ಭಾರತ ಸೇರಿದಂತೆ ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಗಳಿಗೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಪ್ರಯಾಣ ನಿಷೇಧ ಮತ್ತು ಭಾರಿ ದಂಡ ವಿಧಿಸಿ ಆದೇಶಿಸಿದೆ. “ನಿಷೇಧಿತ ದೇಶಗಳಿಗೆ ಪ್ರಯಾಣಿಸುವುದು ಕೊರೊನಾ ಸಂಬಂಧಿತ ಪ್ರಯಾಣ ನಿರ್ಬಂಧಗಳು ಮತ್ತು ಸೌದಿ ಅರೇಬಿಯಾ ಹೊಸದಾಗಿ ನೀಡಿರುವ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸರ್ಕಾರಿ ಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. …
Read More »