
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮದ ಮಹಿಳೆಯರಿಂದ ಶ್ರೀ ಅನ್ನಪೂರ್ಣೇಶ್ವರಿ ಸ್ವ- ಸಹಾಯ ಸಂಘವನ್ನು ಉದ್ಘಾಟನೆ ಮಾಡುವ ಮೂಲಕ ಮಹಿಳೆಯರು ಈ ಸಂಘದಡಿ ತಾವು ಸಾಲ- ಸೌಲಭ್ಯಗಳನ್ನು ಪಡೆದು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗುಡಿ ಈ ಸಂಘದ ಸೌಲಭ್ಯ ಪಡೆಯುವ ಜೊತೆಗೆ ಉತ್ತಮ ಹಣಕಾಸಿನ ವ್ಯವಹಾರ

ಮಾಡಬೇಕೆಂದು ಕೃಷ್ಣಾ ರಾಮದುರ್ಗ ಅವರು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾ ಅಧಿಕಾರಿ ಶ್ರೀ ಜೀ,ಜನಾರ್ಧನ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಿ ಈ ಸಂಘ ಉತ್ತಮ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದು ಸಕಾಲಕ್ಕೆ ಮರು ಪಾವತಿ ಮಾಡಿ ಈ ಸಂಘವನ್ನು ಬೆಳೆಸಿ ಎಂದು ಸಲಹೆ ನೀಡಿದರು. ಈ ಸಂಘದ ಗೌರವ ಅಧ್ಯಕ್ಷ ಕೃಷ್ಣಾ ರಾಮದುರ್ಗ, ಮುಖ್ಯಸ್ಥರು ಶ್ರೀಮತಿ ಭಾರತಿ ಎಫ್,ಎಸ್ , ಹಾಗೂ ದೇವರಾಜ ಕಮತಗಿ ,ಇಬ್ರಾಹಿಂ ಮಾಗಿ, ಶಿವುಕುಮಾರ ರಾಮದುರ್ಗ ,ಮಂಜುನಾಥ ರಾಮದುರ್ಗ, ಶ್ರೀಮತಿ ಶಿಲಾ ರಾಮದುರ್ಗ, ಶ್ರೀಮತಿ ಶಿವಲಿಲಾ,ಹರಗಬಲ್ಲ,ಶ್ರೀಮತಿ ಲತಾ ಎಮ್,ರಾಮದುರ್ಗ, ಉಪಸ್ಥಿತಿ ಇದ್ದರು.