
ಅಮೀನಗಡ :
ಪೋಲಿಸ್ ಇಲಾಖೆಯ ಇಮೇಜ್ ಅನ್ನು ಹಾಳು ಮಾಡುವವರು ಯಾರೇ ಆಗಿರಲಿ ಅಂತವರ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಈ ಪೊಲೀಸ್ ಇಲಾಖೆ ಕೆಲಸ ಇದು ಟಿಮ್ ವರ್ಕ್ ಈ ಸಮಾಜದ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು. ಎಂದು ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣೆಗೆ ಇಂದು ಬೇಟಿ ನೀಡಿದ ಸಂದರ್ಭದಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಾನ್ಯ ಅಮರನಾಥ ರೆಡ್ಡಿ ಅವರು ಮಾತನಾಡಿದರು.
ಹುನಗುಂದ ತಾಲೂಕಿಗೆ ಪ್ರಥಮ ಬಾರಿಗೆ ಬೇಟಿ ನೀಡಿದ ಎಸ,ಪಿ, ಅಮರನಾಥ ರೆಡ್ಡಿ ಅವರನ್ನು ಠಾಣಾಧಿಕಾರಿ ಶ್ರೀ ಶಿವಾನಂದ ಸಿಂಘನವರ ಗೌರವ ಪೂರ್ವಕವಾಗಿ ಗೌರವ ವಂದನೆ ಸಲ್ಲಿಸಿ ಸ್ವಾಗತಿಸಿದರು.
ನಂತರ ಪೊಲೀಸ್ ಠಾಣೆಯ ಸ್ವಂತ ಕಟ್ಟ ಹಾಗೂ ವಿಸ್ತೀರ್ಣ, ಮತ್ತು ಸೀಜ್ ಮಾಡಿದ ವಾಹಣಗಳ ಮಾಹಿತಿ ದಾಖಲೆಗಳ ಬಗ್ಗೆ ಮಾಹಿತಿ ಪಡೆದರು, ಪೊಲೀಸ್ ಪೊಲೀಸ್ ಸಿಬ್ಬಂದಿಗಳ ವಸತಿ ಗೃಹ, ಮತ್ತು ಮೈದಾನ, ಹೀಗೆ ಠಾಣೆಯ ಅನೇಕ ಮಾಹಿತಿ ಕುಂದು ಕೊರತೆಗಳ ಬಗ್ಹೆ ಮಾಹಿತಿ ಪಡೆದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇನ್ಮುಂದೆ ಈ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಇಮೇಜ್ ಯಾರು ಹಾಳು ಮಾಡುತ್ತಾರೆ, ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಮತ್ತು ರೌಡಿ ಸೀಟರ್ ಗಳು ಮತ್ತೆ ಬಾಲ ಬಿಚ್ಚುವಂತಿಲ್ಲ ಈಗಾಗಲೇ ಅವರುಗಳ ಮಾಹಿತಿ ಪಡೆಯುತ್ತಿದ್ದೇನೆ. ಅವರು ಜಿಲ್ಲೆಯಿಂದ ಗಡಿ ಪಾರಾಗಬೇಕು ಪುಡಾರಿಗಳ ಪುಂಡಾಡಿಕೆ, ಸಮಾಜದಲ್ಲಿ ಇಸ್ಪೇಟ್ ಗ್ಲ್ಯಾಮಿಂಗ್
,ಓಸಿ,ಮಟಕಾ, ಎಲ್ಲಾ ಧಂದೆಕೋರರು ಬಾಲ ಬಿಜ್ಜುವಂತಿಲ್ಲ ಯಾರಾದರೂ ಸಮಾಜದಲ್ಲಿ ಶಾಂತಿ ಭಂಗ ಮಾಡಲು ,ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ, ಅವರು ಎಷ್ಟೇ ಪ್ರಭಾವಾವಿಗಳು ಆಗಿದ್ದರು ಸಹ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ, ಎಂದು ಖಡಕ್ ವಾನ್೯ ನೀಡಿದರು. ಹಿಂದಿನ SP ಜಯಪ್ರಕಾಶ್ ಅವರನ್ನು ಬಿಳ್ಕೋಟ ನಂತರ ೧೨ ಗಂಟೆ ಒಳಗೆ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ಮಾಡಿ ಹಲವರ ಮಾಹಿತಿ ಹಾಗೂ ಠಾಣೆಯ ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಂತಹ ಕ್ರಿಯಾಶೀಲ ಅಧಿಕಾರಿಗಳ ಅವಶ್ಯಕತೆ ಇದ್ದು ಉತ್ತಮ ಕರ್ತವ್ಯವನ್ನು ನಿಭಾಯಿಸಲಿ ಎಂದು ನಮ್ಮ ಪತ್ರಿಕೆ ಹಾರೈಸುತ್ತದೆ.
ವರದಿ : ದುರ್ಗಾಪ್ರಸಾದ ಆರ್ ಭಜಂತ್ರಿ