ಅಮೀನಗಡ : ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಸನ್ಮಾನ ಹಾಗೂ ಅಪ್ರತಿಮ ವೀರಸನ್ಯಾಸಿ ಶ್ರೀ ವಿವೇಕನಂದರ ಜಯಂತಿ ಅಂಗವಾಗಿ ನೂತನ ಪಟ್ಟಣ ಪಂಚಾಯತ ಸದಸ್ಯರಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಂ ಡಿತ್ತು.

ಈ ಸಮಾರಂಭದ ಮುಖ್ಯ ಅಥಿತಿಗಳಾಗಿ ಮಾತನಾಡಿದ ಸಮಾಜ ಸೇವಕ ರಾಜಕೀಯ ಯುವ ನಾಯಕ ಶ್ರೀ ಸಂತೋಷ ಹೊಕ್ರಾಣಿ ಅವರು ಚುನಾವಣೆಯಲ್ಲಿ ಸೋಲು – ಗೆಲುವು ಅನಿವಾರ್ಯ ಎಲ್ಲಾ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿಗಾಗಿ ತಾವು ಕೆಲಸ ಮಾಡಬೇಕು ಇಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ ಎಂದರು, ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯ ಕೋರಿದರು.

ಕಾರ್ಯಕ್ರಮವನ್ನು ಗಣಿ ಉದ್ಯಮಿಗಳಾದ ಶ್ರೀ ರಾಜು ಬೊರಾ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯೆಯಾದ ಶ್ರೀಮತಿ ಸುಜಾತ ಎಸ್ ತತ್ರಾನಿ ಅವರು ಸನ್ಮಾನ ಸ್ವೀಕಾರ ಮಾಡಿ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಇಡಿ ಜಗತ್ತಿಗೆ ಸಾರಿದ ಒಬ್ಬ ಮಹಾನ್ ಸಂತ ಇಂದು ಅವರ ಜಯಂತಿ ಅಂಗವಾಗಿ ನಮಗೆ ಸನ್ಮಾನ ಮಾಡಿದ್ದಕ್ಕಾಗಿ ಈ ಸಂಸ್ಥೆಯ ಬಳಗಕ್ಕೆ ಧನ್ಯಾದ ಹೇಳತಿನಿ ಸೌಮ್ಯ ಸ್ವಭಾವದ ಡಾ: ಪ್ರಶಾಂತ ಅವರು ಇಂತಹ ಶಿಕ್ಷಣ ಸಂಸ್ಥೆ ಬೆಳೆಸುವ ಸಲುವಾಗಿ ಬಹಳ ಕಷ್ಟ ಪಡುತ್ತಿದ್ದಾರೆ.ಅವರ ಈ ಸಾಮಾಜಿಕ ಚಿಂತನೆ ಶ್ಲಾಘನೀಯ, ಭವಿಷ್ಯದಲ್ಲಿ ಇನ್ನೂ ಉತ್ತಮ ಮಟ್ಟಕ್ಕೆ ಶಿಕ್ಷಣ ಸಂಸ್ಥೆ ಬೆಳೆಯಲಿ ಎಂದರು.

ಈ ಸಂಧರ್ಭದಲ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ತುಕಾರಾಮ ಲಮಾಣಿ,ಶ್ರೀಮತಿ ಸುಜಾತ ಎಸ್ ತತ್ರಾನಿ,ಶ್ರೀಮತಿ ಬೇಬಿ ಚವ್ಹಾಣ, ಶ್ರೀಮತಿ ವಿಧ್ಯಾ,ರಾಮು ರಾಮೋಡಗಿ,ಶ್ರೀ ರಮೇಶ ಮುರಾಳ,ಶ್ರೀ ರಾಘವೇಂದ್ರ ಮುಳ್ಳೂರು,ಹಾಗೂ ಪತ್ರಕರ್ತರು ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಯಿತು.ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ನಗರದ ಉಪತಹಶಿಲ್ದಾರ ಎಮ್,ಆರ್, ಹೆಬ್ಬಳಿ ಅವರು ಇಂದು ಒಮೇಕ್ರಾನ್ ಬಹಳ ವೇಗವಾಗಿ ಕರೋನಾ ವೈರಸ್ ಹರಡುತ್ತಿದ್ದು ಮಕ್ಕಳ ಬಗ್ಗೆ ಬಗ್ಗೆ ಹಾಗೂ ತಾವು ಕೂಡ ಹೆಚ್ಚಿನ ನಿಗಾ ವಹಿಸಿ ಉತ್ತಮ ಆರೋಗ್ಯದ ಕಡೆ ಗಮನ ಹರಿಸಬೇಕು, ಹಾಗೆ ಸಾಮಾಜೀಕ ಚಿಂತನೆಯ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಸಂಸ್ಕ್ರತಿ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ವಿಶ್ವಕ್ಕೆ ಸಾರುವ ಮೂಲಕ ಯುವ ಪೀಳಿಗೆಗೆ ಮಹತ್ತರ ಸಂದೇಶ ನೀಡಿದ ವೀರಸನ್ನಯಾಸಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ನಮಗೆ ಪ್ರೇರಣೆ ಎಂದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ/ ಕಾರ್ಯದರ್ಶಿ ಡಾ: ಪ್ರಶಾಂತ ನಾಯಕ,ಅಮರೇಶ ಮಡ್ಡಿಕಟ್ಟಿ,ಶ್ರೀಮತಿ ಡಾ: ಕಾವ್ಯ,ಪ್ರಶಾಂತ ನಾಯಕ,ಶ್ರೀಮತಿ ಮಂಜುಳಾ ವೆಂಕಟೇಶ ಚವ್ಹಾಣ,ಸೈನಿಕರಾದ ಶ್ರೀ ಜೈರಾಮ್ ಲಮಾಣಿ,ಶ್ರೀ ಡಿ,ಬಿ,ವಿಜಯಶಂಕರ್, ಹನಮಂತ ಹಿರೇಮನಿ,ಶ್ರೀಮತಿ ಶಂಕ್ರಮ್ಮ ಬೆನ್ನೂರು ,ಹಾಗೂ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.

