Breaking News

ಕರೋನ ಸುದ್ದಿ

ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆ !

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ವಿಶಾಖಪಟ್ಟಣ, ಮೇ 4: ದೇಶದಲ್ಲಿ ಕೊರೊನಾ ಎರಡನೇ ಅಲೆ ಸದ್ದು ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ಹೊಸ ರೀತಿಯ ವೈರಸನ್ನು ಜೀವ ಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಇದಕ್ಕೆ ಆಂಧ್ರಪ್ರದೇಶ ರೂಪಾಂತರಿ ಎಂದಿದ್ದಾರೆ. ಕಳೆದ ಬಾರಿಯ ಕೊರೊನಾ ವೈರಸ್ ಗಿಂತ ಈಗಿನ …

Read More »

ರಾಜ್ಯದಲ್ಲಿ ದಾಖಲೆಯ ಕೊರೊನಾ ಅಟ್ಟಹಾಸ; 48,296 ಹೊಸ ಪ್ರಕರಣ, 217 ಮಂದಿ ಸಾವು

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 48,296 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 15,23,142ಕ್ಕೆ ಏರಿದ್ದು, 3,82,690 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು, 30: ಸೋಂಕು ದೃಢಪಡುತ್ತಿರುವ ಶೇಕಡವಾರು ಪ್ರಮಾಣ ಶೇ 25ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 217 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇಂದಿನವರೆಗೆ ಮೃತರ ಒಟ್ಟು ಸಂಖ್ಯೆ 15,523ಕ್ಕೆ ಜಿಗಿದಿದೆ. ಬೆಂಗಳೂರು ಒಂದರಲ್ಲೇ 26,756 ಹೊಸ ಪ್ರಕರಣ ಪತ್ತೆಯಾಗಿವೆ. ಒಂದೇ ದಿನ ನಗರದಲ್ಲಿ 93 ಮಂದಿ ಕೋವಿಡ್‌ನಿಂದ …

Read More »

ಭಾರತದ ಮುಸ್ಲಿಂ ಸಮುದಾಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ: ಅಝೀಝ್ ದಾರಿಮಿ

ಜಗತ್ತಿನ ಎಲ್ಲೂ ಇಲ್ಲ ದಂತಹ ಕೊರೊನ ತ್ರಿವಳಿ ಅಲೆ ಭಾರತದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ.ಬ್ರಿಟನ್ ಈಗ ತಾನೇ ಭಾರತವನ್ನು ರೆಡ್ ಝೂನ್ ಪಟ್ಟಿಗೆ ಸೇರಿಸಿದೆ. ಭಾರತೀಯರಂತೂ ಕಂಗಾಲಾಗಿ ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ. ಭಾರತವು ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ತೋರಿತೋ ಎಂದು ಅನಿಸುತ್ತಿದೆ. ಎರಡನೆಯ ಅಲೆಗೆ ಮೊದಲು ಬೇಕಾದ ಸಿದ್ಧತೆ ನಡೆಸುವ ಅವಕಾಶ ಧಾರಾಳವಿತ್ತು. ಅದೇನೆ ಇದ್ದರೂ ಈಗ ಪರಿಭ್ರಮಿಸಿ ಪ್ರಯೋಜನ ಇಲ್ಲ. ಕಳೆದ ಸಲದಂತೆ ತಬ್ಲೀಗಿ ವೈರಸ್ ಯಾರನ್ನೂ ಕಾಡಲಿಲ್ಲ. …

Read More »

ಕೋವ್ಯಾಕ್ಸಿನ್ ಲಸಿಕೆಗೆ ದರ ನಿಗಧಿ: ರಾಜ್ಯ ಸರ್ಕಾರಗಳಿಗೆ 600 ರೂ., ಖಾಸಗಿ ಆಸ್ಪತ್ರೆಗಳಿಗೆ 1,200 ರೂ.

ಶನಿವಾರ ಪ್ರಕಟಣೆ ಹೊರಡಿಸಿರುವ ಭಾರತ್ ಬಯೋಟೆಕ್ ಕಂಪನಿ ತನ್ನ ಕೋವ್ಯಾಕ್ಸಿನ್ ಲಸಿಕೆಗೆ ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರಗಳಿಗೆ ಡೋಸ್ ಒಂದಕ್ಕೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸ್ ಒಂದಕ್ಕೆ 1,200 ರೂ. ದರ ನಿಗದಿ ಮಾಡಿದೆ. ರಫ್ತು ಮಾಡುವ ಲಸಿಕೆಗೆ 15 ರಿಂದ 20 ಡಾಲರ್ ದರ ನಿಗದಿ ಮಾಡಲಾಗಿದೆ. ದೇಶದ ಇನ್ನೊಂದು ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ದರವನ್ನು …

Read More »

