
ಅಮೀನಗಡ: ಅಮೀನಗಡ ನಗರದ ೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೂತನ ಉಪತಹಶೀಲ್ದಾರ್ ಆಗಿ ಚಾಜ್೯ ತೆಗೆದುಕೊಂಡ ಶ್ರೀ ಎಮ್,ಎಚ್,ಹೆಬ್ಬಳ್ಳಿ ಅವರು ಪ್ರಥಮ ಬಾರಿಗೆ ಧ್ವಜಾರೋಹಣವನ್ನು ನೆರವೇರಿಸಿದರು. ಈ ಮೊದಲು ಇದೆ ನಗರದಲ್ಲಿ ತಲಾಟಿಯಾಗಿ,ಕಂದಾಯ ನೀರಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದರು,ಈಗ ಇದೆ ನಗರಕ್ಕೆ ಪ್ರೋ ಮೋಶನ್ ಹೊಂದಿ ಚಾರ್ಜ್ ತೆಗೆದುಕೊಂಡಿದ್ದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಯಾಕೆಂದರೆ,ಸುಮಾರು ೩೪ ಹಳ್ಳಿಗಳನ್ನು ಒಳಗೊಂಡ ಈ ಕಛೇರಿ ಈಗ ನೂತನ ತಾಲೂಕು ಒಡೆದ ನಂತರ ಹಲವಾರು ಹಳ್ಳಿಗಳು ಒಡೆದು ಹೋಗಿವೆ,

ಹೀಗಾಗಿ ಅಮೀನಗಡ ನಗರದ ಸಂಪೂರ್ಣ ಮಾಹಿತಿ ಗೊತ್ತಿರುವ ಹೆಬ್ಬಳ್ಳಿ ಅವರು ಹಿಂದಿನ ತಹಶಿಲ್ದಾರರ ಶ್ರೀ ಎಸ್,ವ್ಹಿ ಕುಂದರಗಿ ಅವರಂತೆ ಉತ್ತಮ ಕೆಲಸ ಮಾಡಲಿ ಎಂದು ಡಿ,ಎಸ್,ಯತ್ನಟ್ಟಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಈ ಬಗ್ಗೆ ಧ್ವಜಾರೋಹಣ ನೇರವೇರಿಸಿ BB News ನೊಂದಿಗೆ ಮಾತನಾಡಿದ ಶ್ರೀ ಎಮ್,ಆರ್ ಹೆಬ್ಬಳಿ ಅವರು ನಾನು ಕಳೆದ ಒಂದು ವಾರದಿಂದ ಇಲ್ಲಿ ಚಾಜ್೯ ತೆಗೆದುಕೊಂಡಿದ್ದೇನೆ,ಇಲ್ಲಿನ ಎಲ್ಲಾ ಅಧಿಕಾರಿ,ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸರಕಾರದ ಎಲ್ಲಾ ಯೋಜನೆಯನ್ನು ಸಮಾನಾವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ,ಹಾಗೂ ಹಿಂದಿನ ತಹಶಿಲ್ದಾರರ ಕುಂದರಗಿ ಅವರಂತೆ ಉತ್ತಮ ಕೆಲಸ ಮಾಡುತ್ತೇನೆ.

ತಮ್ಮೆಲ್ಲರ ಸಹಕಾರ ಅಗತ್ಯ ಎಂದರು,ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕಂದಾಯ ನೀರಿಕ್ಷಕ ಶ್ರೀ J,S,ಚೀನಿವಾಲರ,ಗ್ರಾಮ ಲೆಕ್ಕಾಧಿಕಾರಿ ಶ್ರೀ ಡಿ,ಎಸ್,ಯತ್ನಟ್ಟಿ,ಹಾಗೂ ಎಸ್,ಬಿ,ಅಂಗಡಿ,ಶ್ರೀ ಸುರೇಶ ಹುದ್ದಾರ,ಶ್ರೀ ರಾಜು,ಹಗ್ಗದ,ಶ್ರೀ ಶರಣು ಇಟಗಿ, ಸಿಬ್ಬಂದಿಯಾದ ಶ್ರೀಮತಿ ಸವಿತಾ ಎಮ್ ಸಜ್ಜನ,ಹಾಗೂ ಗ್ರಂಥಪಾಲಕ ಪ್ರವೀಣ ಚಳ್ಳಮರದ, ಹಾಗೂ ಗೃಹರಕ್ಷಕ ಧಳ ಸಿಬ್ಬಂದಿ ಉಪಸ್ಥಿತಿ ಇದ್ದರು.