Breaking News

ನಗರದ ಪಟ್ಟಣ ಪಂಚಾಯ ತ,ಚುನಾವಣಾ ಕಣದಲ್ಲಿ ದಿಟ್ಟ ಮಹಿಳೆ ‌ಬಂಜಾರ ಹುಲಿ ಶ್ರೀಮತಿ ರೇಣುಕಾ ರಾಠೋಟ

ಶ್ರೀಮತಿ ರೇಣುಕಾ ಪಾಂ, ರಾಠೋಡ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವ ಣಾ ಕಣದಲ್ಲಿ ವಾರ್ಡ್ ನಂ,೧೨ ರಿಂದ ಸ್ಪರ್ಧೆ ಮಾಡಿದ್ದು ತಮ್ಮ ಅಮೂಲ್ಯವಾದ ಮತವನ್ನು ಈ “ಬಂಜಾರ ಹುಲಿ, ಶ್ರೀಮತಿ ರೇಣುಕಾ ರಾಠೋಡ ಅವರಿಗೆ ಮತ ನೀಡಿ ಆರಿಸಿ ತಂದು ಭಾರತೀಯ ಜನತಾ ಪಾರ್ಟಿಯ ಪಕ್ಷದ ಬಲವರ್ಧನೆ ಮಾಡಿ ನಗರದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿ ಸಬೇಕೆಂದು ಶಾಸಕ ಶ್ರೀ ವೀರಣ್ಣ ಚರಂತಿ ಮಠ, ಅವರು ಮತ ಯಾಚಿಸಿದರು.

ಭಾರತೀಯ ಜನತಾ ಪಕ್ಷದ ಪರವಾಗಿ ಅಮೀನಗಡ ನಗರದ ಎಲ್ಲಾ ಪಕ್ಷದ ೧೬ ಅಭ್ಯರ್ಥಿಗಳು ಕಣದಲ್ಲಿ ಇದ್ದು ಎಲ್ಲರನ್ನು ಪ್ರಚಂಡ ಬಹುಮತದಿಂದ ಆರಿಸಿ ತನ್ನಿ ಎಂದು ಶಾಸಕ ವೀರಣ್ಣ ಚರಂತಿಮಠ & ಸಂಸದ ಪಿ,ಸಿ ಗದ್ದಿಗೌಡರ ಮತ ಯಾಚಿಸಿದರು

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ನಾನು ಶ್ರೀಮತಿ ರೇಣುಕಾ ಪಾಂಡುರಂಗ ರಾಠೋಡ ಅವರು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ,ಪಕ್ಷದ ಅಭ್ಯರ್ಥಿಯಾಗಿ ವಾರ್ಡ ನಂಬರ ೧೨ ರ ಕಣದಲ್ಲಿ ಇದ್ದಾರೆ. ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಈ ಸಮಾಜಕ್ಕೆ ಬೆಳಕು ಚಲ್ಲುವಂತ ಹಲವಾರು ಜನಪರ ವಿಶೇಷ ಕಾರ್ಯಕ್ರಮಗಳ ಮೂಲಕ ಬಡವರಿಗೆ ನೇರವಾದವರು.

ಪಕ್ಷದ ನಡೆಗೆ ಬೇಸತ್ತು ಕಾಂಗ್ರೇಸ್ ತೋರೆದು ಈಗ BJP ಯಿಂದ ಅಮೀನಗಡದ ಪಟ್ಟಣ ಪಂಚಾಯತ ಚುನಾವಣೆ ಗೆಲುವಿನ ಉತ್ಸಾಹದ ಮೂಲಕ ಜನ‌ಸೇವೆ ಮಾಡಲು ನಿಂತಿದ್ದಾರೆ, “ಬಂಜಾರ ಹುಲಿ, ಎಂದೆ ಕರೆಯಿಸಿಕೊಂಡ ಇವರ ಪ್ರಣಾಳಿಕೆ ನೋಡಿದ ಯುವ ಸಮೂಹ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ,ನನ್ನ ಈ ಚುನಾವಣೆಯಲ್ಲಿ ಆರಿಸಿ ತಂದೆರೆ ಮೊದಲು ಅಮೀನಗಡ ನಗರದ ಸಮಗ್ರ ನೇಕಾರರಿಗೆ ರೀ ಸರ್ವೆ ಮಾಡಿಸಿ ನೇಕಾರರ ಕಾರ್ಡ ವಿತರಣೆ, ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಕಾರ್ಡ ಯೋಜನೆಯ ಅಡಿ ೫ ಲಕ್ಷದ ವರೆಗೆ ಸಾಲ ಸಬ್ಸಿಡಿ, ಯುವಕರಿಗೆ ೧ ಕೋಟಿ ವರೆಗೂ ನೋ ಸೂರೀಟಿ ಇಲ್ಲದೆ ಸ್ವಂತ ಉದೋಗ ಮಾಡಲು ಸಾಲ, ವಯೋ ವೃದ್ದರಿಗೆ ಉಚಿತ ಮಾಶಾಸನ, ಬಡವರಿಗೆ ವಿವಿಧ ಯೋಜನೆ ಅಡಿ ವಸತಿಗಳ ಸೌಲಭ್ಯ ಹೀಗೆ ಸಾಲು ಸಾಲು ಅಭಿವೃದ್ಧಿ ಪರ ಪ್ರಣಾಳಿಕೆಯನ್ನು ಮನೆ ಮನೆಗೂ ತಲುಪಿಸಿ ಮತ ಯಾಚನೆ ಮಾಡಿದರು,