ಜಿಲ್ಲಾ/ತಾಲ್ಲೂಕು ಕೇಂದ್ರಗಳಲ್ಲಿ ಬೆಡ್‌ ಸಮಸ್ಯೆ: ಆಸ್ಪತ್ರೆ ಮುಂದೆ ಕಣ್ಣೀರಿಡುತ್ತಿರುವ ಸೋಂಕಿತರು

ಕೋವಿಡ್ ಎರಡನೆ ಅಲೆ ಉಲ್ಬಣಕ್ಕೆ ರಾಜ್ಯದ ಆರೋಗ್ಯ ಮೂಲಸೌಕರ್ಯಗಳು ತತ್ತರಿಸಿ ಹೋಗುತ್ತಿವೆ. ಬೀದರ್‌ನಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಹತ್ತಾರು ರೋಗಿಗಳು ಮಲಗಿದ್ದರೆ, ಯಾದಗರಿಯಲ್ಲಿ ವ್ಯಕ್ತಿಯೊಬ್ಬರು ಏಪ್ರಿಲ್ 23 ರಂದು ಆಸ್ಪತ್ರೆಯ ಹಾಸಿಗೆಗಾಗಿ ಅಳುವುದು ಕಂಡುಬಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಇದು ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿನ ಕಳಪೆ ವೈದ್ಯಕೀಯ ಸೌಲಭ್ಯವನ್ನ ಸೂಚಿಸುತ್ತದೆ. ಡಿ ಭೀಮೇಶ್ ಎಂಬ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ …

Read More »

ಕೋವಿಡ್ ನಿಂದ ಮೃತಪಟ್ಟ ಹಿಂದೂ ವ್ಯಾಕ್ತಿಯ ಅಂತ್ಯಸಂಸ್ಕಾರ ಮಾಡಿ ಮಾದರಿಯಾದ ಮುಸ್ಲಿಂ ಸಹೋದರರು.!

ಒಂದು ಕಡೆ ಕೆಲವರು ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಆದರೆ ತೆಲಂಗಾಣದಲ್ಲಿ ಮಾನವೀಯತೆಯು ಇನ್ನೂ ಜೀವಂತವಾಗಿದೆ ಅನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದೆ. ಕೋವಿಡ್ ನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಸಹೋದರರು ನಡೆಸಿಕೊಟ್ಟಿರುವ ಘಟನೆ ತೆಲಂಗಾಣದ ಪೆಡ್ಡಾ ಕೊಡಪಾಗಲ್ ಮಂಡಲದ ಕೇಟೆಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ. ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯನ್ನು ಮೊಘುಲಿಯಾ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಆನಂತರ …

Read More »

ಛತ್ತೀಸ್‌ಗಢ: ಸರ್ಕಾರಿ ಆಸ್ಪತ್ರೆ ಹೊರಗಡೆ ಕೊರೊನಾ ಸೋಂಕಿತರ ಮೃತದೇಹಗಳ ರಾಶಿ

ರಾಯ್‌ಪುರದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಶವಾಗಾರದಲ್ಲಿ ಇಡಲು ಸಾಧ್ಯವಾಗದೆ, ಆಸ್ಪತ್ರೆಯ ಹೊರಗಡೆ ಬಿಸಿಲಿನಲ್ಲಿ ಸ್ಟ್ರೆಚರ್ ಮೇಲೆ ಮಲಗಿಸಿರುವ ಚಿತ್ರಗಳನ್ನು ಎನ್‌ಡಿಟಿವಿ ವರದಿ ಮಾಡಿದೆ. ಛತ್ತೀಸ್‌ಗಢ ಕೊರೊನಾ ಎರಡನೇ ಅಲೆಗೆ ತತ್ತರಿಸಿದೆ. ಕೊರೊನಾ ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ದೇಶದ 10 ರಾಜ್ಯಗಳಲ್ಲಿ ಛತ್ತೀಸ್‌ಗಢ ಕೂಡ ಒಂದು. ಹೆಚ್ಚು ಪ್ರಕರಣಗಳನ್ನು ದಾಖಲಿಸಿರುವ ರಾಯ್‌ಪುರ ಮತ್ತು ದುರ್ಗ್ ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್ ಹಂತದಲ್ಲಿವೆ. ಕೊರೊನಾ ಉಲ್ಬಣದಿಂದ ಮರಣ ಪ್ರಮಾಣ …

Read More »

