
ಜೀವನದಲಿ ಕೆಲವು ವ್ಯಕ್ತಿಗಳು ಆಕಸ್ಮಿಕವಾಗಿ ಪರಿಚಯವಾಗಿ ಆ ಪರಿಚಯ ಎಂದು ಮರೆಯದ ಸ್ನೇಹವಾಗಿ ನಿತ್ಯ ಹಲವಾರು ವಿಷಯಗಳನ್ನು ನಮ್ಮೊಂದಿಗೆ ಸೇರ್ ಮಾಡುತ್ತಾ ಸುಖ,ದುಃಖ ,ಹಂಚಿಕೊಳ್ಳಲು ನಮ್ಮ ಇನ್ನೊಂದು ಜೀವ ಅಂದ್ರೆ ಅದೇ ಸ್ನೇಹ ಅಂತಹ ಒಬ್ಬ ನಮ್ಮ ಆತ್ಮೀಯ ನಮ್ಮ ಸ್ನೇಹಿತ ಇಂದು ಮಧ್ಯಾಹ್ನ ೨:೩೦, ಸುಮಾರಿಗೆ ಹೃದಯಾಘಾತದಿಂದ ಕಾಲವಾಗಿದ್ದು ನಮ್ಮ ಸ್ನೇಹಿತ ವೃಂದದಲ್ಲಿ ಹಾಗೂ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ,ಕಳೆದ ಆರು ವರ್ಷಗಳಿಂದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪೆದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಠಾಣೆಯ ಎಲ್ಲಾ ಸಿಬ್ಬಂದಿಯೊಂದಿಗೆ ಅಚ್ಚು,ಮೆಚ್ಚನ ಬಾಂಧವ್ಯ ಇಟ್ಟುಕೊಂಡು ಎಲ್ಲರೊಂದಿಗೆ ತುಂಬಾ ಆತ್ಮಿಯ ಗೆಳೆಯನಾಗಿ ಗುರುತಿಕೊಂಡ ಚಂದ್ರಕಾಂತ ಅವರ ಅಕಾಲಿಕ ಮರಣ ತುಂಬಾ ನಷ್ಟಮಾಡಿದೆ, ಎರಡು ಪುಟ್ಟ ಗಂಡು ಮಕ್ಕಳು,ಧರ್ಮ ಪತ್ನಿ,ಅಣ್ಣ,ತಂದೆ,ತಾಯಿ ,ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ .ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ನಾವು ಹಾರೈಸುತ್ತೇವೆ.
ಹುನಗುಂದ ತಾಲೂಕಿನ ಗೋರೆಬಾಳ ಗ್ರಾಮದ ಸಿದ್ದನಗೌಡ ಅವರ ಎರಡನೆ ಸುಪುತ್ರ ಚಂದ್ರಕಾಂತ ಇವರು ಠಾಣೆಯಲ್ಲಿ ಕರ್ತವ್ಯ ನೀರತರಲ್ಲಿರುವಾಗ ನೋವು ಕಾಣಿಸಿಕೊಂಡು ಆಸ್ಪತ್ರೆ ತಲುಪಿಸುವಷ್ಟ ರಲ್ಲಿ ಮರಣ ಹೊಂದಿದ್ದಾರೆ ಆದರೆ ಇಲ್ಲಿ ಒಂದು ನೋವಿನ ವಿಚಾರ ಎಂದರೆ ಅಮೀನಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ೪:೩೦, ರ ಸುಮಾರಿಗೆ ಹುನಗುಂದ ದಿಂದ ನಮ್ಮ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲೋಕೇಶ್ ಜಗಲಾಸಾರ ಹಾಗೂ ಡಿ,ಎಸ್,ಪಿ ನಂದರೆಡ್ಡಿ ಸಾಹೇಬರು ಆಸ್ಪತ್ರೆಯ ಮುಂದೆ ಹಾದು ಹೋದರು ಸಹ ಸೌಜನ್ಯಕ್ಕಾದರು ಬಂದು ಶವ ನೋಡಿ ಅವರ ಕುಟುಂಬದವರಿಗೆ ಧೈರ್ಯ ತುಂಬವ ಕೆಲಸ ಮಾಡಲಿಲ್ಲ ಅಲ್ಲಿದ್ದ ಪ್ರತಿಯೊಬ್ಬ ನಾಗರಿಕರು ಹಿರಿಯ ಅಧಿಕಾರಿಗಳ ಈ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು, ಇನ್ನಾದರು ಹಿರಿಯ ಅಧಿಕಾರಿಗಳು ಕನಿಷ್ಟಪಕ್ಷ ಮಾನವೀಯತೆ ಬಗ್ಗೆ ಅನುಕಂಪ ಇರಲ್ಲಿ ಎಂದು ನಮ್ಮ ಆಶಯ, ದಿವಂಗತ ಚಂದ್ರಕಾಂತ ಅವರು ಜಮಖಂಡಿ ತಾಲ್ಲೂಕಿನಲ್ಲಿ ನಗರ ಠಾಣೆಯಲ್ಲಿ ಐದು ವರ್ಷ ಸೇವೆ ಮಾಡಿ ಅಮೀನಗಡ ಠಾಣೆಯಲ್ಲಿ ಕಳೆದ ೬ ವರ್ಷಗಳಿಂದ ಸೇವೆ ಮಾಡುತ್ತಿದ್ದರು, ಇಂತಹ ಒಬ್ಬ ಸ್ನೇಹ ಜೀವಿ, ಸಂಘ ಜೀವಿ, ಶಾಂತ ಸ್ವಭಾವದ ನಮ್ಮ ಚಂದ್ರಕಾಂತ ಅವರು ಯಾವತ್ತು ಅಮರ ಅವರ ಕರ್ತವ್ಯ ಪಾಲನೆ,ನಿಷ್ಟೆ, ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು, ಅಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿ ,ಗೆಳೆಯ ಇನ್ನಿಲ್ಲ ಎಂದು ಹೇಳೊಕೆ ನಮಗೂ ತುಂಬಾ ನೋವಾಗಿದೆ ಹುಟ್ಟು ಅನಿವಾರ್ಯ ಸಾವು ,ಖಚಿತ . ಅದು ಯಾರನ್ನೂ ಬಿಟ್ಟಿಲ್ಲ ಆ ಭಗವಂತ ಅವನ ಆತ್ಮಕ್ಕೆ ಶಾಂತಿ ನೀಡಲಿ ಅಷ್ಟೇ ಅವರ ಕುಟುಂಬಕ್ಕೆ ಸರಕಾರದ ಸೌಲಭ್ಯಗಳು ಆದಷ್ಟು ಬೇಗ ಸಿಗಲಿ ಎಂದು ನಮ್ಮ ಗೆಳೆಯರ ಬಳಗದಿಂದ ವಿನಂತಿ.