇನೆ. ಬಡತನ ಪಾಠ ಕಲಿಸಿದೆ,ಇಂದು ನಾನು ಎಲ್ಐಸಿ ಕಂಪನಿಯಲ್ಲಿ ಕಂಪನಿ ಮಾಡಿದ ಟಾರ್ಗೆಟ್ ಮೀರಿ ಕೆಲಸ ಮಾಡಿ ಹಲವಾರು ಪ್ರಶಸ್ತಿಗಳನ್ನು ಕಂಪನಿಯಿಂದ ಪಡೆದಿದ್ದೇನೆ, ಆರ್ಥಿಕವಾಗಿ ಬೆಳೆಯುತ್ತಿದ್ದೇನೆ, ಪ್ರತಿಯೊಬ್ಬ ಯುವಕರು ತಮ್ಮ ದುಡಿಮೆಯ ಹಸಿವನ್ನು ವ್ಯಕ್ತಪಡಿಸಿದಾಗ ದುಡಿಮೆಯ ಹಾದಿ ಕಾಣುತ್ತದೆ,ಇಂದಿನ ಯುವಕರು ಹೆಚ್ಚಿನ ಸಮಯವನ್ನು ತಮ್ಮ ಮೊಬೈಲ್ ನಲ್ಲಿ, ವಾಟ್ಸಪ್, ಫೇಸ್ಬುಕ್ ,ಇನ್ಸ್ಟಾಲ್ ಗ್ರಾಂ,

ಟ್ವಿಟರ್ ,ಯೂಟ್ಯೂಬ್ ,ಹೀಗೆ ಸಮಯವನ್ನು ವ್ಯರ್ಥ ಮಾಡದೆ ದುಡಿಮೆಯ ಕಡೆ ಯುವಕರು ಚಿಂತನೆ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿ ದೇಶದ ಸುಭದ್ರ ಸಮಾಜವನ್ನು ಕಟ್ಟಲು ನಾನು ವಿನಂತಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದರು.