
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಗೆ ಇದೊಂದು ಉದಾಹರಣೆ ಅಷ್ಟೇ ಆಟಕುಂಟು ಲೆಕ್ಕಲಿಲ್ಲದ ಅಭಿವೃದ್ಧಿ ಅಧಿಕಾರಿ ಎಮ್,ಎ ದಖನಿ ಅವರ ಅಸಮರ್ಥ ಆಡಳಿತದಿಂದ ಜನತೆ ಕಂಗಾಲಾಗಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನರು ನಿತ್ಯ ಅನೇಕ ಸಮಸ್ಯೆಗಳನ್ನು ಹೊತ್ತು ಪಂಚಾಯತಿಗೆ ತಿರುಗಾಡಿ ಸುಸ್ತಾಗಿದ್ದಾರೆ. ಬರೀ ಸುಳ್ಳುಗಳ ಸರದಾರ ಎಮ್,ಎ ದಖನಿ ಅವರು ಕಳೆದ ಒಂದು ವರ್ಷದಿಂದ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಗ್ರಾಮದಲ್ಲಿ ಅಭಿವೃದ್ಧಿ ಏನ್ ಮಾಡಿದ್ದಾರೆ. ಎಂಬುದುದನ್ನು ಅವರನ್ನೆ ಕೇಳಬೇಕು. ಪ್ರತಿ ವಾರ್ಡಿನಲ್ಲಿ ಒಂದಲ್ಲ ಎರಡಲ್ಲ ಅನೇಕ ಮೂಲ ಭೂತ ಸಮಸ್ಯೆಗಳು ಕಾಡುತ್ತಿವೆ. ವಾರದಲ್ಲಿ ೨-೩ ದಿನ ಮಾತ್ರ ಹಾಜರಿ ಅದು ಮಧ್ಯಾಹ್ನ ೨ ಗಂಟೆಗೆ ಬಂದು ಸಾರ್ವಜನಿಕರು ಇರದೇ ಸಮಯದಲ್ಲಿ ಬಂದು ಕಳ್ಳರ ತರ ಮತ್ತೆ ಹೋಡಿ ಹೋಗುದು ಈ ೨ರಿಂದ ೩ ಗಂಟೆ ಸಮಯದಲ್ಲಿ ಅವರನ್ನು ಗ್ರಾಮ ಪಂಚಾಯತಿ ಸದಸ್ಯರೆ ಮುತ್ತಿಗೆ ಹಾಕಿ ಅನೇಕ ವಿಷಯ ಚರ್ಚೆ ಮಾಡುವಾಗ ಇನ್ನೂ ಸಾಮಾನ್ಯ ಜನರ ಸಮಸ್ಯೆಗಳನ್ನು ಕೇಳಲು ಇವರಿಗೆ ಸಮಯ ಹೇಗೆ ಸಿಗುತ್ತದೆ.