ಪಕ್ಷಾತೀತವಾಗಿ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ ಸ್ವತಹ ಸಂಸದ ಶ್ರೀ ಪಿ,ಸಿ ಗದ್ದೆಗೌಡರು ಶಾಸಕ ಶ್ರೀ ವೀರಣ್ಣ ಚರಂತಿಮಠ ಅವರು ಪ್ರಚಾರದಲ್ಲಿ ತೋಡಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತ ಯಾಚಿಸಿದರು. ನಮ್ಮ ಪಕ್ಷಕ್ಕೆ ದಲಿತ ಮಹಿಳೆ “ಬಂಜಾರ ಹುಲಿ ಶ್ರೀಮತಿ ರೇಣುಕಾ ರಾಠೋಡ ಅವರು ಬಂದಿದ್ದು ಸ್ವಾಗರ್ತ ಅವರ ಸಾಮಾಜಿಕ ಸೇವೆ ಹಾಗೂ ಬಡವರ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ, ಶ್ರೀಮತಿ ರೇಣುಕಾ ರಾಠೋಡ ಅವರಂತಹ ನಿಷ್ಟಾವಂತ ಕಾರ್ಯಕರ್ತರು ಈ ಸಮಾಜಕ್ಕೆ ಅವಶ್ಯಕ ಅವರು ಜನಸೇವೆ ಮಾಡುತ್ತಾ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡ ವರು,

ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀಮತಿ ರೇಣುಕಾ ರಾಠೋಡ ಅವರನ್ನು ಇಂದು ವಾರ್ಡ ನಂಬರ್ ೧೨ರಲ್ಲಿ BJP ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದ ಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀ ತವಾಗಿ,ಜಾತ್ಯಾತೀತವಾಗಿ ಇವರನ್ನು ತಾವೇ ಗುರುತಿಸಿ BJP ಗುರುತಿನ ಕಮಲಕ್ಕೆ ಮತ ನೀಡಬೇಕೆಂದು ವಿನಂತಿಸಿದರು. ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಪಕ್ಷದ ಅಭ್ಯರ್ಥಿಯಾಗಳಿಗೆ ಆರ್ಶಿವದಿಸಬೇಕೆಂದು ವಿನಂತಿಸಿದರು.ಇಂತಹ ಸಮಾಜಿಕ ಚಿಂತನೆಯುಳ್ಳ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೀಮತಿ ರೇಣುಕಾ ರಾಠೋಡ ಅವರಂತಹ ದಿಟ್ಟ ಮಹಿಳಾ ಹೋರಾಟಗಾರರು ಅವಶ್ಯಕತೆ ಇದೆ.

ಇಂತಹ ಅವಕಾಶವನ್ನು ಮಾನ್ಯ ಶಾಸಕರು ನೀಡಿದ್ದಾರೆ, ಇವರನ್ನು ಗೆಲವು ಸಾಧಿಸಿದ್ದೆ ಆದರೆ ನಮ್ಮ ವಿಶೇಷ ಅನುದಾನದ ಮೂಲಕ ಕೆಲಸ ನೀಡಿ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದರು ,ಮತದಾರರು ಈ ಚುನಾವಣೆ ಯಲ್ಲಿ ನನಗೆ ಆರ್ಶಿವಾದ ಮಾಡಬೇಕೆಂದು ವಿನಂತಿಸುತ್ತೇನೆ,ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಹೇಳಿದರು.

ನಿಮ್ಮ ಮತವನ್ನು ಬಿಜೆಪಿ ಪಕ್ಷದ ಈ ಕಮಲದ ಚಿನ್ನೆಗೆ ನಿಮ್ಮ ಮತ ನೀಡಿ ಆರಿಸಿ ತನ್ನಿ

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.