
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು ನಿತ್ಯ ಮತದಾರರಿಗೆ ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ,ಇದರ ಬೆನ್ನಲ್ಲಿ ನಗರದ ಶ್ರೀ ಶಾಂತಾದೇವಿ ಶಿಕ್ಣಣ ಸಂಸ್ಥೆಯ ಸಂಸ್ಥಾಪಕರು/ ಕಾರ್ಯದರ್ಶಿಗಳು ಆದ ಡಾ: ಪ್ರಶಾಂತ ನಾಯಕ ಅವರು ನಗರದ ಪ್ರತಿ ವಾರ್ಡನಲ್ಲಿ ಸಂಚಾರ ಮಾಡಿ ಸಾರ್ವಜನಿಕವಾಗಿ ಧ್ವನಿವರ್ಧಕ ಮೂಲಕ ಮತದಾನ ಜಾಗೃತಿ ಮಾಡಿದರು.

ಈ ಸಮಾಜದ ಭದ್ರ ಬುನಾದಿಯನ್ನು ಒಬ್ಬ ಬಲಿಷ್ಠ ಸಾಮಾಜಿಕ,ಜನ ಚಿಂತನೆ ಇರುವ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿ ಮತದಾರರು ಮತ ಚಲಾಯಿಸ ಬೇಕು,ಚುನಾವಣಾ ಕನದಲ್ಲಿರುವ ಅಭ್ಯರ್ಥಿಗಳು ಕೊಡುವ ಲಂಚ ಹಾಗೂ ಹೆಂಡ,ಕಂಡಕ್ಕಾಗಿ ಭ್ರಷ್ಟರಿಗೆ ಮತ ಚಲಾಯಿಸಬೇಡಿ,ಮತದಾನ ಪ್ರತಿಯೊಬ್ಬರ ಹಕ್ಕು ಅದನ ವ್ಯರ್ಥ ಮಾಡದೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ನಗರದ ಮುಖ್ಯ ಬಿದಿಗಳಲಿ ಪ್ರಚಾರ ಮಾಡುತ್ತಾ ಮತದಾನ ಕುರಿತು ಜಾಗೃತಿ ಮುಡಿಸಿದರು.