ಸದರಿ ದಿನಾಂಕ ೧/೦೭/೨೦೧೯ ರಿಂದ ಇಲ್ಲಿಯ ವರೆಗೆ ಆಡಳಿ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸಿದ ಎಮ್,ಎ,ದಖನಿ ಅವರು ಒಂದು ದಿನ ,ಒಂದು ವಾರ ಪೂರ್ತಿ ದಿನ ಯಾವತ್ತು ಈ ಪಂಚಾಯತಿಯಲ್ಲಿ ದಿನವಿಡಿ ಕುಂತು ನೌಕರಿ ಮಾಡಿಲ್ಲ ಈ ಪಂಚಾಯತಿಗೆ ಬರೋದೆ ಒಂದು ವಾರದಲ್ಲಿ ೩ ದಿನ ಅದು ಮಧ್ಯಾಹ್ನ ೨ ರಿಂದ ೪ ಗಂ, ಇದರಲ್ಲಿ ಕೆಲವು ಜನ ಗ್ರಾಮ ಪಂ, ಸದಸ್ಯರು ೩ ಜನ ಇವನಿಗೆ ಬೆಂಬಲ ಇವರಿಗೆ ಮಾತ್ರ ಎಲ್ಲಿದಿನಿ,ಎಷ್ಟೊತ್ತಿಗೆ ಬರತಿನಿ, ಏನೇ ಕೆಲಸ ಇದ್ರು ಪ್ರತ್ಯೇಕ ಜಾಗಕ್ಕೆ ಹೋಗಿ ತಮ್ಮ ತಮ್ಮ ಕೆಲಸ ಮಾಡಿಕೊಂಡು ಬಂದು ಇಲ್ಲಿ ಹೋರೋಗಳ ತರ ಪೋಜ್ ಕೋಡುದು ಇಡೀ ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕಂಕನ ಬದ್ದರಾಗಿ ಕೈ ಜೋಡಿಸಬೇಕಾದ ಕೆಲವರಿಂದ ಇಲ್ಲಿಯೂ ಭಣ ರಾಜಕೀಯ ನಡೆಯಿತ್ತಿದೆ. ಇದರಿಂದ ಪ್ರತಿಶತ ಅಭಿವೃದ್ಧಿ ಕಾಣಬೇಕಾದ ಗ್ರಾಮ ಇಂದು ಹಾಳು ಕೊಂಪೆಯಾಗಿದೆ. ಜನ ನಿತ್ಯ ಉತಾರ,ಮನೆಯ ಖಾತೆ ಬದಾವಣೆ,ರಸ್ತೆ,ಚರಂಡಿ, ನೀರು ,ಅನೇಕ ಸಮಸ್ಯೆಗಳನ್ನು ತಂದು ತಿರುಗಾಡಿದರು. ಅಭಿವೃದ್ಧಿ ಅಧಿಕಾರಿ ದಖನಿ ಅವರು ಜನರ ಕೈಗೆ ಸಿಗುತ್ತಿಲ್ಲ. ಸಿಕ್ಕರು ಸಾಮಾನ್ಯ ಜನರ ಹತ್ತಿರ ಮಾತನಾಡಲು ಇವರಿಗೆ ಸಮಯ ಇಲ್ಲ.

ವಾರ್ಡ ಬರ್ ೪ ರ ಗ್ರಾಮ ಪಂಚಾಯತಿ ಸದಸ್ಯರಾದ ಜಹಾಂಗೀರ್ ಮುಲ್ಲಾ ಅವರು ಈ ಶಾದಿಮಹಲ್ ರಸ್ತೆ ಬಗ್ಗೆ ಕೇಳಿದಾಗ ಕೆಲಸ ಮಾಡುವಾಗ ಉದ್ದೇಶ ಪೂರ್ವಕವಾಗಿ ನೀರು ಹಾಯಿಸಿದರು. ಅದು ಅಲ್ಲದೆ JJM ಕಾಮಗಾರಿ ಸಲುವಾಗಿ ರಸ್ತೆ ತೆಗೆಯಲಾಗಿತ್ತು ಒಂದು ವರ್ಷದಿಂದ ಶಾದಿಮಹಲ್ ರಸ್ತೆಯನ್ನು ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ರಸ್ತೆಯನ್ನು ಅಗೆದು ಮತ್ತೆ ಅದನ್ನು ಸರಿಯಾಗಿ ನಿರ್ವಹಣೆ ಮಾಡದೇ ಅತಾಂತ್ರಿಕ ಮಾಹಿತಿಯಿಂದ ರಸ್ತೆ ಹಾಳಾಗಿ ನೀರು ನಿಂತು ಸಾರ್ವಜನಿಕರಿಗೆ ಇಲ್ಲಿ ಸಂಚರಿಸಲು ನರಕ ಯಾತನೆ ಪಡುವಂತಾಗಿದೆ. ಈ ಬಗ್ಗೆ ಬೇಜವಾಬ್ದಾರಿ ತನದಿಂದ ಕಾಮಗಾರಿ ಮಾಡಿ ಒಂದು ವರ್ಷದಿಂದ ಇಲ್ಲಿನ ಜನರಿಗೆ ಯಾವ ತೊಂದರೆ ಯಾಗಿದೆ ಎಂದು ಇತ್ತ ಸುಳಿಯದ ಗ್ರಾಮ ಪಂಚಾಯತಿ ಸದಸ್ಯೆ ಹನಮಂತ ಮಿಣಜಗಿ ಹಾಗೂ ಮುಸ್ತಫಾ ಅವರು ಇತ್ತ ಸಕಾಲಕ್ಕೆ ಜನರ ಸಮಸ್ಯೆಗಳನ್ನು ಆಲಿಸದೇ ಕಾಟಾಚಾರದ ನಡೆ ಅನುಸರಿಸುತ್ತಿದ್ದಾರೆ.