ವಾಹನಗಳಲ್ಲಿ ಏಕಾಂಗಿ ಇದ್ದು ಓಡಾಡುವವರೂ ಮಾಸ್ಕ್‌ ಕಡ್ಡಾಯ – ದೆಹಲಿ ಹೈಕೋರ್ಟ್ ಸ್ಪಷ್ಟನೆ

ಸಾರ್ವಜನಿಕ ಸ್ಥಳಗಳಲ್ಲಿ ಏಕಾಂಗಿಯಾಗಿ ವಾಹನಗಳಲ್ಲಿ ಓಡಾಡುವವರು ಕೂಡಾ ಕೊರೊನಾ ನಿಯಮಗಳನ್ನು ಪಾಲಿಸಿ ಮಾಸ್ಕ್ ಧರಿಸಬೇಕು ಎಂದು ದೆಹಲಿ ಹೈಕೋಟ್ ಬುಧವಾರ ಹೇಳಿದೆ. ಏಕಾಂಗಿಯಾಗಿ ವಾಹನ ಚಲಾಯಿಸುತ್ತಿರುವಾಗ ಮಾಸ್ಕ್‌ ಧರಿಸದಿದ್ದಕ್ಕಾಗಿ ದಂಡ ಹಾಕಿದ್ದನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಪ್ರತಿಭಾ ಎಂ. ಸಿಂಗ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ನೀವು ಕಾರಿನಲ್ಲಿ ಏಕಾಂಗಿಯಾಗಿದ್ದರೂ, ಮಾಸ್ಕ್‌ ಧರಿಸಲು ಏಕೆ ಆಕ್ಷೇಪಿಸುತ್ತೀರಿ? ಇದು ನಿಮ್ಮ ಸ್ವಂತ ಸುರಕ್ಷತೆಗಾಗಿ. ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚಾಗಿದೆ. ಒಬ್ಬ ವ್ಯಕ್ತಿಗೆ …

Read More »

ಕೊರೊನಾ ಎರಡನೇ ಅಲೆ; ಸಿದ್ಧವಾಗಿದೆಯೇ ಕರ್ನಾಟಕ?: ಡಾ. ಅಖಿಲಾ

ಕರ್ನಾಟಕ, ಅದರಲ್ಲೂ ಬೆಂಗಳೂರಿನಲ್ಲಿ ಕೋವಿಡ್-19ನ ಎರಡನೇ ಅಲೆ ಶುರುವಾಗಿರುವುದು ಖಚಿತವಾಗುತ್ತಿದೆ. ನಾಲ್ಕು ತಿಂಗಳ ಹಿಂದೆಯೇ ಕರ್ನಾಟಕ ಜನಾರೋಗ್ಯ ಚಳವಳಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಡಾ. ಹಿಮಾಂಶು ಅವರು ಎರಡನೇ ಅಲೆಯ ಬಗ್ಗೆ ಹೇಳುತ್ತ ಸರಕಾರವು ತನ್ನ ಟೆಸ್ಟ್-ಟ್ರೇಸ್-ಟ್ರೀಟ್ ಸ್ಟ್ರಾಟಜಿಯನ್ನು ತೀವ್ರಗೊಳಿಸಬೇಕಾಗಿದೆ ಹಾಗೂ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದಿದ್ದರು. ಆದರೆ ಎರಡನೇ ಅಲೆಯ ಪ್ರಾರಂಭ ಈ ಎರಡರಲ್ಲೂ ವಿಫಲವಾಗಿರುವುದನ್ನು ಸೂಚಿಸುತ್ತದೆ. ಮಾರ್ಚ್ ಪ್ರಾರಂಭದಲ್ಲಿ ಕೊರೊನಾ ಪ್ರಕರಣಗಳು ದೇಶದ ಹಲವೆಡೆ ಹೆಚ್ಚಳವಾದವು. ಇದು ಮೊದಲ …

Read More »

6.24 ಕೋಟಿ ಕೋವಿಡ್-19 ಲಸಿಕೆ ನೀಡಿಕೆ ಪೂರ್ಣಗೊಳಿಸಿದ ಭಾರತ

ನವದೆಹಲಿ: ದೇಶಾದ್ಯಂತ ಈ ವರೆಗೂ 6.24 ಕೋಟಿ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ. ಮಾ,30 ರಂದು 12.94 ಲಕ್ಷ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದ್ದು ಒಟ್ಟಾರೆ ಸಂಖ್ಯೆ 6.24 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮೊದಲ ಡೋಸ್ ನ್ನು ತೆಗೆದುಕೊಂಡಿರುವ 82,00,007 ಆರೋಗ್ಯ ಕಾರ್ಯಕರ್ತರು, ಎರಡೂ ಡೋಸ್ ಗಳನ್ನು ತೆಗೆದುಕೊಂಡಿರುವ 52,07,368 ಹೆಚ್ ಸಿಡಬ್ಬುಗಳೂ ಈ ಪೈಕಿ ಸೇರಿದ್ದಾರೆ ಎಂದು ಅಂಕಿ ಅಂಶಗಳ ಮೂಲಕ ತಿಳಿದುಬಂದಿದೆ. ಭಾರತದಲ್ಲಿ …

Read More »