Breaking News

ಮದುವೆ ಬೇಡ ಅಂತ ಓಡಿ ಹೋದವಳು ಮರಳಿ ಬಂದದ್ದು ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿ..!

ಕುಟುಂಬದ ಒತ್ತಡಗಳಿಂದ ಶಿಕ್ಷಣ ಮೊಟಕುಗೊಳಿಸದವರು ಬಹಳಷ್ಟು ಜನರಿದ್ದಾರೆ. ದೇಶ ಎಷ್ಟೇ ಮುಂದುವರಿದರೂ ಕದ್ದು ಮುಚ್ಚಿ ಬಾಲ್ಯ ವಿವಾಹ, ಹೆಣ್ಮಕ್ಕಳ ಇಚ್ಛೆಗೆ ವಿರುದ್ಧವಾಗಿ ವಿವಾಹ ಮಾಡುವುದು ನಡೆಯುತ್ತಲೇ ಇರುತ್ತದೆ. ಇಷ್ಟವಿಲ್ಲದ ವಿವಾಹದಿಂದ ತಪ್ಪಿಸಿ ಓಡಿದ ಈಕೆ ಮರಳಿ ಬಂದ್ದಿದ್ದು ಟ್ಯಾಕ್ಸ್ ಆಫೀಸರ್ ಆಗಿ. ಮೀರತ್‌ನ ಈ ಯುವತಿಯ ಬದುಕೇ ಮಾದರಿ..!

ಆದರೆ ಈಕೆ ಕನಿಷ್ಠ ಹಣದೊಂದಿಗೆ 2013ರಲ್ಲಿ ಮನೆ ಬಿಟ್ಟು ಹೋಗಿದ್ದಳು. ಮೀರತ್‌ನ ಈ ಯುವತಿ 28 ವರ್ಷದಲ್ಲಿ ಮನೆ ಬಿಟ್ಟಾಗ ಬದುಕುವ ಕನಸು ಮಾತ್ರ ಬಿಡಲಿಲ್ಲ. ಬರೋಬ್ಬರಿ 7 ವರ್ಷದ ನಂತರ ಸಂಜು ರಾಣಿ ವರ್ಮಾ ಪಿಎಸ್‌ಸಿ ಪರೀಕ್ಷೆ ಬರೆದು ಪಾಸಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಮರಳಿದ್ದಾಳೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಜಿ ಕಲಿಯುತ್ತಿದ್ದ ಸಂದರ್ಭ ಸಂಜು ತಾಯಿ ನಿಧನರಾಗಿದ್ದರು.

ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿ ಮದುವೆ ಮಾಡಿಸೋಕೆ ಕುಟುಂಬಸ್ಥರ ತಯಾರಿ ನಡೆಯಿತು. ವಿವಾಹಕ್ಕಾಗಿ ಒತ್ತಡವೂ ಹೆಚ್ಚಿತು.

ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸದ ಕುಟುಂಬದಲ್ಲಿ ಹುಟ್ಟಿದ್ದರಿಂದ ಆಕೆಗಾಗಿ ಧ್ವನಿ ಎತ್ತಲು ಕುಟುಂಬದಲ್ಲಿದ್ದದ್ದು ಆಕೆ ಮಾತ್ರ. ಏನು ಮಾಡಬೇಕಿದ್ದರೂ ಆಕೆಯೇ ಮಾಡಬೇಕಿತ್ತು.

ಮಗಳ ಹೆಸರಲ್ಲಿ ಉಳಿತಾಯ ಮಾಡಬೇಕೆ? ಸುಕನ್ಯಾ ಸಮೃದ್ಧಿ ಖಾತೆ ತೆರೆಯಲೇಕೆ ತಡ?

ತನ್ನ ಗುರಿಮುಟ್ಟಬೇಕಾದರೆ ತಾನೇ ಏನಾದರು ಮಾಡಬೇಕುಂಬುದು ಸಂಜುಗೆ ಅರ್ಥವಾಗಿತ್ತು. ಆಕೆಯ ಕುಟುಂಬ ಆಕೆಯನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. 
2013ರಲ್ಲಿ ಮನೆ ಬಿಟ್ಟಾಗ ಆಕೆ ಶಿಕ್ಷಣವನ್ನೂ ಅರ್ಧದಲ್ಲೇ ಬಿಡಬೇಕಾಯ್ತು. ಆಕೆಗೆ ಆರ್ಥಿಕ ನೆರವು ನೀಡುವುದಕ್ಕೆ ಯಾರೂ ಇರಲಿಲ್ಲ. ನಂತರ ಚಿಕ್ಕದೊಂದು ಮನೆ ಬಾಡಿಗೆಗೆ ಪಡೆದು ಮಕ್ಕಳಿಗೆ ಟ್ಯೂಶನ್ ಹೇಳೋಕೆ ಆರಂಭಿಸಿದ್ರು ಸಂಜು.

ಈ ಸಂದರ್ಭ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಾರ್ಟ್ ಟೈಂ ಕೆಲಸವೂ ಸಿಕ್ಕಿತು. ಇದೆಲ್ಲವನ್ನೂ ಮ್ಯಾನೇಜ್ ಮಾಡಿಕೊಳ್ಳುವ ಜೊತೆಗೆ ಸಂಜು ಪಿಎಎಸ್‌ಗಿ ತಯಾರಿ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ.

ಉಮಾ, ಪ್ರತಿಯೊಬ್ಬರ ಜೀವನಕ್ಕೂ ಸ್ಫೂರ್ತಿ ತುಂಬುವ ಡೈಮಂಡ್!

2018ರ ಯುಪಿಪಿಎಸ್‌ಸಿ -ಪರೀಕ್ಷೆಯ ಫಲಿತಾಂಶ ಕಳೆದ ವಾರವಷ್ಟೇ ಬಂತು. ಅಂತೂ ಅಂಕಪಟ್ಟಿಯಲ್ಲಿ ಹೆಸರು ಗಿಟ್ಟಿಸೋಕೆ ಯಶಸ್ವಿಯಾದ್ರು ಸಂಜು ರಾಣಿ ವರ್ಮ. 35 ವರ್ಷದ ಸಂಜು ಈಗ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಬಯಸುತ್ತಿದ್ದಾರೆ. ಅಂತೂ ಹೆಣ್ಣಿಗೆ ಆಕೆಯ ಬದುಕನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡದವರು ಆಕೆಯನ್ನು ಗೌರವದಿಂದ ನೋಡುವಂತೆ ಮಾಡಿದ್ದಾರೆ ಸಂಜು.

ಸಂಜು ಗೆಲುವಿನಿಂದ ಪುರುಷರು ಮತ್ತು ಗಂಡು ಮಕ್ಕಳ ನಿಯಂತ್ರಣದಲ್ಲಿಯೇ ಹೆಣ್ಣು ಮಕ್ಕಳಿರಬೇಕು ಎಂಬ ಅಲಿಖಿತ ನಿಯಮ ಹಿಡಿದು ಬದುಕುವ ಸಮಾಜಕ್ಕೆ ಸೋಲಾಗಿದೆ ಎನ್ನುತ್ತಾರೆ ಸಂಜು ರಾಣಿಗೆ ಕಲಿಸಿದ ಮೀರತ್‌ನ ಶಿಕ್ಷಕರು.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.