ಈ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರಾದ ಜಹಾಂಗೀರ್ ಮುಲ್ಲಾ ಅವರು ಶಾದಿ ಮಹಲ್ ರಸ್ತೆ ಕಾಮಗಾರಿ ಮಾಡಿದ್ದು ೯ ನೇ ವಾರ್ಡಿನ ಸದಸ್ಯರಾದ ಹನಮಂತ ಮಿಣಜಗಿ,ಹಾಗೂ ಮುಸ್ತಫಾ ಅವರು ಅವರಿಗೆ ಸುಮಾರು ಸಲ ಇಲ್ಲಿನ ಅನಾನುಕೂಲತೆ ಬಗ್ಗೆ ಮನವರಿಗೆ ಮಾಡಿ ಕೊಟ್ಟರೂ ಪ್ರಯೋಜನ ಆಗಿಲ್ಲ ಒಂದು ವರ್ಷದಿಂದ ಈ ಸಮಸ್ಯೆ ಇದೆ ಎರಡು ಬದಿ ಚರಂಡಿ ಮಾಡಲು ತಿರ್ಮಾಣ

ಮಾಡಿದ್ದೇನೆ,ಜನ ಸಹಕಾರ ನೀಡಬೇಕು ಅದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು. ಇದರಿಂದ ೪ ನೇ ವಾರ್ಡಿನ ಜನತೆ ರೊಚ್ಚಿಗೆದ್ದು ರಸ್ತೆ ಗಿಳಿದು ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸುವ ಮುನ್ನ ಇತ್ತ ಗಮನ ಹರಿಸಿ ಒಂದೆರಡು ದಿನದಲ್ಲಿ ಈ ರಸ್ತೆಯನ್ನು ಸರಿ ಪಡಿಸದಿದ್ದರೆ ನೇರವಾಗಿ ಮೇಲಾಧಿಕಾರಿಗಳಿಗೆ ಇಲ್ಲಿನ ಅವ್ಯವಸ್ಥಿತ ಬಗ್ಗೆ ತಿಳಿಸಿ ಕ್ರಮ ಕೈಗೊಳ್ಳುವರೆಗೂ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶಂಕರ್ ಭಜಂತ್ರಿ ,ನಾರಾಯಣ ಭಜಂತ್ರಿ ಷಣ್ಮುಕಪ್ಪ ಹುಲ್ಯಾಳ ,ಖಾಜಾಸಾಬ ಉಂಡು,ಇಬ್ರಾಹಿಂ ಉಂಡು,ಇಸ್ಮಾಲಸಾಬ ತಂಗಡಗಿ, ಮಲ್ಲಪ್ಪ ಘಂಟಿ,ಮೈನುದಿನ್ ಮಾಗಿ, ಮಕ್ತುಮ್ ಅತ್ತಾರ,ಕೃಷ್ಣಾ ಗಾಡದ,ಲಕ್ಷ್ಮಣ್ಣ ಭಜಂತ್ರಿ ,ವಿಠ್ಠಪ್ಪ ಮಡಿವಾಳರ,ಜನಾಬ್ ಅರೆಬಿ ಸರ್ ಅನೇಕರು ಆಗ್ರಹಿಸಿದ್ದಾರೆ.